ಚಿನ್ನ
ಬೆಂಗಳೂರು, ಫೆಬ್ರುವರಿ 27: ನಿನ್ನೆ ಸೋಮವಾರ ಭಾರತದಲ್ಲಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ (Gold and silver Rates) ಇಂದು ಇಳಿದಿದೆ. ಚಿನ್ನದ ಬೆಲೆ ಗ್ರಾಮ್ಗೆ 10 ರೂನಷ್ಟು ಕಡಿಮೆ ಆಗಿದೆ. ನಿನ್ನೆ 20 ರೂನಷ್ಟು ಏರಿಕೆ ಆಗಿತ್ತು. ಬೆಳ್ಳಿ ಬೆಲೆ ಕೆಲವೆಡೆ ಗ್ರಾಮ್ಗೆ 50 ಪೈಸೆ ತಗ್ಗಿದೆ. ಬೆಂಗಳೂರಿನಲ್ಲಿ ಗ್ರಾಂಗೆ 50 ಪೈಸೆ ಹೆಚ್ಚಾಗಿದೆ. ಆದರೆ, ಇತರ ನಗರಗಳಿಂದ ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಕಡಿಮೆಯೇ ಇದೆ. ಇನ್ನು ವಿದೇಶಗಳಲ್ಲಿ ಚಿನ್ನದ ಬೆಲೆ ಬಹುತೇಕ ಯಥಾಸ್ಥಿತಿಯಲ್ಲಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 57,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 62,840 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,450 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 57,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,200 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 27ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,600 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 62,840 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 745 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,600 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 62,840 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 720 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 57,600 ರೂ
- ಚೆನ್ನೈ: 58,100 ರೂ
- ಮುಂಬೈ: 57,600 ರೂ
- ದೆಹಲಿ: 57,750 ರೂ
- ಕೋಲ್ಕತಾ: 57,600 ರೂ
- ಕೇರಳ: 57,600 ರೂ
- ಅಹ್ಮದಾಬಾದ್: 57,650 ರೂ
- ಜೈಪುರ್: 57,750 ರೂ
- ಲಕ್ನೋ: 57,750 ರೂ
- ಭುವನೇಶ್ವರ್: 57,600 ರೂ
ಇದನ್ನೂ ಓದಿ: ಮಾರುತಿ ಈ ದೇಶದ ನಂ. 1 ಕಾರ್ ಕಂಪನಿ ಆಗಿರುವ ಸೀಕ್ರೆಟ್ ಏನು? ಅಧ್ಯಕ್ಷ ಭಾರ್ಗವ ಬಿಚ್ಚಿಟ್ಟ ರಹಸ್ಯ ಇದು
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 3,110 ರಿಂಗಿಟ್ (53,955 ರುಪಾಯಿ)
- ದುಬೈ: 2,280 ಡಿರಾಮ್ (51,447 ರುಪಾಯಿ)
- ಅಮೆರಿಕ: 625 ಡಾಲರ್ (51,798 ರುಪಾಯಿ)
- ಸಿಂಗಾಪುರ: 850 ಸಿಂಗಾಪುರ್ ಡಾಲರ್ (52,427 ರುಪಾಯಿ)
- ಕತಾರ್: 2,340 ಕತಾರಿ ರಿಯಾಲ್ (53,182 ರೂ)
- ಸೌದಿ ಅರೇಬಿಯಾ: 2,350 ಸೌದಿ ರಿಯಾಲ್ (51,928 ರುಪಾಯಿ)
- ಓಮನ್: 248 ಒಮಾನಿ ರಿಯಾಲ್ (53,386 ರುಪಾಯಿ)
- ಕುವೇತ್: 195 ಕುವೇತಿ ದಿನಾರ್ (52,519 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,200 ರೂ
- ಚೆನ್ನೈ: 7,640 ರೂ
- ಮುಂಬೈ: 7,450 ರೂ
- ದೆಹಲಿ: 7,450 ರೂ
- ಕೋಲ್ಕತಾ: 7,450 ರೂ
- ಕೇರಳ: 7,640 ರೂ
- ಅಹ್ಮದಾಬಾದ್: 7,450 ರೂ
- ಜೈಪುರ್: 7,450 ರೂ
- ಲಕ್ನೋ: 7,450 ರೂ
- ಭುವನೇಶ್ವರ್: 7,640 ರೂ
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ