Gold Price Today: ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಹೀಗಿದೆ; ಬೆಳ್ಳಿ ದರ 400 ರೂ. ಕುಸಿತ

ಬೆಳ್ಳಿ ದರ ಇಂದು 400 ರೂ. ಕುಸಿತವಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 55,400 ರೂ. ಇದ್ದುದು ಇಂದು 55,000 ರೂ. ಆಗಿದೆ.

Gold Price Today: ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಹೀಗಿದೆ; ಬೆಳ್ಳಿ ದರ 400 ರೂ. ಕುಸಿತ
ಸಾಂದರ್ಭಿಕ ಚಿತ್ರ
TV9kannada Web Team

| Edited By: Sushma Chakre

Sep 29, 2022 | 6:35 AM

Gold Price on 29th September 2022 | ಬೆಂಗಳೂರು: ಭಾರತದಲ್ಲಿ 3 ದಿನಗಳ ಬಳಿಕ ಕುಸಿತವಾಗಿದ್ದ ಚಿನ್ನದ ಬೆಲೆ (Gold Rate) ಇಂದು ಮತ್ತೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಳ್ಳಿ ಬೆಲೆಯಲ್ಲಿ (Silver Price) ಕೂಡ ಇಂದು 400 ರೂ. ಇಳಿಕೆಯಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಯಥಾಸ್ಥಿತಿಯಲ್ಲಿದೆ. 2 ದಿನಗಳ ಹಿಂದೆ 22 ಕ್ಯಾರೆಟ್ ಚಿನ್ನದ ಬೆಲೆ 46,000 ರೂ. ಇದ್ದುದು 45,800 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,200 ರೂ. ಇದ್ದುದು 49,970 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 46,250 ರೂ. ಮುಂಬೈ- 45,800 ರೂ, ದೆಹಲಿ- 45,950 ರೂ, ಕೊಲ್ಕತ್ತಾ- 45,800 ರೂ, ಬೆಂಗಳೂರು- 45,850 ರೂ, ಹೈದರಾಬಾದ್- 45,800 ರೂ, ಕೇರಳ- 45,800 ರೂ, ಪುಣೆ- 45,830 ರೂ, ಮಂಗಳೂರು- 45,850 ರೂ, ಮೈಸೂರು- 45,850 ರೂ. ಇದೆ.

ಇದನ್ನೂ ಓದಿ: Gold Price Today: 3 ದಿನಗಳಿಂದ ಯಥಾಸ್ಥಿತಿಯಲ್ಲಿದೆ ಚಿನ್ನದ ಬೆಲೆ; ಇಂದಿನ ಬೆಳ್ಳಿ ದರ ಹೀಗಿದೆ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 50,450 ರೂ, ಮುಂಬೈ- 49,970 ರೂ, ದೆಹಲಿ- 50,130 ರೂ, ಕೊಲ್ಕತ್ತಾ- 49,970 ರೂ, ಬೆಂಗಳೂರು- 50,020 ರೂ, ಹೈದರಾಬಾದ್- 49,970 ರೂ, ಕೇರಳ- 49,970 ರೂ, ಪುಣೆ- 50,000 ರೂ, ಮಂಗಳೂರು- 50,020 ರೂ, ಮೈಸೂರು- 50,020 ರೂ. ಆಗಿದೆ.

ಇಂದಿನ ಬೆಳ್ಳಿಯ ದರ: ಬೆಳ್ಳಿ ದರ ಇಂದು 400 ರೂ. ಕುಸಿತವಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 55,400 ರೂ. ಇದ್ದುದು ಇಂದು 55,000 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 60,000 ರೂ, ಮೈಸೂರು- 60,000 ರೂ., ಮಂಗಳೂರು- 60,000 ರೂ., ಮುಂಬೈ- 55,000 ರೂ, ಚೆನ್ನೈ- 60,000 ರೂ, ದೆಹಲಿ- 55,000 ರೂ, ಹೈದರಾಬಾದ್- 60,000 ರೂ, ಕೊಲ್ಕತ್ತಾ- 55,000 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada