Gold Rate Today Bangalore: 10 ಗ್ರಾಮ್ ಚಿನ್ನದ ಬೆಲೆ 2 ದಿನದಲ್ಲಿ 2,750 ರೂ ಏರಿಕೆ

Bullion Market 2026 January 6th: ಇಂದು ಮಂಗಳವಾರ ಚಿನ್ನ, ಬೆಳ್ಳಿ ಬೆಲೆಗಳು ಏರಿವೆ. ಚಿನ್ನದ ಬೆಲೆ 130 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 6 ರೂ ಏರಿದೆ. ಆಭರಣ ಚಿನ್ನದ ಬೆಲೆ 12,595 ರೂನಿಂದ 12,725 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 13,882 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 253 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 271 ರೂ ಆಗಿದೆ.

Gold Rate Today Bangalore: 10 ಗ್ರಾಮ್ ಚಿನ್ನದ ಬೆಲೆ 2 ದಿನದಲ್ಲಿ 2,750 ರೂ ಏರಿಕೆ
ಚಿನ್ನ

Updated on: Jan 06, 2026 | 10:56 AM

ಬೆಂಗಳೂರು, ಜನವರಿ 6: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮಂಗಳವಾರೂ ಭರ್ಜರಿ ಏರಿಕೆ ಕಂಡಿವೆ. ನಿನ್ನೆ ಗ್ರಾಮ್​ಗೆ 145 ರೂ ಏರಿದ್ದ ಚಿನ್ನದ ಬೆಲೆ (Gold Rate) ಇವತ್ತು 130 ರೂ ಹೆಚ್ಚಿದೆ. ಎರಡು ದಿನದಲ್ಲಿ 275 ರೂ ಬೆಲೆ ಏರಿಕೆ ಆಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆ ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ ಕೂಡ ಭರ್ಜರಿ ಹೆಚ್ಚಳ ಕಂಡಿದೆ. ನಿನ್ನೆ ಆರು ರೂ ಹೆಚ್ಚಿದ್ದ ಅದರ ಬೆಲೆ ಇಂದೂ ಕೂಡ ಅಷ್ಟೇ ಪ್ರಮಾಣದಲ್ಲಿ ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,27,250 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,38,820 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,27,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,300 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,100 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 6ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,882 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,725 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,412 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 253 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,882 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,725 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 253 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,725 ರೂ
  • ಚೆನ್ನೈ: 12,830 ರೂ
  • ಮುಂಬೈ: 12,725 ರೂ
  • ದೆಹಲಿ: 12,740 ರೂ
  • ಕೋಲ್ಕತಾ: 12,725 ರೂ
  • ಕೇರಳ: 12,725 ರೂ
  • ಅಹ್ಮದಾಬಾದ್: 12,730 ರೂ
  • ಜೈಪುರ್: 12,740 ರೂ
  • ಲಕ್ನೋ: 12,740 ರೂ
  • ಭುವನೇಶ್ವರ್: 12,725 ರೂ

ಇದನ್ನೂ ಓದಿ: ಇಪಿಎಫ್ ಅಕೌಂಟ್​ನಿಂದ ಎಲ್​​ಐಸಿ ಪ್ರೀಮಿಯಮ್ ಕಟ್ಟುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 565 ರಿಂಗಿಟ್ (12,557 ರುಪಾಯಿ)
  • ದುಬೈ: 496.50 ಡಿರಾಮ್ (12,184 ರುಪಾಯಿ)
  • ಅಮೆರಿಕ: 138 ಡಾಲರ್ (12,439 ರುಪಾಯಿ)
  • ಸಿಂಗಾಪುರ: 176.80 ಸಿಂಗಾಪುರ್ ಡಾಲರ್ (12,445 ರುಪಾಯಿ)
  • ಕತಾರ್: 495 ಕತಾರಿ ರಿಯಾಲ್ (12,240 ರೂ)
  • ಸೌದಿ ಅರೇಬಿಯಾ: 503 ಸೌದಿ ರಿಯಾಲ್ (12,088 ರುಪಾಯಿ)
  • ಓಮನ್: 52.65 ಒಮಾನಿ ರಿಯಾಲ್ (12,326 ರುಪಾಯಿ)
  • ಕುವೇತ್: 40.50 ಕುವೇತಿ ದಿನಾರ್ (11,886 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 253 ರೂ
  • ಚೆನ್ನೈ: 271 ರೂ
  • ಮುಂಬೈ: 253 ರೂ
  • ದೆಹಲಿ: 253 ರೂ
  • ಕೋಲ್ಕತಾ: 253 ರೂ
  • ಕೇರಳ: 271 ರೂ
  • ಅಹ್ಮದಾಬಾದ್: 253 ರೂ
  • ಜೈಪುರ್: 253 ರೂ
  • ಲಕ್ನೋ: 253 ರೂ
  • ಭುವನೇಶ್ವರ್: 271 ರೂ
  • ಪುಣೆ: 253

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us