Gold Price on 1st October 2022 | ಬೆಂಗಳೂರು: ಭಾರತದಲ್ಲಿ ನಿನ್ನೆ ಏರಿಕೆಯಾಗಿದ್ದ ಚಿನ್ನದ ಬೆಲೆ (Gold Rate) ಇಂದು 170 ರೂ. ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ (Silver Price) ಕೂಡ ಇಂದು 100 ರೂ. ಕುಸಿತವಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಇಳಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 46,650 ರೂ. ಇದ್ದುದು ಇಂದು 46,500 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,900 ರೂ. ಇದ್ದುದು 50,730 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 46,900 ರೂ. ಮುಂಬೈ- 46,500 ರೂ, ದೆಹಲಿ- 45,650 ರೂ, ಕೊಲ್ಕತ್ತಾ- 46,500 ರೂ, ಬೆಂಗಳೂರು- 46,550 ರೂ, ಹೈದರಾಬಾದ್- 46,500 ರೂ, ಕೇರಳ- 46,500 ರೂ, ಪುಣೆ- 46,530 ರೂ, ಮಂಗಳೂರು- 46,550 ರೂ, ಮೈಸೂರು- 46,550 ರೂ. ಇದೆ.
ಇದನ್ನೂ ಓದಿ: Gold Price Today: ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಹೀಗಿದೆ; ಬೆಳ್ಳಿ ದರ 400 ರೂ. ಕುಸಿತ
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 51,160 ರೂ, ಮುಂಬೈ- 50,730 ರೂ, ದೆಹಲಿ- 50,890 ರೂ, ಕೊಲ್ಕತ್ತಾ- 50,730 ರೂ, ಬೆಂಗಳೂರು- 50,730 ರೂ, ಹೈದರಾಬಾದ್- 50,730 ರೂ, ಕೇರಳ- 50,730 ರೂ, ಪುಣೆ- 50,760 ರೂ, ಮಂಗಳೂರು- 50,760 ರೂ, ಮೈಸೂರು- 50,760 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಬೆಳ್ಳಿ ದರ ಇಂದು 100 ರೂ. ಕುಸಿತವಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 57,000 ರೂ. ಇದ್ದುದು ಇಂದು 56,900 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 62,000 ರೂ, ಮೈಸೂರು- 62,000 ರೂ., ಮಂಗಳೂರು- 62,000 ರೂ., ಮುಂಬೈ- 56,900 ರೂ, ಚೆನ್ನೈ- 62,000 ರೂ, ದೆಹಲಿ- 56,900 ರೂ, ಹೈದರಾಬಾದ್- 62,000 ರೂ, ಕೊಲ್ಕತ್ತಾ- 56,900 ರೂ. ಆಗಿದೆ.