Gold Price Today: ಮತ್ತೆ 1,500 ರೂ. ಏರಿಕೆಯಾದ ಬೆಳ್ಳಿ ದರ; ಚಿನ್ನದ ಬೆಲೆ ಕೊಂಚ ಹೆಚ್ಚಳ

Silver Price Hike: ಬೆಳ್ಳಿ ಬೆಲೆ ನಿನ್ನೆ 1,900 ರೂ. ಹೆಚ್ಚಳವಾಗುವ ಮೂಲಕ ದಾಖಲೆ ನಿರ್ಮಿಸಿತ್ತು. ಇಂದು ಮತ್ತೆ ಬೆಳ್ಳಿ ದರ ಗಗನಕ್ಕೇರಿದ್ದು, 1,500 ರೂ. ಏರಿಕೆಯಾಗಿದೆ.

Gold Price Today: ಮತ್ತೆ 1,500 ರೂ. ಏರಿಕೆಯಾದ ಬೆಳ್ಳಿ ದರ; ಚಿನ್ನದ ಬೆಲೆ ಕೊಂಚ ಹೆಚ್ಚಳ
ಸಾಂದರ್ಭಿಕ ಚಿತ್ರ
Edited By:

Updated on: Jul 30, 2022 | 5:54 AM

Gold Price on 30 July 2022 | ಬೆಂಗಳೂರು: ಭಾರತದಲ್ಲಿ ಕುಸಿತವಾಗಿದ್ದ ಚಿನ್ನದ ಬೆಲೆ (Gold Rate) ನಿನ್ನೆ ದಿಢೀರೆಂದು 700 ರೂ. ಏರಿಕೆ ಕಂಡಿತ್ತು. ಇಂದು ಮತ್ತೆ ಬಂಗಾರದ ಬೆಲೆ 110 ರೂ. ಹೆಚ್ಚಳವಾಗಿದೆ. ಬೆಳ್ಳಿಯ ಬೆಲೆ (Silver Price) ಇಂದು 1,500 ರೂ. ಏರಿಕೆಯಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,100 ರೂ. ಇದ್ದುದು 47,200 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,380 ರೂ. ಇದ್ದುದು 51,490 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,050 ರೂ. ಮುಂಬೈ- 47,200 ರೂ, ದೆಹಲಿ- 47,350 ರೂ, ಕೊಲ್ಕತ್ತಾ- 47,200 ರೂ, ಬೆಂಗಳೂರು- 47,250 ರೂ, ಹೈದರಾಬಾದ್- 47,200 ರೂ, ಕೇರಳ- 47,200 ರೂ, ಪುಣೆ- 47,230 ರೂ, ಮಂಗಳೂರು- 47,250 ರೂ, ಮೈಸೂರು- 47,250 ರೂ. ಇದೆ.

ಇದನ್ನೂ ಓದಿ: Gold Price Today: ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ 320 ರೂ. ಕುಸಿತ; ಬೆಳ್ಳಿ ದರ 400 ರೂ. ಇಳಿಕೆ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,420 ರೂ, ಮುಂಬೈ- 51,490 ರೂ, ದೆಹಲಿ- 51,660 ರೂ, ಕೊಲ್ಕತ್ತಾ- 51,490 ರೂ, ಬೆಂಗಳೂರು- 51,540 ರೂ, ಹೈದರಾಬಾದ್- 51,490 ರೂ, ಕೇರಳ- 51,490 ರೂ, ಪುಣೆ- 51,570 ರೂ, ಮಂಗಳೂರು- 51,540 ರೂ, ಮೈಸೂರು- 51,540 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆ ನಿನ್ನೆ 1,900 ರೂ. ಹೆಚ್ಚಳವಾಗುವ ಮೂಲಕ ದಾಖಲೆ ನಿರ್ಮಿಸಿತ್ತು. ಇಂದು ಮತ್ತೆ ಬೆಳ್ಳಿ ದರ ಗಗನಕ್ಕೇರಿದ್ದು, 1,500 ರೂ. ಏರಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಯ ದರ 56,500 ರೂ. ಇದ್ದುದು ಇಂದು 58,000 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 62,300 ರೂ, ಮೈಸೂರು- 62,300 ರೂ., ಮಂಗಳೂರು- 62,300 ರೂ., ಮುಂಬೈ- 58,000 ರೂ, ಚೆನ್ನೈ- 62,300 ರೂ, ದೆಹಲಿ- 58,000 ರೂ, ಹೈದರಾಬಾದ್- 62,300 ರೂ, ಕೊಲ್ಕತ್ತಾ- 58,000 ರೂ. ಆಗಿದೆ.

TV9 Web

TV9 Kannada

Read More
Loading...
Unable to load recommendations.
Follow Us