AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓದಿಗೆ ಟೈಮ್ ಕಮ್ಮಿ; ನಗರದವರಿಗಿಂತ ಗ್ರಾಮೀಣದವರಿಂದಲೇ ಓದಿಗೆ ಹೆಚ್ಚು ಸಮಯ ಮೀಸಲು

Time Use Survey report 2024: ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು 2024ರ ಟೈಮ್ ಯೂಸ್ ಸರ್ವೆ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಕಲಿಕಾ ಚಟುವಟಿಕೆಗಳಿಗೆ ಎಷ್ಟು ಸಮಯ ವಿನಿಯೋಗಿಸುತ್ತಿದ್ದಾರೆ ಎಂಬ ದತ್ತಾಂಶ ಇದೆ. ನಗರ ಭಾಗದ ಹುಡುಗರಿಗಿಂತ ಗ್ರಾಮೀಣವಾಸಿ ಮಕ್ಕಳು ಕಲಿಕೆಗೆ ಹೆಚ್ಚು ಸಮಯ ವಿನಿಯೋಗಿಸುತ್ತಿರುವುದು ತಿಳಿದುಬಂದಿದೆ.

ಓದಿಗೆ ಟೈಮ್ ಕಮ್ಮಿ; ನಗರದವರಿಗಿಂತ ಗ್ರಾಮೀಣದವರಿಂದಲೇ ಓದಿಗೆ ಹೆಚ್ಚು ಸಮಯ ಮೀಸಲು
ವಿದ್ಯಾರ್ಥಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 27, 2025 | 2:06 PM

Share

ನವದೆಹಲಿ, ಫೆಬ್ರುವರಿ 27: ಐದು ವರ್ಷಗಳ ಹಿಂದೆಗೆ ಹೋಲಿಸಿದರೆ ವಿದ್ಯಾರ್ಥಿಗಳು ಕಲಿಕೆಗೆ ನೀಡುತ್ತಿರುವ ಸಮಯದಲ್ಲಿ ಇಳಿಮುಖವಾಗಿದೆ. 2019ರಲ್ಲಿ ವಿದ್ಯಾರ್ಥಿಗಳು ದಿನಕ್ಕೆ 93-94 ನಿಮಿಷ ಕಾಲವನ್ನು ಕಲಿಕೆಗಾಗಿ ವ್ಯಯಿಸುತ್ತಿದ್ದರು. 2024ರಲ್ಲಿ ಇದು 88-89 ನಿಮಿಷಗಳಿಗೆ ಇಳಿದಿದೆ. ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಇತ್ತೀಚೆಗೆ (ಫೆ. 25) ಬಿಡುಗಡೆ ಮಾಡಿದ ಸಮಯ ಬಳಕೆ ಸಮೀಕ್ಷೆಯಲ್ಲಿ (ಟಿಯುಎಸ್- Time Use Survey) ಈ ಅಂಶಗಳು ಬೆಳಕಿಗೆ ಬಂದಿವೆ. ಕಳೆದ ಐದು ವರ್ಷದಲ್ಲಿ ಕಲಿಕಾ ಚಟುವಟಿಕೆಗಳಿಗೆ (learning activities) ಮಕ್ಕಳ ಕಾಲವ್ಯಯ ಕಡಿಮೆ ಆಗಿರುವುದು ಒಂದೆಡೆಯಾದರೆ, ಹುಡುಗಿಯರು ಮತ್ತು ಹುಡುಗರ ನಡುವಿನ ಅಂತರ ತಗ್ಗಿದೆ. ಗ್ರಾಮೀಣ ಭಾಗದವರು ನಗರದವರಿಗಿಂತ ಹೆಚ್ಚು ಸಮಯವನ್ನು ಕಲಿಕೆಗೆ ವಿನಿಯೋಗಿಸುತ್ತಿದ್ದಾರೆ.

ಕಲಿಕಾ ಚಟುವಟಿಕೆ ಎಂದರೆ ಏನು?

ಶಾಲೆ-ಕಾಲೇಜು ಹಾಜರಾತಿ, ಶಾಲೆಗೆ ಹೋಗಲು ಪ್ರಯಾಣಿಸುವ ಅವಧಿ, ಪಾಠೇತರ ಚಟುವಟಿಕೆ, ಹೋಮ್ ವರ್ಕ್ ಇತ್ಯಾದಿ ಕಲಿಕೆಗೆ ಪೂರಕವಾದ ಚಟುವಟಿಕೆಗಳನ್ನೂ ಪರಿಗಣಿಸಲಾಗಿದೆ. ದೇಶಾದ್ಯಂತ ಮಾಡಲಾದ ಈ ಸಮೀಕ್ಷೆಯಲ್ಲಿ 6 ವರ್ಷಕ್ಕಿಂತ ಹೆಚ್ಚು ವಯಸ್ಸಿನ ವ್ಯಕ್ತಿಗಳನ್ನು ಬಳಸಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತಿತರರೂ ಸೇರಿದ್ದಾರೆ.

ಇದನ್ನೂ ಓದಿ: ಭಾರತದ ಷೇರುಮಾರುಕಟ್ಟೆ ಮತ್ತು ಆರ್ಥಿಕತೆ ಬಗ್ಗೆ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹೆಚ್ಚಿನ ನಿರೀಕ್ಷೆ

ಇದನ್ನೂ ಓದಿ
Image
ಭಾರತದ ಬಗ್ಗೆ ಸಕಾರಾತ್ಮಕವಾಗಿರುವ ವಿಶ್ವಬ್ಯಾಂಕ್, ಸಿಟಿ, ಜೆಫರೀಸ್
Image
ಭಾರತ, ಅಮೆರಿಕ ಆರ್ಥಿಕತೆಗಳಲ್ಲಿ ಇರುವ ಸಾಮ್ಯತೆಗಳಿವು...
Image
ಮದ್ದುಗುಂಡುಗಳ ತಯಾರಿಕೆಯಲ್ಲಿ ಭಾರತದ ಸ್ವಾವಲಂಬನೆ
Image
ಅಮೆರಿಕದಲ್ಲಿ ಪೆನ್ನಿ ನಾಣ್ಯ ತಯಾರಿಕೆ ಇನ್ನಿಲ್ಲ

ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ನಗರದವರ ಕಲಿಕಾ ಚಟುವಟಿಕೆ ಅವಧಿ ಗಣನೀಯವಾಗಿ ತಗ್ಗಿದೆ. 2019ರಲ್ಲಿ 95 ನಿಮಿಷವನ್ನು ಕಲಿಕಾ ಚಟುವಟಿಕೆಗೆ ತೊಡಗಿಸುತ್ತಿದ್ದ ನಗರವಾಸಿ ಮಕ್ಕಳು 2024ರಲ್ಲಿ ದಿನಕ್ಕೆ ವ್ಯಯಿಸುತ್ತಿರುವುದು 87 ನಿಮಿಷಕ್ಕೆ ಇಳಿದಿದೆ. ಇದಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದವರು 90 ನಿಮಿಷ ವ್ಯಯಿಸುತ್ತಿದ್ದಾರೆ.

2019ರಲ್ಲಿ ಗ್ರಾಮೀಣ ಭಾಗದ ಮಕ್ಕಳು ಕಲಿಕಾ ಚಟುವಟಿಕೆಗಳಿಗೆ ದಿನಕ್ಕೆ 92 ನಿಮಿಷ ವ್ಯಯಿಸುತ್ತಿದ್ದರು. ಈಗ ಅದು 90 ನಿಮಿಷಕ್ಕೆ ಇಳಿದಿದೆಯಾದರೂ, ನಗರವಾಸಿಗಳಿಗೆ ಹೋಲಿಸಿದರೆ ಹೆಚ್ಚು ಸಮಯವನ್ನು ಕಲಿಕೆಗೆ ವಿನಿಯೋಗಿಸುತ್ತಿದ್ದಾರೆ.

ಇದನ್ನೂ ಓದಿ: ಮದ್ದುಗುಂಡುಗಳ ತಯಾರಿಕೆಯಲ್ಲಿ ಭಾರತ ಶೇ. 88ರಷ್ಟು ಸ್ವಾವಲಂಬನೆ: ರಕ್ಷಣಾ ಸಚಿವರ ಮಾಹಿತಿ

ಹುಡುಗ ಮತ್ತು ಹುಡುಗಿಯರ ನಡುವೆ ತಗ್ಗಿದ ಅಂತರ…

ಹುಡುಗರು ಕಲಿಕೆಗೆ ವಿನಿಯೋಗಿಸುತ್ತಿರುವ ಸಮಯದಲ್ಲಿ ಐದು ವರ್ಷದಲ್ಲಿ 102 ನಿಮಿಷದಿಂದ 94 ನಿಮಿಷಗಳಿಗೆ ಇಳಿದಿದೆ. 2019ರಲ್ಲಿ ಹುಡುಗಿಯರ ಕಲಿಕಾ ಅವಧಿ 84 ನಿಮಿಷ ಇತ್ತು. ಆಗ ಹುಡುಗಿಯರಿಗಿಂತ ಹುಡುಗರ ಕಲಿಕಾ ಅವಧಿ 18 ನಿಮಿಷ ಹೆಚ್ಚಿತ್ತು. 2024ರಲ್ಲಿ ಹುಡುಗರ ಅವಧಿ 94 ನಿಮಿಷಕ್ಕೆ ಇಳಿದಿದೆ. ಹುಡುಗಿಯರದ್ದು 84 ನಿಮಿಷವೇ ಇದೆ. ಇಬ್ಬರ ನಡುವೆ ಅಂತರ 18 ನಿಮಿಷ ಇದ್ದದ್ದು 10 ನಿಮಿಷಕ್ಕೆ ಇಳಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ