Gold Silver Price Today: ಬೆಂಗಳೂರು: ಚಿನ್ನದ ಆಭರಣ ತೊಟ್ಟರೆ ಮಹಿಳೆಯರಿಗೆ ಎಲ್ಲಿಲ್ಲದ ಖುಷಿ, ಸಂತೋಷ. ಕೇವಲ ಮಹಿಳೆಯರಿಗೆ ಮಾತ್ರ ಅಲ್ಲ ಪುರುಷರಿಗೂ ಕೂಡಾ ಚಿನ್ನದ ಉಂಗುರದ ಜತೆಗೆ ವಿವಿಧ ವಿನ್ಯಾಸದ ಆಭರಣಗಳನ್ನು ತೊಡಬೇಕು ಎಂಬ ಆಸೆ ಇರುವುದು ಸಹಜ. ಅದರಂತೆಯೇ ಕಳೆದ ಮೂರು ದಿನಗಳಿಂದ ಚಿನ್ನದ (Gold Price) ದರ ಇಳಿಕೆಯತ್ತ ಸಾಗುತ್ತಿದ್ದು, ಗ್ರಾಹಕರಿಗೆ ಹೆಚ್ಚು ಖುಷಿಯನ್ನು ನೀಡಿದೆ. ಇಂದು (ಆಗಸ್ಟ್ 9, ಸೋಮವಾರ ) ಕೂಡ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದೆ. ಆಭರಣ ಖರೀದಿಸಬೇಕು ಎಂದು ಯೋಚಿಸಿದ್ದರೆ ಇಂದು ನಿಮ್ಮೂರಿನಲ್ಲಿ ಚಿನ್ನದ ದರ ಎಷ್ಟಿದೆ ಪರಿಶೀಲಿಸಿ. ಆಭರಣಗಳ ದರ ವಿವರ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,840 ರೂಪಾಯಿ ಇದೆ. ಅದೇ ರೀತಿ 100 ಗ್ರಾಂ ಚಿನ್ನದ ದರ 4,38,400 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,830 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,78,300 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿ ಇಳಿಕೆ ಕಂಡು ಬಂದಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,390 ರೂಪಾಯಿಗೆ ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,43,900 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿ ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,430 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,84,300 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಏರಿಳಿತದಲ್ಲಿ ಸುಮಾರು 100 ರೂಪಾಯಿ ಇಳಿಕೆ ಕಂಡು ಬಂದಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,990 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,59,900 ರೂಪಾಯಿ ಆಗಿದೆ. ಸುಮಾರು 100 ರೂಪಾಯಿ ಇಳಿಕೆ ಕಂಡು ಬಂದಿದೆ. ಅದೇ ರೀತಿ, 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,170 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 5,01,700 ರೂಪಾಯಿ ಆಗಿದೆ. 100 ರೂಪಾಯಿಯಷ್ಟು ಇಳಿಕೆಯಾಗಿದೆ.
ದೆಹಲಿ, ಮುಂಬೈ, ಹೈದರಾಬಾದ್, ಕೇರಳ, ಬೆಂಗಳೂರು, ಜೈಪುರ, ಕೋಲ್ಕತ್ತಾ, ಚೆನ್ನೈ ಹೀಗೆ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳೆರಡೂ ಇಳಿಕೆ ಕಂಡಿದೆ. ಕಳೆದ ಮೂರು ದಿನಗಳಿಂದಲೂ ಸಹ ಆಭರಣ ಇಳಿಕೆಯತ್ತ ಸಾಗಿರುವುದು ಆಭರಣ ಖರೀದಿಸುವವರಿಗೆ ಖುಷಿ ನೀಡಿದೆ. ಅದೆಷ್ಟೋ ವರ್ಷಗಳಿಂದ ಚಿನ್ನಾಭರಣ ಖರೀದಿಸಲೆಂದು ಹಣ ಕೂಡಿಟ್ಟಿರುತ್ತೀರಿ, ಇಂದಿನ ಮಾರುಕಟ್ಟೆಯಲ್ಲಿ ದರ ವಿವರ ಗಮನಿಸಿ ಸರಿ ಹೊಂದುವುದಾದರೆ ಚಿನ್ನ ಕೊಳ್ಳುವ ಕುರಿತು ಯೋಚಿಸಿ.
ಬೆಳ್ಳಿ ದರ ವಿವರ
ಬೆಳ್ಳಿ ದರ ಇಂದು ಸ್ಥಿರವಾಗಿದ್ದು, ಕೆಜಿ ಬೆಳ್ಳಿಗೆ 65,000 ರೂಪಾಯಿ ನಿಗದಿಯಾಗಿದೆ. ಚೆನ್ನೈನಲ್ಲಿ ಕೆಜಿ ಬೆಳ್ಳಿಗೆ 70,200 ರೂಪಾಯಿ ನಿಗದಿಯಾಗಿದ್ದು, ದೆಹಲಿಯಲ್ಲಿ ಕೆಜಿ ಬೆಳ್ಳಿಗೆ 65,000 ರೂಪಾಯಿ ನಿಗದಿಯಾಗಿದೆ. ಹೈದರಾಬಾದ್ನಲ್ಲಿ ಕೆಜಿ ಬೆಳ್ಳಿ ಬೆಲೆ 65,000 ರೂಪಾಯಿ ನಿಗದಿಯಾಗಿದೆ.
ಇದನ್ನೂ ಓದಿ:
Gold Rate Today: ಇಂದು ಇಳಿಕೆ ಕಂಡ ಚಿನ್ನದ ದರ, ಬೆಳ್ಳಿ ಬೆಲೆಯಲ್ಲಿ ಏರಿಕೆ; ನಿಮ್ಮೂರಿನಲ್ಲಿ ಆಭರಣದ ಬೆಲೆ ಎಷ್ಟಿದೆ?
Published On - 7:33 am, Mon, 9 August 21