ಬೆಂಗಳೂರು, ನವೆಂಬರ್ 20: ಕಳೆದ ವಾರ ತೀಕ್ಷ್ಣವಾಗಿ ಏರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and silver Rates) ಶಾಂತಗೊಂಡಿವೆ. ಭಾರತದಲ್ಲಿ ಬಹುತೇಕ ಯಥಾಸ್ಥಿತಿಯಲ್ಲಿವೆ. ಬೇರೆ ಕೆಲ ದೇಶಗಳಲ್ಲಿ ಚಿನ್ನದ ಬೆಲೆ ತುಸು ಕಡಿಮೆ ಆಗಿದೆ. ಅಮೆರಿಕದ ಬಡ್ಡಿದರ ಏರಿಕೆ ಸಾಧ್ಯತೆಯ ಕಾವು ಸದ್ಯಕ್ಕೆ ಕಡಿಮೆ ಆದಂತಿದೆ. ಈ ವಾರದ ಮುಂದಿನ ದಿನಗಳಲ್ಲಿ ಹೂಡಿಕೆದಾರರ ಚಿತ್ತ ಎತ್ತ ಹರಿಯುತ್ತದೆ ಗಮನಿಸಬೇಕು. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 56,550 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 61,690 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,600 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 56,550 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,525 ರುಪಾಯಿಯಲ್ಲಿ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
ಇದನ್ನೂ ಓದಿ: ಪಿಪಿಎಫ್ ಸೇರಿದಂತೆ ಸರ್ಕಾರದ ಕೆಲ ಸಣ್ಣ ಉಳಿತಾಯ ಯೋಜನೆಗಳ ನಿಯಮದಲ್ಲಿ ಸಕಾರಾತ್ಮಕ ಬದಲಾವಣೆ
ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ