Gold Rate: ಬಂಗಾರ ಮತ್ತಷ್ಟು ಅಗ್ಗ; ನಿನ್ನೆ 395 ರೂ, ಇವತ್ತು 195 ರೂ ಕುಸಿತ

Gold Price 11 June 2026: ಚಿನ್ನದ ಬೆಲೆಯ ಇಳಿಕೆ ಮುಂದುವರಿದಿದೆ. ನಿನ್ನೆ 395 ರೂ ಇಳಿದಿದ್ದ ಇದರ ಬೆಲೆ ಗುರುವಾರ 195 ರೂ ತಗ್ಗಿದೆ. ಆಭರಣ ಚಿನ್ನದ ಬೆಲೆ 13,645 ರೂನಿಂದ 13,350 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 14,564 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್​ಗೆ 250 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 260 ರೂ ಇದೆ.

Gold Rate: ಬಂಗಾರ ಮತ್ತಷ್ಟು ಅಗ್ಗ; ನಿನ್ನೆ 395 ರೂ, ಇವತ್ತು 195 ರೂ ಕುಸಿತ
ಚಿನ್ನ
Image Credit source: Shutterstock

Updated on: Jun 11, 2026 | 11:24 AM

ನವದೆಹಲಿ, ಜೂನ್ 11: ನಿನ್ನೆ ಬರೋಬ್ಬರಿ 395 ರೂಗಳಷ್ಟು ಭರ್ಜರಿ ಇಳಿಕೆ ಕಂಡಿದ್ದ ಆಭರಣ ಚಿನ್ನದ ಬೆಲೆ (Gold Rates) ಇವತ್ತು ಗುರುವಾರವೂ 195 ರೂ ಕುಸಿತ ಕಂಡಿದೆ. ಎರಡು ದಿನದಲ್ಲಿ ಬಂಗಾರದ ದರ ಸುಮಾರು 600 ರೂಗಳಷ್ಟು ಕಡಿಮೆಗೊಂಡಿದೆ. ವಿದೇಶಗಳಲ್ಲೂ ಇದರ ಬೆಲೆಯಲ್ಲಿ ಭರ್ಜರಿ ಕುಸಿತವಾಗಿದೆ. ಆದರೆ, ಸತತ ಎರಡು ಬಾರಿ ಇಳಿಕೆ ಕಂಡಿದ್ದ ಬೆಳ್ಳಿ ಬೆಲೆ ಗುರುವಾರ ಶಾಂತವಾಗಿದೆ. ಅದರ ಬೆಲೆ ಗ್ರಾಮ್​ಗೆ 250 ರೂನಲ್ಲಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,33,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,45,640 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,33,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 11ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,564 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,350 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,923 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,564 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,350 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,350 ರೂ
  • ಚೆನ್ನೈ: 13,500 ರೂ
  • ಮುಂಬೈ: 13,350 ರೂ
  • ದೆಹಲಿ: 13,365 ರೂ
  • ಕೋಲ್ಕತಾ: 13,350 ರೂ
  • ಕೇರಳ: 13,350 ರೂ
  • ಅಹ್ಮದಾಬಾದ್: 13,355 ರೂ
  • ಜೈಪುರ್: 13,365 ರೂ
  • ಲಕ್ನೋ: 13,365 ರೂ
  • ಭುವನೇಶ್ವರ್: 13,350 ರೂ

ಇದನ್ನೂ ಓದಿ: ಇಂಧನ ಕ್ರಾಂತಿ: ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಸಂಪೂರ್ಣ ಮನ್ನಾ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 551 ರಿಂಗಿಟ್ (12,954 ರುಪಾಯಿ)
  • ದುಬೈ: 496 ಡಿರಾಮ್ (12,917 ರುಪಾಯಿ)
  • ಅಮೆರಿಕ: 136 ಡಾಲರ್ (13,010 ರುಪಾಯಿ)
  • ಸಿಂಗಾಪುರ: 179.50 ಸಿಂಗಾಪುರ್ ಡಾಲರ್ (13,362 ರುಪಾಯಿ)
  • ಕತಾರ್: 499 ಕತಾರಿ ರಿಯಾಲ್ (13,093 ರೂ)
  • ಸೌದಿ ಅರೇಬಿಯಾ: 514 ಸೌದಿ ರಿಯಾಲ್ (13,098 ರುಪಾಯಿ)
  • ಓಮನ್: 52.85 ಒಮಾನಿ ರಿಯಾಲ್ (13,139 ರುಪಾಯಿ)
  • ಕುವೇತ್: 43.55 ಕುವೇತಿ ದಿನಾರ್ (13,558 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 250 ರೂ
  • ಚೆನ್ನೈ: 260 ರೂ
  • ಮುಂಬೈ: 250 ರೂ
  • ದೆಹಲಿ: 250 ರೂ
  • ಕೋಲ್ಕತಾ: 250 ರೂ
  • ಕೇರಳ: 260 ರೂ
  • ಅಹ್ಮದಾಬಾದ್: 250 ರೂ
  • ಜೈಪುರ್: 250 ರೂ
  • ಲಕ್ನೋ: 250 ರೂ
  • ಭುವನೇಶ್ವರ್: 260 ರೂ
  • ಪುಣೆ: 250

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us