
ಬೆಂಗಳೂರು, ಜನವರಿ 29: ಚಿನ್ನ ಮತ್ತು ಬೆಳ್ಳಿ ಬೆಲೆ ಗುರುವಾರ ಅಕ್ಷರಶಃ ಗಗನ ಮುಟ್ಟಿದೆ. 100 ಗ್ರಾಮ್ ಚಿನ್ನದ ಬೆಲೆಯಲ್ಲಿ (gold rate) ಬರೋಬ್ಬರಿ 12,550 ರೂನಷ್ಟು ಏರಿಕೆ ಆಗಿರುವುದು ಗಮನಾರ್ಹ. ಇತ್ತೀಚಿನ ವರ್ಷಗಳಲ್ಲೇ ಒಂದೇ ದಿನದಲ್ಲಿ ಚಿನ್ನ ಕಂಡ ಅತಿಹೆಚ್ಚು ಏರಿಕೆ ಇದು. ಆಭರಣ ಚಿನ್ನದ ಬೆಲೆ ಮೊದಲ ಬಾರಿಗೆ 16,000 ರೂ ಗಡಿ ದಾಟಿದೆ. ಅಪರಂಜಿ ಚಿನ್ನದ ಬೆಲೆಯೂ 17,000 ರೂ ಮೈಲಿಗಲ್ಲು ದಾಟಿ 18,000 ರೂನತ್ತ ಸಾಗುತ್ತಿದೆ. ಬೆಳ್ಳಿ ಬೆಲೆ ಇನ್ನೂ ದೊಡ್ಡ ಜಿಗಿತ ಕಾಣುತ್ತಿದೆ. ಒಂದೇ ದಿನ ಒಂದು ಗ್ರಾಮ್ ಬೆಳ್ಳಿ ಬೆಲೆಯಲ್ಲಿ 30 ರೂ ಜಂಪ್ ಆಗಿದೆ. ಬೆಂಗಳೂರಿನಲ್ಲಿ ಇದರ ಬೆಲೆ ಮೊದಲ ಬಾರಿಗೆ 400 ರೂ ಗಡಿ ದಾಟಿ 410 ರೂಗೆ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,63,950 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,78,850 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 41,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,63,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 41,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 42,500 ರೂ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
ಇದನ್ನೂ ಓದಿ: ಕೇಂದ್ರ ಬಜೆಟ್ 2026: ಹೊಸ ಟ್ಯಾಕ್ಸ್ ರೆಜಿಮ್ನಲ್ಲಿ ಇನ್ನಷ್ಟು ಡಿಡಕ್ಷನ್ ಕೊಟ್ಟು, ಹಳೆಯ ಟ್ಯಾಕ್ಸ್ ಸಿಸ್ಟಂ ನಿಲ್ಲಿಸಲಾಗುತ್ತಾ?
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ