What India Thinks Today: ಮಹಿಳೆಯರು ಭವಿಷ್ಯದ ಆರ್ಥಿಕತೆಗಾಗಿ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ: ವಿನಿತಾ ಸಿಂಗ್

ನೀತಿ ನಿರೂಪಣೆಯಿಂದ ಕಾರ್ಪೊರೇಟ್ ಪ್ರಪಂಚದವರೆಗೆ ನಿರ್ಧಾರ ತೆಗೆದುಕೊಳ್ಳಲು ಮಹಿಳೆಯ ಸಮಾರ್ಥರು. ಇಂದು ಸರ್ಕಾರವೂ ಮಹಿಳೆಯರಿಗೆ ಉತ್ತೇಜನ ನೀಡುತ್ತಿದೆ. ಶಾರ್ಕ್ ಟ್ಯಾಂಕ್ ಸಹ ಸಂಸ್ಥಾಪಕಿ ಮತ್ತು ಶುಗರ್ ಕಾಸ್ಮೆಟಿಕ್ಸ್ ಸಿಇಒ ವಿನಿತಾ ಸಿಂಗ್ ಅವರು 'ವಾಟ್ ಇಂಡಿಯಾ ಥಿಂಗ್ಸ್ ಟುಡೇ' ಶೃಂಗಸಭೆಯಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಭಾಗವಹಿಸುವಿಕೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

What India Thinks Today: ಮಹಿಳೆಯರು ಭವಿಷ್ಯದ ಆರ್ಥಿಕತೆಗಾಗಿ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ: ವಿನಿತಾ ಸಿಂಗ್
Vinita Singh 
Follow us
ಅಕ್ಷಯ್​ ಪಲ್ಲಮಜಲು​​
|

Updated on:Feb 26, 2024 | 4:34 PM

ಇಂದು ಭಾರತದಲ್ಲಿ ಪುರುಷರಂತೆ ಮಹಿಳೆಯರು ಕೂಡ ಆರ್ಥಿಕ ಕ್ಷೇತ್ರದಲ್ಲಿ ಬೆಳೆಯುತ್ತಿದ್ದಾರೆ. ನೀತಿ ನಿರೂಪಣೆಯಿಂದ ಕಾರ್ಪೊರೇಟ್ ಪ್ರಪಂಚದವರೆಗೆ ನಿರ್ಧಾರ ತೆಗೆದುಕೊಳ್ಳುವ ಎಲ್ಲ ರೀತಿಯ ಸಮಾರ್ಥ್ಯವನ್ನು ಮಹಿಳೆಯರು ಹೊಂದಿದ್ದಾರೆ ಎಂದು ಶಾರ್ಕ್ ಟ್ಯಾಂಕ್ ಸಹ ಸಂಸ್ಥಾಪಕಿ ಮತ್ತು ಶುಗರ್ ಕಾಸ್ಮೆಟಿಕ್ಸ್ ಸಿಇಒ ವಿನಿತಾ ಸಿಂಗ್ ಅವರು ಹೇಳಿದ್ದಾರೆ. ಅವರು ಇಂದು ಟಿವಿ9 ನೆಟ್​​ವರ್ಕ್​​​​ ಆಯೋಜಿಸಿರುವ ‘ವಾಟ್ ಇಂಡಿಯಾ ಥಿಂಗ್ಸ್ ಟುಡೇ’ (What India Thinks Today) ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. ವಿನಿತಾ ಸಿಂಗ್ ದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಭಾಗವಹಿಸುವಿಕೆಯ ಬಗ್ಗೆ ಈ ಸಭೆಯಲ್ಲಿ ಮಾತನಾಡಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಮಹಿಳೆಯರು ಕಂಪನಿಯ ಆಡಳಿತ ಮಂಡಳಿಗೆ ಸೇರ್ಪಡೆಗೊಂಡು ಸಂಸ್ಥೆಯ ಉತ್ತಮ ಭವಿಷ್ಯಕ್ಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದರು.

ಶುಗರ್ ಕಾಸ್ಮೆಟಿಕ್ಸ್‌ನ ಸಹ-ಸಂಸ್ಥಾಪಕಿ ಮತ್ತು ಸಿಇಒ ವಿನೀತಾ ಸಿಂಗ್ ಅವರು ಈ ಕಾರ್ಯಕ್ರಮದಲ್ಲಿ ತಮ್ಮ ಕಂಪನಿಯು 5,000 ಉದ್ಯೋಗಿಗಳ ಬ್ಯಾಂಡ್‌ವಿಡ್ತ್ ಅನ್ನು ಹೊಂದಿದೆ, ಅದರಲ್ಲಿ ಸುಮಾರು 4,000 ಮಹಿಳಾ ಉದ್ಯೋಗಿಗಳು, ಕಂಪನಿಯ ಭವಿಷ್ಯವು ತನ್ನ ಕಂಪನಿಯಲ್ಲಿರುವ ಮಹಿಳೆಯರ ಕೈಯಲ್ಲಿದೆ. ಇಂದಿನ ದಿನಗಳಲ್ಲಿ ಮಹಿಳೆಯರು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ: ಕರೋನಾದಿಂದ ಶಾಪಿಂಗ್ ವಿಧಾನ ಬದಲಾಗಿದೆ, ಆನ್​​ಲೈನ್​​​ ಶಾಪಿಂಗ್​​​ದೊಡ್ದ ಪಾತ್ರವನ್ನು ವಹಿಸಿದೆ: ತರುಣ್ ಅರೋರಾ

ಹಲವು ಹೊಸ ಹೊಸ ಸ್ಟಾರ್ಟಪ್​​​ಗಳು ನಮ್ಮ ದೇಶದಲ್ಲಿ ಇದ್ದರೆ, ಅವರು ಕೂಡ ಇಂತಹ ಸಾಹಸಕ್ಕೆ ಕೈಹಾಕಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು ಈ ಕ್ಷೇತ್ರದಲ್ಲಿ ತುಂಬಾ ಕಾಳಜಿಯುತವಾಗಿ ಕೆಲಸ ಮಾಡುತ್ತಾರೆ. ಮಹಿಳೆಯರಿಂದ ಪ್ರಾರಂಭವಾದ ಸ್ಟಾರ್ಟ್‌ಅಪ್‌ಗಳನ್ನು ಹೆಚ್ಚು ಪ್ರೋತ್ಸಾಹಿಸಬೇಕು. ಇಂದು ದೇಶದಲ್ಲಿ ಅಂತಹ ಲಕ್ಷಗಟ್ಟಲೆ ಕಂಪನಿಗಳಿವೆ, ಅದನ್ನು ಮಹಿಳಾ ಸಂಸ್ಥಾಪಕರು ನಡೆಸುತ್ತಿದ್ದಾರೆ ಎಂದು ಹೇಳಿದರರು.

ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:26 pm, Mon, 26 February 24