Gold Price Today: ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್; 3 ದಿನಗಳಿಂದ ಬದಲಾಗಿಲ್ಲ ಬಂಗಾರದ ಬೆಲೆ

Silver Price Today: ಭಾರತದಲ್ಲಿ ಚಿನ್ನದ ಬೆಲೆ ಇಂದು ಯಥಾಸ್ಥಿತಿಯಲ್ಲಿದೆ. 3 ದಿನಗಳ ಹಿಂದೆ 22 ಕ್ಯಾರೆಟ್ ಚಿನ್ನದ ಬೆಲೆ 47,650 ರೂ. ಇದ್ದುದು 47,550 ರೂ. ಆಗಿದೆ.

Gold Price Today: ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್; 3 ದಿನಗಳಿಂದ ಬದಲಾಗಿಲ್ಲ ಬಂಗಾರದ ಬೆಲೆ
ಸಾಂದರ್ಭಿಕ ಚಿತ್ರ
Edited By:

Updated on: Aug 09, 2022 | 6:39 AM

Gold Price on 9 August 2022 | ಬೆಂಗಳೂರು: ಭಾರತದಲ್ಲಿ ಕಳೆದೆರಡು ದಿನಗಳಿಂದ ಕುಸಿತವಾಗಿದ್ದ ಚಿನ್ನದ ಬೆಲೆ (Gold Rate) ಇಂದು ಕೂಡ ಯಥಾಸ್ಥಿತಿಯಲ್ಲಿದೆ. ಬೆಳ್ಳಿಯ ಬೆಲೆ (Silver Price) ಕೂಡ ಇಂದು ಒಂದೇ ರೀತಿಯಲ್ಲಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಯಥಾಸ್ಥಿತಿಯಲ್ಲಿದೆ. 3 ದಿನಗಳ ಹಿಂದೆ 22 ಕ್ಯಾರೆಟ್ ಚಿನ್ನದ ಬೆಲೆ 47,650 ರೂ. ಇದ್ದುದು 47,550 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,980 ರೂ. ಇದ್ದುದು 51,870 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,500 ರೂ. ಮುಂಬೈ- 47,550 ರೂ, ದೆಹಲಿ- 47,700 ರೂ, ಕೊಲ್ಕತ್ತಾ- 47,550 ರೂ, ಬೆಂಗಳೂರು- 47,600 ರೂ, ಹೈದರಾಬಾದ್- 47,550 ರೂ, ಕೇರಳ- 47,550 ರೂ, ಪುಣೆ- 47,580 ರೂ, ಮಂಗಳೂರು- 47,600 ರೂ, ಮೈಸೂರು- 47,600 ರೂ. ಇದೆ.

ಇದನ್ನೂ ಓದಿ: Gold Price Today: ಚಿನ್ನದ ಬೆಲೆ ಇಂದು 430 ರೂ. ಕುಸಿತ; ಬೆಂಗಳೂರು ಸೇರಿ ಹಲವೆಡೆ ಬೆಳ್ಳಿ ದರ 800 ರೂ. ಇಳಿಕೆ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,900 ರೂ, ಮುಂಬೈ- 51,870 ರೂ, ದೆಹಲಿ- 52,030 ರೂ, ಕೊಲ್ಕತ್ತಾ- 51,870 ರೂ, ಬೆಂಗಳೂರು- 51,930 ರೂ, ಹೈದರಾಬಾದ್- 51,870 ರೂ, ಕೇರಳ- 51,870 ರೂ, ಪುಣೆ- 51,900 ರೂ, ಮಂಗಳೂರು- 51,930 ರೂ, ಮೈಸೂರು- 51,930 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆ ಕೂಡ ಇಂದು ಯಥಾಸ್ಥಿತಿಯಲ್ಲಿದೆ. ಭಾರತದಲ್ಲಿ 3 ದಿನಗಳ ಹಿಂದೆ 1 ಕೆಜಿ ಬೆಳ್ಳಿ ಬೆಲೆ 58,200 ರೂ. ಇದ್ದುದು ಇಂದು 57,400 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 63,000 ರೂ, ಮೈಸೂರು- 63,000 ರೂ., ಮಂಗಳೂರು- 63,000 ರೂ., ಮುಂಬೈ- 57,400 ರೂ, ಚೆನ್ನೈ- 63,000 ರೂ, ದೆಹಲಿ- 57,400 ರೂ, ಹೈದರಾಬಾದ್- 63,000 ರೂ, ಕೊಲ್ಕತ್ತಾ- 57,400 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us