WITT 2024: ಮಾರುತಿ ಈ ದೇಶದ ನಂ. 1 ಕಾರ್ ಕಂಪನಿ ಆಗಿರುವ ಸೀಕ್ರೆಟ್ ಏನು? ಅಧ್ಯಕ್ಷ ಭಾರ್ಗವ ಬಿಚ್ಚಿಟ್ಟ ರಹಸ್ಯ ಇದು

Maruti Suzuki Chairman RC Bhargava Speaks ಮಾರುತಿ ಸುಜುಕಿ ಭಾರತದ ಅಗ್ರ ಆಟೊಮೊಬೈಲ್ ಕಂಪನಿ. ದೇಶದ ಅರ್ಧದಷ್ಟು ವಾಹನ ಮಾರುಕಟ್ಟೆ ಮಾರುತಿ ಸುಜುಕಿ ಪಾಲಾಗಿದೆ. ಏನಿದರ ರಹಸ್ಯ? ಮಾರುತಿ ಸುಜುಕಿ ಅಧ್ಯಕ್ಷ ಆರ್‌ಸಿ ಭಾರ್ಗವ ಅವರು ಟಿವಿ9 ನೆಟ್‌ವರ್ಕ್‌ನ ವಾಟ್ ಇಂಡಿಯಾ ಥಿಂಕ್ಸ್ ಟುಡೆ ಜಾಗತಿಕ ಶೃಂಗಸಭೆಯಲ್ಲಿ ಮಾತನಾಡಿದ್ದಾರೆ. ಭಾರ್ಗವ ಮಾರುತಿ ಹೇಗೆ ದೇಶದ ನಂಬರ್ 1 ಆಟೋ ಕಂಪನಿಯಾಗಿದೆ ಎಂದು ಹೇಳಿದ್ದಾರೆ.

WITT 2024: ಮಾರುತಿ ಈ ದೇಶದ ನಂ. 1 ಕಾರ್ ಕಂಪನಿ ಆಗಿರುವ ಸೀಕ್ರೆಟ್ ಏನು? ಅಧ್ಯಕ್ಷ ಭಾರ್ಗವ ಬಿಚ್ಚಿಟ್ಟ ರಹಸ್ಯ ಇದು
ಆರ್.ಸಿ. ಭಾರ್ಗವ
Follow us
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 26, 2024 | 5:55 PM

What India Thinks Today Global Summit 2024: ಮಾರುತಿ ಸುಜುಕಿ ಸಂಸ್ಥೆಯ ಛೇರ್ಮನ್ ಆರ್‌ಸಿ ಭಾರ್ಗವ (RC Bhargava) ಅವರು ಟಿವಿ9 ನೆಟ್‌ವರ್ಕ್‌ನ ಡಬ್ಲ್ಯುಐಟಿಟಿ ಜಾಗತಿಕ ಶೃಂಗಸಭೆಯಲ್ಲಿ ಪಾಲ್ಗೊಂಡು ಬದಲಾಗುತ್ತಿರುವ ಭಾರತದ ಚಿತ್ರಣದ ಬಗ್ಗೆ ಮಾತನಾಡಿದರು. ಮಾರುತಿ ಸಂಸ್ಥೆ ಹೇಗೆ ದೇಶದ ನಂಬರ್ 1 ಆಟೋ ಕಂಪನಿ ಆಗಿದೆ ಎಂದು ವಿವರಿಸಿದ ಅವರು, ಯಾವುದೇ ಕಂಪನಿಯನ್ನು ನಂಬರ್ ಒನ್ ಮಾಡುವುದು ಅದರ ತಂಡ. ಮಾರುತಿ ವಿಷಯದಲ್ಲೂ ಅದೇ ಆಗಿದೆ. ಈ ಕಂಪನಿಯಲ್ಲಿ ಜನರಿಗೆ ಕೆಲಸ ಮಾಡುವ ಸ್ವಾತಂತ್ರ್ಯ ಇದೆ ಎಂದು ಯಶಸ್ಸಿನ ಸೂತ್ರವನ್ನು ಬಿಚ್ಚಿಟ್ಟರು.

ಭಾರತದ ಬೆಳವಣಿಗೆಯ ಬಗ್ಗೆ ಮಾತನಾಡಿದ ಮಾರುತಿ ಸುಜುಕಿ ಛೇರ್ಮನ್, ಕಳೆದ 10 ವರ್ಷಗಳಲ್ಲಿ ಭಾರತವು ತ್ವರಿತ ಪ್ರಗತಿಯನ್ನು ಸಾಧಿಸಿದೆ. ಈ ಹತ್ತು ವರ್ಷಗಳಲ್ಲಿ ವ್ಯವಸ್ಥೆಯ ಲೋಪದೋಷಗಳು ನಿವಾರಣೆಯಾಗಿವೆ ಎಂದು ಹೇಳಿದರು.

ಇದನ್ನೂ ಓದಿ: ಮುಂಬೈ ಆಗಲೀ ಕೇರಳ ಆಗಲೀ ತಂತ್ರಜ್ಞಾನ ಎಲ್ಲರನ್ನೂ ತಲುಪಬೇಕೆಂಬುದು ಮೋದಿ ಸರ್ಕಾರದ ಪ್ರಯತ್ನ: ಸಚಿವ ವೈಷ್ಣವ್

ಆರ್‌ಸಿ ಭಾರ್ಗವ ಯಾರು?

ಐಎಎಸ್ ಅಧಿಕಾರಿಯಾಗಿ ಸುದೀರ್ಘ ವೃತ್ತಿಜೀವನದ ನಂತರ ಆರ್.ಸಿ. ಭಾರ್ಗವ ಅವರು 1981 ರಲ್ಲಿ ಮಾರುತಿ ಸಂಸ್ಥೆ ಸೇರಿದರು. ಮಾರುತಿಗೆ ಸೇರುವ ಮೊದಲು, ಅವರು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ನಲ್ಲಿ ನಿರ್ದೇಶಕ (ವಾಣಿಜ್ಯ) ಆಗಿದ್ದರು. IAS ಅಧಿಕಾರಿಯಾಗಿ ಅವರು 1974-77 ರವರೆಗೆ ಭಾರತ ಸರ್ಕಾರದ ಇಂಧನ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದರು. ಅವರು 1977-78ರ ಅವಧಿಯಲ್ಲಿ ಭಾರತ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿಯೇಟ್‌ನಲ್ಲಿ ಜಂಟಿ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದರು.

ಅವರು 1981 ರಲ್ಲಿ ಮಾರುತಿ ಸಂಸ್ಥೆಗೆ ನಿರ್ದೇಶಕರಾಗಿ (ಮಾರ್ಕೆಟಿಂಗ್) ಸೇರಿದರು. ಅಂದಿನಿಂದ ಅವರು ಕಂಪನಿಯೊಂದಿಗೆ ವಿವಿಧ ಪಾತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಪ್ರಸ್ತುತ 2007 ರಿಂದ ಅಧ್ಯಕ್ಷರಾಗಿ ಭಾರತದ ಅತಿದೊಡ್ಡ ಆಟೋಮೊಬೈಲ್ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ. ಸದ್ಯ ಮಾರುತಿ ಮಾರುಕಟ್ಟೆ ಮೌಲ್ಯ 3 ಲಕ್ಷ ಕೋಟಿ ರೂ. ಇದು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಆಟೋ ವಲಯದ ಕಂಪನಿಯಾಗಿದೆ.

ಇದನ್ನೂ ಓದಿ: ಪುರುಷರಿಗೆ ಥಳಿಸುವುದರಿಂದ ಲಿಂಗ ಸಮಾನತೆ ಖಚಿತಪಡಿಸಲು ಸಾಧ್ಯವಿಲ್ಲ: ಸ್ಮೃತಿ ಇರಾನಿ

ಇದು ಕಂಪನಿಯ ಮುಖ್ಯ ಗಮನ

ಕಳೆದ ವರ್ಷ ಅಂದರೆ 2023 ರಲ್ಲಿ, ಆರ್‌ಸಿ ಭಾರ್ಗವ ಅವರು ಎಜಿಎಂ ಸಭೆಯಲ್ಲಿ 2031 ರ ವೇಳೆಗೆ ಕಂಪನಿಯು 45 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲು ಯೋಜಿಸುತ್ತಿದೆ ಎಂದು ಹೇಳಿದ್ದರು. ಈ ಹಣವನ್ನು ಉತ್ಪಾದನೆ ಹೆಚ್ಚಿಸಲು ಬಳಸಲಾಗುವುದು. ಪ್ರಸ್ತುತ 2.50 ಲಕ್ಷಕ್ಕಿಂತ ಹೆಚ್ಚಿರುವ ಕಂಪನಿಯ ರಫ್ತು 2031ರ ವೇಳೆಗೆ 8 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿರುವುದನ್ನು ಅವರು ತಿಳಿಸಿದ್ದರು.

ಆರ್.ಸಿ. ಭಾರ್ಗವ ಅವರು 2016 ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪಡೆದಿದ್ದಾರೆ.

ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ