Gold Silver Price on 9th December: ಬೆಂಗಳೂರಿನಲ್ಲಿ ಚಿನ್ನದ ಬೆಲೆ 7,130 ರೂಗೆ ಏರಿಕೆ

Bullion Market 2024 December 9th: ಚಿನ್ನದ ಬೆಲೆ ಇಂದು ಸೋಮವಾರ ಗ್ರಾಮ್​ಗೆ 15 ರೂನಷ್ಟು ಏರಿಕೆಯಾಗಿದೆ. ಆಭರಣ ಚಿನ್ನದ ಬೆಲೆ 7,130 ರೂಗೆ ಏರಿದರೆ, ಅಪರಂಜಿ ಚಿನ್ನದ ಬೆಲೆ 7,780 ರೂ ಆಗಿದೆ. ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಬೆಂಗಳೂರು ಮೊದಲಾದೆಡೆ ಬೆಳ್ಳಿ ಬೆಲೆ 92 ರೂ ಇದೆ.

Gold Silver Price on 9th December: ಬೆಂಗಳೂರಿನಲ್ಲಿ ಚಿನ್ನದ ಬೆಲೆ 7,130 ರೂಗೆ ಏರಿಕೆ
ಚಿನ್ನ

Updated on: Dec 09, 2024 | 10:39 AM

ಬೆಂಗಳೂರು, ಡಿಸೆಂಬರ್ 9: ಕಳೆದ ವಾರಾಂತ್ಯದಲ್ಲಿ ಇಳಿಕೆಯಾಗಿದ್ದ ಚಿನ್ನದ ಬೆಲೆ ಈ ವಾರವನ್ನು ಏರಿಕೆಯೊಂದಿಗೆ ಆರಂಭಿಸಿದೆ. ಬೆಂಗಳೂರು ಇತ್ಯಾದಿಯೆಡೆ ಚಿನ್ನದ ಬೆಲೆ ಗ್ರಾಮ್​ಗೆ 7,115 ರೂ ಇದ್ದದ್ದು 7,130 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 7,780 ರೂ ಆಗಿದೆ. ದೆಹಲಿ, ಜೈಪುರ್, ಲಕ್ನೋ ಇತ್ಯಾದಿ ಕಡೆ ಚಿನ್ನದ ಬೆಲೆ ಗರಿಷ್ಠ ಮಟ್ಟದಲ್ಲಿರುತ್ತದೆ. ಅಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 7,145 ರೂಗೆ ಏರಿದೆ. ಇದೇ ವೇಳೆ ಬೆಳ್ಳಿ ಬೆಲೆಯಲ್ಲಿ ಇಂದು ಸೋಮವಾರ ಯಾವ ವ್ಯತ್ಯಯವೂ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 71,300 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 77,780 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,200 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 71,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,200 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಡಿಸೆಂಬರ್ 9ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,300 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,780 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,340 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 920 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,300 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,780 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 920 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 71,300 ರೂ
  • ಚೆನ್ನೈ: 71,300 ರೂ
  • ಮುಂಬೈ: 71,300 ರೂ
  • ದೆಹಲಿ: 71,450 ರೂ
  • ಕೋಲ್ಕತಾ: 71,300 ರೂ
  • ಕೇರಳ: 71,300 ರೂ
  • ಅಹ್ಮದಾಬಾದ್: 71,350 ರೂ
  • ಜೈಪುರ್: 71,450 ರೂ
  • ಲಕ್ನೋ: 71,450 ರೂ
  • ಭುವನೇಶ್ವರ್: 71,300 ರೂ

ಇದನ್ನೂ ಓದಿ: Petrol Diesel Price on December 09: ಭಾರತದಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,630 ರಿಂಗಿಟ್ (69,550 ರುಪಾಯಿ)
  • ದುಬೈ: 2,955 ಡಿರಾಮ್ (68,150 ರುಪಾಯಿ)
  • ಅಮೆರಿಕ: 780 ಡಾಲರ್ (66,090 ರುಪಾಯಿ)
  • ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (68,490 ರುಪಾಯಿ)
  • ಕತಾರ್: 2,990 ಕತಾರಿ ರಿಯಾಲ್ (69,500 ರೂ)
  • ಸೌದಿ ಅರೇಬಿಯಾ: 3,010 ಸೌದಿ ರಿಯಾಲ್ (67,890 ರುಪಾಯಿ)
  • ಓಮನ್: 314 ಒಮಾನಿ ರಿಯಾಲ್ (69,110 ರುಪಾಯಿ)
  • ಕುವೇತ್: 240.80 ಕುವೇತಿ ದಿನಾರ್ (66,430 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,200 ರೂ
  • ಚೆನ್ನೈ: 10,000 ರೂ
  • ಮುಂಬೈ: 9,200 ರೂ
  • ದೆಹಲಿ: 9,200 ರೂ
  • ಕೋಲ್ಕತಾ: 9,200 ರೂ
  • ಕೇರಳ: 10,000 ರೂ
  • ಅಹ್ಮದಾಬಾದ್: 9,200 ರೂ
  • ಜೈಪುರ್: 9,200 ರೂ
  • ಲಕ್ನೋ: 9,200 ರೂ
  • ಭುವನೇಶ್ವರ್: 10,000 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us