AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಧನ ಕ್ರಾಂತಿ: ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಸಂಪೂರ್ಣ ಮನ್ನಾ

ಕೇಂದ್ರ ಸರ್ಕಾರವು ಶೇ.22 ರಿಂದ 30ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ (E22-E30) ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ಮನ್ನಾ ಮಾಡಿದೆ. ಇದು ಭಾರತದ ಇಂಧನ ಸ್ವಾವಲಂಬನೆ, ಪರಿಸರ ಸಂರಕ್ಷಣೆ ಮತ್ತು ಕೃಷಿ ವಲಯಕ್ಕೆ ಲಾಭ ತರಲಿದೆ. ಎಥೆನಾಲ್ ಮಿಶ್ರಣದಲ್ಲಿ ದೇಶದ ಅದ್ಭುತ ಪ್ರಗತಿಯನ್ನು ಇದು ಮತ್ತಷ್ಟು ಉತ್ತೇಜಿಸಲಿದೆ.

ಇಂಧನ ಕ್ರಾಂತಿ: ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಸಂಪೂರ್ಣ ಮನ್ನಾ
ಪೆಟ್ರೋಲ್Image Credit source: The Economic Times
ನಯನಾ ರಾಜೀವ್
|

Updated on:Jun 11, 2026 | 9:31 AM

Share

ನವದೆಹಲಿ, ಜೂನ್ 11: ಹೆಚ್ಚಿನ ಶೇಕಡಾವಾರು ಎಥೆನಾಲ್‌ನೊಂದಿಗೆ ಬೆರೆಸಿದ ಪೆಟ್ರೋಲ್(Petrol) ಮೇಲಿನ ಅಬಕಾರಿ ಸುಂಕದಿಂದ ವಿನಾಯಿತಿ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಹಣಕಾಸು ಸಚಿವಾಲಯದ ಅಡಿಯಲ್ಲಿರುವ ಕಂದಾಯ ಇಲಾಖೆಯು ಈ ಕುರಿತು ಹೊಸ ಅಧಿಸೂಚನೆಯನ್ನು ಹೊರಡಿಸಿದೆ. ಸರ್ಕಾರವು 2002 ಮತ್ತು 2017 ರಲ್ಲಿ ಹೊರಡಿಸಲಾದ ಹಿಂದಿನ ಅಬಕಾರಿ ಸುಂಕ ನಿಯಮಗಳನ್ನು ನವೀಕರಿಸಿದೆ.

ಶೂನ್ಯ ತೆರಿಗೆ ವ್ಯಾಪ್ತಿಗೆ ಬರುವ ಇಂಧನಗಳು ಯಾವುವು? ಇದುವರೆಗೆ ಕೇವಲ ಕಡಿಮೆ ಪ್ರಮಾಣದ ಎಥೆನಾಲ್ ಮಿಶ್ರಣಗಳಿಗೆ (E20 ವರೆಗೆ) ಮಾತ್ರ ಲಭ್ಯವಿದ್ದ ತೆರಿಗೆ ವಿನಾಯಿತಿಯನ್ನು ಈಗ ಸರ್ಕಾರವಯ ಶೇ.22 ರಿಂದ ಶೇ.30ರಷ್ಟು ಹೆಚ್ಚಿನ ಎಥೆನಾಲ್ ಮಿಶ್ರಣ ಹೊಂದಿರುವ ಇಂಧನಗಳಿಗೂ ವಿಸ್ತರಿಸಿದೆ. ಹೊಸ ನಿಯಮದ ಪ್ರಕಾರ ಕೆಳಗಿನ ಇಂಧನ ರೂಪಾಂತರಗಳ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ:

E22 (ಶೇ.22 ಎಥೆನಾಲ್, ಶೇ.78 ಪೆಟ್ರೋಲ್)

E25 (ಶೇ.25 ಎಥೆನಾಲ್, ಶೇ.75 ಪೆಟ್ರೋಲ್)

E27 (ಶೇ. 27 ಎಥೆನಾಲ್, ಶೇ.73 ಪೆಟ್ರೋಲ್)

E30 (ಶೇ.30 ಎಥೆನಾಲ್, ಶೇ.70 ಪೆಟ್ರೋಲ್)

ಈ ಇಂಧನಗಳ ಮೇಲೆ ಕೇಂದ್ರ ಅಬಕಾರಿ ಸುಂಕ, ವಿಶೇಷ ಹೆಚ್ಚುವರಿ ಅಬಕಾರಿ ಸುಂಕ, ರಸ್ತೆ ಮತ್ತು ಮೂಲಸೌಕರ್ಯ ಸೆಸ್ ಹಾಗೂ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್​ಗಳನ್ನು ಸಂಪೂರ್ಣವಾಗಿ ರದ್ದುಗಿಳಿಸಲಾಗಿದೆ. ಈ ಎಲ್ಲಾ ಮಿಶ್ರಣಗಳು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್​ ನಿಯಮಗಳಿಗೆ ಒಳಪಟ್ಟಿರುತ್ತದೆ.

ಮತ್ತಷ್ಟು ಓದಿ: CNG Price Hike: ಪೆಟ್ರೋಲ್, ಡೀಸೆಲ್​ ಆಯ್ತು ಈಗ ಸಿಎನ್​ಜಿ ದರ ಏರಿಕೆ! ವಾಹನ ಸವಾರರಿಗೆ ಶಾಕ್​

ಎಥೆನಾಲ್ ಮಿಶ್ರಣದಲ್ಲಿ ಭಾರತದ ಅದ್ಭುತ ಪ್ರಗತಿ ಭಾರತವು ತನ್ನ ಇಂಧನ ಗುರಿಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ತಲುಪುತ್ತಾ ಸಾಗುತ್ತಿದೆ. ಜೈವಿಕ ಇಂಧನಗಳ ರಾಷ್ಟ್ರೀಯ ನೀತಿಯ ಅಡಿಯಲ್ಲಿ, ಪೆಟ್ರೋಲ್‌ನಲ್ಲಿ 20% ಎಥೆನಾಲ್ ಮಿಶ್ರಣ ಮಾಡುವ (E20) ಗುರಿಯನ್ನು 2030 ರ ಬದಲಿಗೆ 2025-26 ಕ್ಕೇ ಮುಂಚಿತವಾಗಿ ಸಾಧಿಸಲು ಶ್ರಮಿಸಲಾಗುತ್ತಿದೆ.

ಇಂಧನ ಸರಬರಾಜು ವರ್ಷ (ESY) ಎಥೆನಾಲ್ ಮಿಶ್ರಣದ ಶೇಕಡಾವಾರು 2022-23 12.06% 2023-24 14.60% 2024-25 (ಫೆಬ್ರವರಿ 2025 ರವರೆಗೆ)17.98%

ಈ ತ್ವರಿತ ಬೆಳವಣಿಗೆಯಿಂದಾಗಿ ಭಾರತವು ಈಗಾಗಲೇ ಶೇ. 10 ರಷ್ಟು ಮಿಶ್ರಣದ ಗುರಿಯನ್ನು ಐದು ತಿಂಗಳು ಮುಂಚಿತವಾಗಿಯೇ ಸಾಧಿಸಿ ಯಶಸ್ವಿಯಾಗಿದೆ. ಈಗ ಇಲಾಖೆಯು E30 ವರೆಗಿನ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿದೆ.

ದೇಶಕ್ಕೆ ಮೂರು ದೊಡ್ಡ ಲಾಭಗಳು: ಮಾಲಿನ್ಯ ಮುಕ್ತ ಮತ್ತು ರೈತಸ್ನೇಹಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಹೇಳಿದಂತೆ, ಪ್ರಸ್ತುತ ಭಾರತವು ತನ್ನ ಕಚ್ಚಾ ತೈಲ ಅಗತ್ಯತೆಯ ಶೇ. 87 ರಷ್ಟನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಈ ಹೊಸ ನೀತಿಯಿಂದ ದೇಶಕ್ಕೆ ಮೂರು ಪ್ರಮುಖ ಲಾಭಗಳಾಗಲಿವೆ.

ಆರ್ಥಿಕ ಸ್ವಾವಲಂಬನೆ: ಇಂಧನ ಆಮದಿಗಾಗಿ ವಿದೇಶಗಳಿಗೆ ಹರಿದು ಹೋಗುತ್ತಿದ್ದ ಕೋಟ್ಯಂತರ ರೂಪಾಯಿ ಹಣ ದೇಶದ ಒಳಗೇ ಉಳಿಯುತ್ತದೆ.

ಪರಿಸರ ಸಂರಕ್ಷಣೆ: ಎಥೆನಾಲ್ ಒಂದು ‘ಹಸಿರು ಇಂಧನ’ (Green Fuel) ಆಗಿರುವುದರಿಂದ, ಪಳೆಯುಳಿಕೆ ಇಂಧನಗಳ ಬಳಕೆಗೆ ಹೋಲಿಸಿದರೆ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ.

ಕೃಷಿ ವಲಯಕ್ಕೆ ಆದಾಯ: ಕಬ್ಬು ಮತ್ತು ಧಾನ್ಯಗಳಿಂದ ಎಥೆನಾಲ್ ತಯಾರಿಸುವುದರಿಂದ, ದೇಶದ ರೈತರು, ಗ್ರಾಮೀಣ ಯುವಕರು ಮತ್ತು ಕೃಷಿ ಆಧಾರಿತ ಕೈಗಾರಿಕೆಗಳಿಗೆ ನೇರ ಆರ್ಥಿಕ ಲಾಭ ಸಿಗಲಿದೆ.

ಭವಿಷ್ಯದ ಆಶಾವಾದ: ಇ20 ಇಂಧನ ಜಾರಿಗೆ ಬಂದಾಗ ಎಂಜಿನ್ ಹೊಂದಾಣಿಕೆಯ ಬಗ್ಗೆ ಕೆಲವು ಕಳವಳಗಳು ವ್ಯಕ್ತವಾಗಿದ್ದರೂ, ಸೆಪ್ಟೆಂಬರ್ 2025 ರಲ್ಲಿ ಸುಪ್ರೀಂ ಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸಿ, ಸರ್ಕಾರದ ಈ ಪರಿವರ್ತನೆಯು ರೈತರಿಗೆ ಪೂರಕವಾಗಿದೆ ಎಂದು ಎತ್ತಿಹಿಡಿದಿದೆ. ಈಗ ಹೆಚ್ಚಿನ ಎಥೆನಾಲ್ ಮಿಶ್ರಣದ ಪೆಟ್ರೋಲ್ ಮೇಲಿನ ತೆರಿಗೆ ವಿನಾಯಿತಿಯು ತೈಲ ಕಂಪನಿಗಳಿಗೆ ಆರ್ಥಿಕ ಬಲ ತರಲಿದ್ದು, ದೇಶವನ್ನು ಇಂಧನ ಸ್ವಾವಲಂಬನೆಯತ್ತ ಮುನ್ನಡೆಸಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:28 am, Thu, 11 June 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More