Gold Silver Price on 21st April: ಕಳೆದ ಮೂರು ವಾರಗಳಿಂದ ಚಿನ್ನ, ಬೆಳ್ಳಿ ಬೆಲೆ ಎಷ್ಟು ಹೆಚ್ಚಾಗಿದೆ ನೋಡಿ, ಪಟ್ಟಿ

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Apr 21, 2024 | 5:00 AM

Bullion Market 2024 April 21st: ಏಪ್ರಿಲ್ 1ರಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಸಖತ್ ಹೆಚ್ಚಳವಾಗಿದೆ. ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 68,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 74,340 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 86.50 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 68,150 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,600 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 21st April: ಕಳೆದ ಮೂರು ವಾರಗಳಿಂದ ಚಿನ್ನ, ಬೆಳ್ಳಿ ಬೆಲೆ ಎಷ್ಟು ಹೆಚ್ಚಾಗಿದೆ ನೋಡಿ, ಪಟ್ಟಿ
ಚಿನ್ನ
Follow us on

ಬೆಂಗಳೂರು, ಏಪ್ರಿಲ್ 21: ಚಿನ್ನ ಮತ್ತು ಬೆಳ್ಳಿ ಬೆಲೆ (Gold and silver Rates) ಕಳೆದ ಎರಡು ತಿಂಗಳಿಂದ ಭರ್ಜರಿ ಹೆಚ್ಚಳ ಕಂಡಿದೆ. ಇಸ್ರೇಲ್ ಯುದ್ಧ ಭೀತಿ ಚಿನ್ನಕ್ಕೆ ಇನ್ನಷ್ಟು ಬೇಡಿಕೆ ಹೆಚ್ಚಿಸಿದೆ. ಅಪರೂಪಕ್ಕೊಮ್ಮೆ ಇಳಿಯುತ್ತಾ ಹೆಚ್ಚಿನ ದಿನಗಳಲ್ಲಿ ಎರಡೂ ಲೋಹಗಳು ಬೆಲೆ ಏರಿಕೆ ಕಾಣುತ್ತಾ ಬಂದಿವೆ. ಬೆಳ್ಳಿ ಬೆಲೆ ಏಪ್ರಿಲ್ 1ರಿಂದ ಕಿಲೋಗೆ 6,500 ರೂನಷ್ಟು ಏರಿದೆ. ಕಿಲೋಗೆ 80,000 ರೂ ಇದ್ದ ಅದರ ಬೆಲೆ ಮೂರು ವಾರದಲ್ಲಿ 86,500 ರೂಗೆ ಏರಿದೆ. 62,750 ರೂ ಇದ್ದ ಚಿನ್ನದ ಬೆಲೆ ಈಗ 68,150 ರೂ ಆಗಿದೆ. ಮೂರು ವಾರದಲ್ಲಿ 5,400 ರೂನಷ್ಟು ಚಿನ್ನ ದುಬಾರಿಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 68,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 74,340 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,650 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 68,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,600 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 21ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 68,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 74,340 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 865 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 68,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 74,340 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 860 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 68,150 ರೂ
  • ಚೆನ್ನೈ: 68,900 ರೂ
  • ಮುಂಬೈ: 68,150 ರೂ
  • ದೆಹಲಿ: 68,300 ರೂ
  • ಕೋಲ್ಕತಾ: 68,150 ರೂ
  • ಕೇರಳ: 68,150 ರೂ
  • ಅಹ್ಮದಾಬಾದ್: 68,200 ರೂ
  • ಜೈಪುರ್: 68,300 ರೂ
  • ಲಕ್ನೋ: 68,300 ರೂ
  • ಭುವನೇಶ್ವರ್: 68,150 ರೂ

ಇದನ್ನೂ ಓದಿ: ಬೆಂಗಳೂರಿನ ಕೋರಮಂಗಲದಲ್ಲಿದೆ ಕುಬೇರರ ಏರಿಯಾ; ದಾಖಲೆ ಬೆಲೆಗೆ ಮಾರಾಟವಾಗಿದೆ ನಿವೇಶನ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,650 ರಿಂಗಿಟ್ (63,733 ರುಪಾಯಿ)
  • ದುಬೈ: 2,672.50 ಡಿರಾಮ್ (60,772 ರುಪಾಯಿ)
  • ಅಮೆರಿಕ: 730 ಡಾಲರ್ (60,998 ರುಪಾಯಿ)
  • ಸಿಂಗಾಪುರ: 1,010 ಸಿಂಗಾಪುರ್ ಡಾಲರ್ (61,926 ರುಪಾಯಿ)
  • ಕತಾರ್: 2,730 ಕತಾರಿ ರಿಯಾಲ್ (62,508 ರೂ)
  • ಸೌದಿ ಅರೇಬಿಯಾ: 2,740 ಸೌದಿ ರಿಯಾಲ್ (60,999 ರುಪಾಯಿ)
  • ಓಮನ್: 288 ಒಮಾನಿ ರಿಯಾಲ್ (62,472 ರುಪಾಯಿ)
  • ಕುವೇತ್: 227 ಕುವೇತಿ ದಿನಾರ್ (61,499 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,600 ರೂ
  • ಚೆನ್ನೈ: 9,000 ರೂ
  • ಮುಂಬೈ: 8,650 ರೂ
  • ದೆಹಲಿ: 8,650 ರೂ
  • ಕೋಲ್ಕತಾ: 8,650 ರೂ
  • ಕೇರಳ: 9,000 ರೂ
  • ಅಹ್ಮದಾಬಾದ್: 8,650 ರೂ
  • ಜೈಪುರ್: 8,650 ರೂ
  • ಲಕ್ನೋ: 8,650 ರೂ
  • ಭುವನೇಶ್ವರ್: 9,000 ರೂ

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ