ಚಿನ್ನ
ಬೆಂಗಳೂರು, ಮಾರ್ಚ್ 11: ಚಿನ್ನ ಮತ್ತು ಬೆಳ್ಳಿ ಬೆಲೆಗಳ (Gold and silver Rates) ಅಸ್ವಾಭಾವಿಕ ಏರಿಕೆಯ ಓಟ ಮುಂದುವರಿದಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆ ಶೇ. 6ರಷ್ಟು ಹೆಚ್ಚಳವಾಗಿದೆ. ಅಮೆರಿಕದಲ್ಲಿ ಬಡ್ಡಿದರ ಕಡಿತ ಮಾಡುವ ಸಂಭಾವ್ಯತೆಗೆ ಸಿಕ್ಕಿರುವ ಸ್ಪಂದನೆ ಇದು. ನಿರೀಕ್ಷೆಗಿಂತಲೂ ಬೆಲೆ ಹೆಚ್ಚಳವಾಗಿದೆ. ಹತ್ತು ದಿನದಲ್ಲಿ ಒಂದು ಗ್ರಾಮ್ ಚಿನ್ನದ ಬೆಲೆ 320 ರೂಗೂ ಹೆಚ್ಚಾಗಿರುವುದು ಗಮನಾರ್ಹ. ಮದುವೆ ಸೀಸನ್ ಇರುವ ಭಾರತದಲ್ಲಿ ಈಗ ಜನರಿಗೆ ಈ ಬೆಲೆ ಏರಿಕೆ ಬಿಸಿ ತಾಕಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 60,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 66,270 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,570 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 60,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,500 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 11ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,750 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,270 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 757 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,750 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,270 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 750 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 60,750 ರೂ
- ಚೆನ್ನೈ: 61,500 ರೂ
- ಮುಂಬೈ: 60,750 ರೂ
- ದೆಹಲಿ: 60,900 ರೂ
- ಕೋಲ್ಕತಾ: 60,750 ರೂ
- ಕೇರಳ: 60,750 ರೂ
- ಅಹ್ಮದಾಬಾದ್: 60,800 ರೂ
- ಜೈಪುರ್: 60,900 ರೂ
- ಲಕ್ನೋ: 60,900 ರೂ
- ಭುವನೇಶ್ವರ್: 60,750 ರೂ
ಇದನ್ನೂ ಓದಿ: ಮಾ. 1ರ ವಾರದಲ್ಲಿ ಭಾರತದ ಫಾರೆಕ್ಸ್ ಮೀಸಲು ನಿಧಿ 625 ಬಿಲಿಯನ್ ಡಾಲರ್ಗೆ ಏರಿಕೆ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 3,250 ರಿಂಗಿಟ್ (57,417 ರುಪಾಯಿ)
- ದುಬೈ: 2,445 ಡಿರಾಮ್ (55,086 ರುಪಾಯಿ)
- ಅಮೆರಿಕ: 665 ಡಾಲರ್ (55,029 ರುಪಾಯಿ)
- ಸಿಂಗಾಪುರ: 904 ಸಿಂಗಾಪುರ್ ಡಾಲರ್ (56,188 ರುಪಾಯಿ)
- ಕತಾರ್: 2,500 ಕತಾರಿ ರಿಯಾಲ್ (56,724 ರೂ)
- ಸೌದಿ ಅರೇಬಿಯಾ: 2,510 ಸೌದಿ ರಿಯಾಲ್ (55,378 ರುಪಾಯಿ)
- ಓಮನ್: 264.50 ಒಮಾನಿ ರಿಯಾಲ್ (56,858 ರುಪಾಯಿ)
- ಕುವೇತ್: 206 ಕುವೇತಿ ದಿನಾರ್ (55,514 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,500 ರೂ
- ಚೆನ್ನೈ: 7,920 ರೂ
- ಮುಂಬೈ: 7,570 ರೂ
- ದೆಹಲಿ: 7,570 ರೂ
- ಕೋಲ್ಕತಾ: 7,570 ರೂ
- ಕೇರಳ: 7,920 ರೂ
- ಅಹ್ಮದಾಬಾದ್: 7,570 ರೂ
- ಜೈಪುರ್: 7,570 ರೂ
- ಲಕ್ನೋ: 7,570 ರೂ
- ಭುವನೇಶ್ವರ್: 7,920 ರೂ
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ