Gold Rate Today Bangalore: ಚಿನ್ನದ ಬೆಲೆ ಬುಧವಾರವೂ ಏರಿಕೆ; ಬೆಳ್ಳಿಯೂ ಜಿಗಿತ

Bullion Market 2026 January 7th: ಚಿನ್ನ, ಬೆಳ್ಳಿ ಬೆಲೆಗಳೆರಡೂ ಇಂದು ಬುಧವಾರ ಏರಿವೆ. ಚಿನ್ನದ ಬೆಲೆ 60 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 10 ರೂ ಜಿಗಿದಿದೆ. 22 ಕ್ಯಾರಟ್ ಚಿನ್ನದ ಬೆಲೆ 12,725 ರೂನಿಂದ 12,785 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 13,948 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 263 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 283 ರೂ ಆಗಿದೆ.

Gold Rate Today Bangalore: ಚಿನ್ನದ ಬೆಲೆ ಬುಧವಾರವೂ ಏರಿಕೆ; ಬೆಳ್ಳಿಯೂ ಜಿಗಿತ
ಚಿನ್ನ

Updated on: Jan 07, 2026 | 11:51 AM

ಬೆಂಗಳೂರು, ಜನವರಿ 7: ಅಮೂಲ್ಯ ಲೋಹಗಳ ಬೆಲೆ ಏರಿಕೆ ಮುಂದುವರಿದಿದೆ. ಚಿನ್ನದ ಬೆಲೆ (Gold Rates) ಗ್ರಾಮ್​ಗೆ 60 ರೂ ಹೆಚ್ಚಿದೆ. ಭಾರತದಲ್ಲಿ ಮಾತ್ರವಲ್ಲ, ಹೆಚ್ಚಿನ ದೇಶಗಳಲ್ಲೂ ಈ ಹಳದಿ ಲೋಹದ ದರ ಏರಿದೆ. ಈ ವಾರದ ಮೊದಲ ಮೂರು ದಿನದಲ್ಲಿ ಚಿನ್ನದ ಬೆಲೆಯಲ್ಲಿ 300 ರೂಗೂ ಅಧಿಕ ಪ್ರಮಾಣದಲ್ಲಿ ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ ಬುಧವಾರ ಭರ್ಜರಿ ಜಿಗಿತ ಕಂಡಿದೆ. ಒಂದೇ ದಿನದಲ್ಲಿ 10 ರೂ ಜಂಪ್ ಆಗಿದೆ. ಮೂರು ದಿನದಲ್ಲಿ ಬೆಳ್ಳಿ ಬೆಲೆ 22 ರೂನಷ್ಟು ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,27,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,39,480 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,27,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,300 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,300 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 7ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,948 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,785 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,461 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 263 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,948 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,785 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 263 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,785 ರೂ
  • ಚೆನ್ನೈ: 12,870 ರೂ
  • ಮುಂಬೈ: 12,785 ರೂ
  • ದೆಹಲಿ: 12,800 ರೂ
  • ಕೋಲ್ಕತಾ: 12,785 ರೂ
  • ಕೇರಳ: 12,785 ರೂ
  • ಅಹ್ಮದಾಬಾದ್: 12,790 ರೂ
  • ಜೈಪುರ್: 12,800 ರೂ
  • ಲಕ್ನೋ: 12,800 ರೂ
  • ಭುವನೇಶ್ವರ್: 12,785 ರೂ

ಇದನ್ನೂ ಓದಿ: ಈ ಎಸ್​ಎಂಬಿಯಲ್ಲಿ ಆಕರ್ಷಕ ಬಡ್ಡಿ ಆಫರ್; ನಿತ್ಯವೂ ಚಕ್ರಬಡ್ಡಿ; ಏನಿದರ ಅನುಕೂಲ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 569 ರಿಂಗಿಟ್ (12,634 ರುಪಾಯಿ)
  • ದುಬೈ: 498.50 ಡಿರಾಮ್ (12,206 ರುಪಾಯಿ)
  • ಅಮೆರಿಕ: 139 ಡಾಲರ್ (12,502 ರುಪಾಯಿ)
  • ಸಿಂಗಾಪುರ: 178.80 ಸಿಂಗಾಪುರ್ ಡಾಲರ್ (12,554 ರುಪಾಯಿ)
  • ಕತಾರ್: 498.50 ಕತಾರಿ ರಿಯಾಲ್ (12,298 ರೂ)
  • ಸೌದಿ ಅರೇಬಿಯಾ: 507 ಸೌದಿ ರಿಯಾಲ್ (12,159 ರುಪಾಯಿ)
  • ಓಮನ್: 53.05 ಒಮಾನಿ ರಿಯಾಲ್ (12,392 ರುಪಾಯಿ)
  • ಕುವೇತ್: 40.86 ಕುವೇತಿ ದಿನಾರ್ (12,028 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 263 ರೂ
  • ಚೆನ್ನೈ: 283 ರೂ
  • ಮುಂಬೈ: 263 ರೂ
  • ದೆಹಲಿ: 263 ರೂ
  • ಕೋಲ್ಕತಾ: 263 ರೂ
  • ಕೇರಳ: 283 ರೂ
  • ಅಹ್ಮದಾಬಾದ್: 263 ರೂ
  • ಜೈಪುರ್: 263 ರೂ
  • ಲಕ್ನೋ: 263 ರೂ
  • ಭುವನೇಶ್ವರ್: 283 ರೂ
  • ಪುಣೆ: 263

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ