ಬೆಂಗಳೂರು, ಫೆಬ್ರುವರಿ 27: ಕಳೆದ ಎರಡು ವಾರದಿಂದ ಸತತ ಹೆಚ್ಚಳ ಕಾಣುತ್ತಿದ್ದ ಚಿನ್ನದ ಬೆಲೆ ಈಗ ಸತತ ಎರಡನೇ ಬಾರಿ ಇಳಿಕೆ ಆಗಿದೆ. ನಿನ್ನೆ ಗ್ರಾಮ್ಗೆ 25 ರೂ ಕಡಿಮೆಗೊಂಡಿದ್ದ ಸ್ವರ್ಣ ದರ ಇವತ್ತು 40 ರೂ ತಗ್ಗಿದೆ. ಎರಡು ದಿನದಲ್ಲಿ 65 ರೂ ಬೆಲೆ ಇಳಿದಂತಾಗಿದೆ. ಬೆಂಗಳೂರು ಹಾಗೂ ಭಾರತದ ಇತರೆಡೆ ಏರಿಕೆ ಆಗಿದೆ. ವಿದೇಶಗಳಲ್ಲಿ ಇಂದು ಗುರುವಾರ ಚಿನ್ನದ ಬೆಲೆಯ ಏರಿಳಿತಗಳಾಗಿವೆ. ಕೆಲವೆಡೆ ಬೆಲೆ ಏರಿಕೆಯಾದರೆ, ಇನ್ನೂ ಕೆಲವೆಡೆ ಇಳಿಕೆ ಆಗಿದೆ. ಒಂದೆಡೆ ಚಿನ್ನದ ಬೆಲೆಯ ಅಸ್ಥಿರತೆ ಮುಂದುವರಿಯುತ್ತಿದ್ದರೆ, ಇನ್ನೊಂದೆಡೆ ಬೆಳ್ಳಿ ಬೆಲೆ ಹೆಚ್ಚು ಸ್ಥಿರತೆ ಸಾಧಿಸಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 98 ರೂನಲ್ಲಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 80,100 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 87,380 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 80,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,800 ರುಪಾಯಿಯಲ್ಲಿ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
ಇದನ್ನೂ ಓದಿ: ಭಾರತ ಮತ್ತು ಅಮೆರಿಕ ಆರ್ಥಿಕತೆ ಮಧ್ಯೆ ಎಷ್ಟೊಂದು ಸಾಮ್ಯತೆ ಇದೆ ಗೊತ್ತಾ? ಹುಳುಕು, ತಳುಕು, ಬಳುಕು ಒಂದೇ
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ