Gold Silver Price on 9th January: ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ; ಬೆಳ್ಳಿ ಬೆಲೆ ತುಸು ಇಳಿಕೆ

|

Updated on: Jan 09, 2025 | 10:42 AM

Bullion Market 2024 January 9th: ಚಿನ್ನದ ಬೆಲೆ ಕಳೆದ ಕೆಲ ದಿನಗಳಲ್ಲಿ ವಿಶ್ವಾದ್ಯಂತ ಹೆಚ್ಚಳವಾಗಿದೆ. ಇಂದು ಭಾರತದಲ್ಲಿ ಹಳದಿ ಲೋಹದ ಬೆಲೆಯಲ್ಲಿ ಅಲ್ಪ ಏರಿಕೆ ಆಗಿದೆ. ವಿದೇಶಗಳ ಹಲವು ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಭಾರತದಕ್ಕಿಂತ ಹೆಚ್ಚಿದೆ. 22 ಕ್ಯಾರಟ್ ಚಿನ್ನದ ಬೆಲೆ 7,500 ರೂಗಿಂತಲೂ ಹೆಚ್ಚಿದೆ. ಬೆಳ್ಳಿ ಬೆಲೆಯಲ್ಲಿ ಅಷ್ಟೇನೂ ಏರಿಕೆಯಾಗಿಲ್ಲ. ಇಂದು ಗುರುವಾರ ಗ್ರಾಮ್​ಗೆ 10 ಪೈಸೆ ಬೆಲೆ ಕಡಿಮೆ ಆಗಿದೆ.

Gold Silver Price on 9th January: ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ; ಬೆಳ್ಳಿ ಬೆಲೆ ತುಸು ಇಳಿಕೆ
ಚಿನ್ನ
Follow us on

ಬೆಂಗಳೂರು, ಜನವರಿ 09: ಚಿನ್ನದ ಬೆಲೆ ಇಂದು ಗುರುವಾರ ಅಲ್ಪ ಏರಿಕೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಅಲ್ಪ ಇಳಿಕೆ ಆಗಿದೆ. ಒಂದು ಗ್ರಾಮ್ ಚಿನ್ನದ ಬೆಲೆಯಲ್ಲಿ 1 ರೂನಷ್ಟು ಹೆಚ್ಚಳವಾಗಿದ್ದು, ಭಾರತದಲ್ಲಿ ಬೆಲೆ 7,225 ರೂನಿಂದ 7,226 ರೂಗೆ ಏರಿದೆ. ಜೈಪುರ್ ಮೊದಲಾದ ಕೆಲವೆಡೆ ಬೆಲೆ 7,240 ರೂನಿಂದ 7,241 ರೂಗೆ ಹೆಚ್ಚಳವಾಗಿದೆ. ವಿದೇಶಗಳಲ್ಲಿ ಹಲವೆಡೆ ಚಿನ್ನದ ಬೆಲೆ 7,500 ರೂ ಗಡಿ ದಾಟಿ ಹೋಗಿದೆ. ಇದೇ ವೇಳೆ ಬೆಳ್ಳಿ ಬೆಲೆಯಲ್ಲಿ 10 ಪೈಸೆಯಷ್ಟು ಇಳಿಕೆ ಆಗಿದೆ. ಬೆಂಗಳೂರು, ಮುಂಬೈ ಮೊದಲಾದ ಹೆಚ್ಚಿನ ಕಡೆ ಬೆಳ್ಳಿ ಬೆಲೆ 92.50 ರೂನಿಂದ 92.40 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 72,260 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 78,830 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,240 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 72,260 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,240 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜನವರಿ 9ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,260 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 78,830 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59,130 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 925 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,260 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 78,830 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 924 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 72,260 ರೂ
  • ಚೆನ್ನೈ: 72,260 ರೂ
  • ಮುಂಬೈ: 72,260 ರೂ
  • ದೆಹಲಿ: 72,410 ರೂ
  • ಕೋಲ್ಕತಾ: 72,260 ರೂ
  • ಕೇರಳ: 72,260 ರೂ
  • ಅಹ್ಮದಾಬಾದ್: 72,310 ರೂ
  • ಜೈಪುರ್: 72,410 ರೂ
  • ಲಕ್ನೋ: 72,410 ರೂ
  • ಭುವನೇಶ್ವರ್: 72,260 ರೂ

ಇದನ್ನೂ ಓದಿ: Petrol Diesel Price on January 09: ಉತ್ತರ ಪ್ರದೇಶ, ಜಮ್ಮು-ಕಾಶ್ಮೀರದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,780 ರಿಂಗಿಟ್ (72,220 ರುಪಾಯಿ)
  • ದುಬೈ: 3,222.50 ಡಿರಾಮ್ (75,390 ರುಪಾಯಿ)
  • ಅಮೆರಿಕ: 830 ಡಾಲರ್ (71,320 ರುಪಾಯಿ)
  • ಸಿಂಗಾಪುರ: 1,205 ಸಿಂಗಾಪುರ್ ಡಾಲರ್ (75,690 ರುಪಾಯಿ)
  • ಕತಾರ್: 3,230 ಕತಾರಿ ರಿಯಾಲ್ (76,140 ರೂ)
  • ಸೌದಿ ಅರೇಬಿಯಾ: 3,300 ಸೌದಿ ರಿಯಾಲ್ (75,540 ರುಪಾಯಿ)
  • ಓಮನ್: 338.50 ಒಮಾನಿ ರಿಯಾಲ್ (75,550 ರುಪಾಯಿ)
  • ಕುವೇತ್: 266.60 ಕುವೇತಿ ದಿನಾರ್ (74,320 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,240 ರೂ
  • ಚೆನ್ನೈ: 9,990 ರೂ
  • ಮುಂಬೈ: 9,240 ರೂ
  • ದೆಹಲಿ: 9,240 ರೂ
  • ಕೋಲ್ಕತಾ: 9,240 ರೂ
  • ಕೇರಳ: 9,990 ರೂ
  • ಅಹ್ಮದಾಬಾದ್: 9,240 ರೂ
  • ಜೈಪುರ್: 9,240 ರೂ
  • ಲಕ್ನೋ: 9,240 ರೂ
  • ಭುವನೇಶ್ವರ್: 9,990 ರೂ
  • ಪುಣೆ: 9,050

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ