Gold Price Today: ಚಿನ್ನದ ದರ 40 ರೂಪಾಯಿ ಇಳಿಕೆ, ಬೆಳ್ಳಿ ದರವೂ ಕುಸಿತ

ಕಳೆದ ಕೆಲವು ದಿನಗಳಿಂದ ಏರಿಳಿತದ ಹಾದಿಯಲ್ಲಿರುವ ಚಿನ್ನದ ಬೆಲೆ ಮಂಗಳವಾರದ ವಹಿವಾಟಿನಲ್ಲಿ ಮತ್ತೆ ಇಳಿಕೆ ಕಂಡಿದೆ. ಬೆಳ್ಳಿ ದರ ಕೂಡ ಮತ್ತೆ ಇಳಿಮುಖವಾಗಿ ಸಾಗಿದೆ.

Gold Price Today: ಚಿನ್ನದ ದರ 40 ರೂಪಾಯಿ ಇಳಿಕೆ, ಬೆಳ್ಳಿ ದರವೂ ಕುಸಿತ
ಚಿನ್ನದ ದರ (ಸಾಂದರ್ಭಿಕ ಚಿತ್ರ)
Edited By:

Updated on: Oct 19, 2022 | 6:00 AM

Gold Silver Price on 19th October 2022 | ಬೆಂಗಳೂರು: ಕಳೆದ ಕೆಲವು ದಿನಗಳಿಂದ ಏರಿಳಿತದ ಹಾದಿಯಲ್ಲಿರುವ ಚಿನ್ನದ ಬೆಲೆ (Gold Price)  ಮಂಗಳವಾರದ ವಹಿವಾಟಿನಲ್ಲಿ ಮತ್ತೆ ಇಳಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ 40 ರೂ. ಕುಸಿತ ದಾಖಲಿಸಿದೆ. ಸೋಮವಾರದ ವಹಿವಾಟಿನಲ್ಲಿ ಸುಮಾರು 5000 ರೂ. ಏರಿಕೆ ದಾಖಲಿಸಿದ್ದ ಬೆಳ್ಳಿ ದರ (Silver Price) ಮತ್ತೆ ಇಳಿಮುಖವಾಗಿ ಸಾಗಿದೆ. ಒಂದು ಕೆಜಿ ಬೆಳ್ಳಿ ದರ 3,900 ರೂ. ಇಳಿಕೆಯಾಗಿದೆ. ದೇಶದ ಪ್ರಮುಖ ನಗರಗಳ ಚಿನ್ನ ಹಾಗೂ ಬೆಳ್ಳಿ ದರದ ಮಾಹಿತಿ ಇಲ್ಲಿದೆ;

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 400 ರೂಪಾಯಿ ಇಳಿಕೆಯಾಗಿದ್ದು, 46,420 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 50,680 ರೂ. ಇದ್ದುದು 50,640 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 3,900 ರೂಪಾಯಿ ಇಳಿಕೆಯಾಗಿ 56,600 ರೂಪಾಯಿ ಆಗಿದೆ.

ಇದನ್ನೂ ಓದಿ: Gold Price Today: ಬೆಳ್ಳಿ ದರದಲ್ಲಿ ಭಾರಿ ಹೆಚ್ಚಳ, ಇಂದಿನ ಚಿನ್ನದ ಬೆಲೆ ಎಷ್ಟಿದೆ ನೋಡಿ

ಇದನ್ನೂ ಓದಿ
India Post Payments Bank: ಅಂಚೆ ಇಲಾಖೆಯಿಂದ ಕೇವಲ 399 ರೂ.ಗೆ ಅಪಘಾತ ವಿಮೆ, 10 ಲಕ್ಷ ರೂ. ಕವರೇಜ್
Recession: ಸಿಇಒಗಳಿಂದ ಆರ್ಥಿಕ ಹಿಂಜರಿತ ಮುನ್ಸೂಚನೆ, ಉದ್ಯೋಗಿಗಳಿಗೆ ಕೆಲಸ ಕಳೆದುಕೊಳ್ಳುವ ಆತಂಕ
Gujarat Elections: ಮತದಾರರ ಓಲೈಕೆಗೆ ಮುಂದಾದ ಬಿಜೆಪಿ; ಸಿಎನ್​ಜಿ, ಅಡುಗೆ ಅನಿಲದ ಮೇಲಿನ ತೆರಿಗೆ ಕಡಿತ, 2 ಸಿಲಿಂಡರ್ ಉಚಿತ
Petrol Price on October 18: ಬೆಂಗಳೂರು, ಮುಂಬೈ, ದೆಹಲಿ ಸೇರಿ ಪ್ರಮುಖ ನಗರಗಳ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು?

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,050 ರೂ. ಮುಂಬೈ- 46,420 ರೂ, ದೆಹಲಿ- 46,570 ರೂ, ಕೊಲ್ಕತ್ತಾ- 46,420 ರೂ, ಬೆಂಗಳೂರು- 46,470 ರೂ, ಹೈದರಾಬಾದ್- 46,420 ರೂ, ಕೇರಳ- 46,420 ರೂ, ಪುಣೆ- 46,450 ರೂ, ಮಂಗಳೂರು- 46,470 ರೂ, ಮೈಸೂರು- 46,470 ರೂ. ಆಗಿದೆ.

24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:

ಚೆನ್ನೈ- 51,310 ರೂ, ಮುಂಬೈ- 50,640 ರೂ, ದೆಹಲಿ- 50,790 ರೂ, ಕೊಲ್ಕತ್ತಾ- 50,640 ರೂ, ಬೆಂಗಳೂರು- 50,710 ರೂ, ಹೈದರಾಬಾದ್- 50,640 ರೂ, ಕೇರಳ- 50,640 ರೂ, ಪುಣೆ- 50,670 ರೂ, ಮಂಗಳೂರು- 50,710 ರೂ, ಮೈಸೂರು- 50,710 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 56,600 ರೂ, ಮೈಸೂರು- 61,800 ರೂ., ಮಂಗಳೂರು- 61,800 ರೂ., ಮುಂಬೈ- 56,600 ರೂ, ಚೆನ್ನೈ- 61,800 ರೂ, ದೆಹಲಿ- 56,600 ರೂ, ಹೈದರಾಬಾದ್- 61,800 ರೂ, ಕೊಲ್ಕತ್ತಾ- 56,600 ರೂ. ಆಗಿದೆ.