ಚಿನ್ನ
ಬೆಂಗಳೂರು, ಮಾರ್ಚ್ 19: ಚಿನ್ನ ಮತ್ತು ಬೆಳ್ಳಿ ಬೆಲೆಗಳ (Gold and Silver Price) ಭರ್ಜರಿ ಏರಿಕೆ ಮುಂದುವರಿದಿದೆ. ಎರಡೂ ಬೆಲೆಗಳು ಹೊಸ ದಾಖಲೆ ಮಾಡಿವೆ. ಆಭರಣ ಚಿನ್ನದ ಬೆಲೆ ಭಾರತದಲ್ಲಿ ಮೊದಲ ಬಾರಿಗೆ 8,300 ರೂ ಗಡಿ ದಾಟಿದೆ. ದೆಹಲಿ, ಜೈಪುರ್, ಲಕ್ನೋ ಮೊದಲಾದ ಕೆಲವೆಡೆ 22 ಕ್ಯಾರಟ್ ಚಿನ್ನದ ಬೆಲೆ ಇಂದು ಬುಧವಾರ 8,305 ರೂಗೆ ಏರಿದೆ. ಬೆಂಗಳೂರಿನಲ್ಲಿ ಇದರ ಬೆಲೆ 8,290 ರೂ ಮುಟ್ಟಿದೆ. ಬಹುತೇಕ ಎಲ್ಲಾ ದೇಶಗಳಲ್ಲೂ ಚಿನ್ನದ ಬೆಲೆ ಗಣನೀಯವಾಗಿ ಹೆಚ್ಚುತ್ತಿದೆ. ಕೆಲವೆಡೆ ಬೆಲೆ 8,200 ರೂ ಗಡಿ ದಾಟಿದೆ. ಬೆಳ್ಳಿ ಬೆಲೆಯೂ ಏರಿಕೆಯಾಗುವುದು ಮುಂದುವರಿದಿದೆ. ನಿನ್ನೆಯಂತೆ ಇಂದೂ ಕೂಡ ಭಾರತದಲ್ಲಿ ಬೆಳ್ಳಿ ಬೆಲೆ ಗ್ರಾಮ್ಗೆ ಒಂದು ರೂನಷ್ಟು ಹೆಚ್ಚಳ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 82,900 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 90,440 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 82,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,500 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 19ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,900 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,440 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,830 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,050 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,900 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,440 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,050 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 82,900 ರೂ
- ಚೆನ್ನೈ: 82,900 ರೂ
- ಮುಂಬೈ: 82,900 ರೂ
- ದೆಹಲಿ: 83,050 ರೂ
- ಕೋಲ್ಕತಾ: 82,900 ರೂ
- ಕೇರಳ: 82,900 ರೂ
- ಅಹ್ಮದಾಬಾದ್: 82,950 ರೂ
- ಜೈಪುರ್: 83,050 ರೂ
- ಲಕ್ನೋ: 83,050 ರೂ
- ಭುವನೇಶ್ವರ್: 82,900 ರೂ
ಇದನ್ನೂ ಓದಿ: ಷೇರು ಟಿಪ್ಸ್; ಸಮಯ ಬಂದಾಗ ಮಾರಿಬಿಡಿ; ಕಂಪನಿ ಚೆನ್ನಾಗಿದೆ ಅಂತ ಕೊನೆ ತನಕ ಇಟ್ಕೋಬೇಡಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 4,240 ರಿಂಗಿಟ್ (82,900 ರುಪಾಯಿ)
- ದುಬೈ: 3,382.50 ಡಿರಾಮ್ (79,790 ರುಪಾಯಿ)
- ಅಮೆರಿಕ: 920 ಡಾಲರ್ (79,700 ರುಪಾಯಿ)
- ಸಿಂಗಾಪುರ: 1,258 ಸಿಂಗಾಪುರ್ ಡಾಲರ್ (81,850 ರುಪಾಯಿ)
- ಕತಾರ್: 3,415 ಕತಾರಿ ರಿಯಾಲ್ (81,160 ರೂ)
- ಸೌದಿ ಅರೇಬಿಯಾ: 3,460 ಸೌದಿ ರಿಯಾಲ್ (79,920 ರುಪಾಯಿ)
- ಓಮನ್: 359.50 ಒಮಾನಿ ರಿಯಾಲ್ (80,900 ರುಪಾಯಿ)
- ಕುವೇತ್: 278.30 ಕುವೇತಿ ದಿನಾರ್ (78,300 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 10,500 ರೂ
- ಚೆನ್ನೈ: 11,400 ರೂ
- ಮುಂಬೈ: 10,500 ರೂ
- ದೆಹಲಿ: 10,500 ರೂ
- ಕೋಲ್ಕತಾ: 10,500 ರೂ
- ಕೇರಳ: 11,400 ರೂ
- ಅಹ್ಮದಾಬಾದ್: 10,500 ರೂ
- ಜೈಪುರ್: 10,500 ರೂ
- ಲಕ್ನೋ: 10,500 ರೂ
- ಭುವನೇಶ್ವರ್: 11,400 ರೂ
- ಪುಣೆ: 10,500
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ