
ಬೆಂಗಳೂರು, ಫೆಬ್ರುವರಿ 11: ಚಿನ್ನದ ಬೆಲೆ ನಾಗಾಲೋಟದಲ್ಲಿದೆ. ನಿನ್ನೆ 35 ರೂ ಏರಿದ್ದ ಅದರ ಬೆಲೆ ಇವತ್ತು ಮಂಗಳವಾರ 80 ರೂ ಹೆಚ್ಚಳ ಕಂಡಿದೆ. ಅಪರಂಜಿ ಚಿನ್ನದ ಬೆಲೆ 87 ರೂನಷ್ಟು ಹೆಚ್ಚಾಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,980 ರೂನಿಂದ 8,060 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 8,800 ರು ಸಮೀಪಕ್ಕೆ ದೌಡಾಯಿಸಿದೆ. ಭಾರತದಂತೆ ಪಶ್ಚಿಮ ಏಷ್ಯನ್ ದೇಶಗಳ ಮಾರುಕಟ್ಟೆಗಳಲ್ಲೂ ಚಿನ್ನದ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಯುಎಇ, ಕತಾರ್, ಓಮನ್, ಸೌದಿ ಮೊದಲಾದ ದೇಶಗಳಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಹೆಚ್ಚಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ಇಂದು ಅಲ್ಪ ಇಳಿಕೆ ಕಂಡಿದೆ. ಗ್ರಾಮ್ಗೆ 10 ಪೈಸೆಯಷ್ಟು ಬೆಲೆ ಕಡಿಮೆ ಆಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 99.50 ರೂ ಇದ್ದದ್ದು 99.40 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 80,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 87,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,940 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 80,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,940 ರುಪಾಯಿಯಲ್ಲಿ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
ಇದನ್ನೂ ಓದಿ: ಇಂದಿನಿಂದ 3 ದಿನ ಇನ್ವೆಸ್ಟ್ ಕರ್ನಾಟಕ ಸಮ್ಮಿಟ್: ಈ ಬಾರಿಯ ವಿಶೇಷವೇನು? ಇಲ್ಲಿದೆ ವಿವರ
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:15 am, Tue, 11 February 25