Gold Rate: ಚಿನ್ನದ ಬೆಲೆ 100 ರೂ ಇಳಿಕೆ; ಬೆಳ್ಳಿ ದರ ಯಥಾಸ್ಥಿತಿ; ವಿದೇಶಗಳಲ್ಲಿ ಎಷ್ಟಿದೆ ರೇಟು?

Gold Prices Come Down: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಳಿಕೆ ಕಂಡಿವೆ. 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 100 ರೂನಷ್ಟು ಕಡಿಮೆ ಆಗಿದೆ. ನಿನ್ನೆಯೂ ಚಿನ್ನದ ಬೆಲೆ 100 ರೂನಷ್ಟು ಕಡಿಮೆಯಾಗಿತ್ತು. ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ.

Gold Rate: ಚಿನ್ನದ ಬೆಲೆ 100 ರೂ ಇಳಿಕೆ; ಬೆಳ್ಳಿ ದರ ಯಥಾಸ್ಥಿತಿ; ವಿದೇಶಗಳಲ್ಲಿ ಎಷ್ಟಿದೆ ರೇಟು?
ಚಿನ್ನ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 22, 2023 | 5:00 AM

ಭಾರತದಲ್ಲಿ ಚಿನ್ನದ ಬೆಲೆ ಮತ್ತಷ್ಟು ಇಳಿದಿದೆ. ಬೆಳ್ಳಿ ಬೆಲೆ ಬಹುತೇಕ ಯಥಾಸ್ಥಿತಿಯಲ್ಲಿದೆ. ಬೆಳ್ಳಿ 100 ಗ್ರಾಮ್​ಗೆ 6850 ರೂ ಬೆಲೆ ಹೊಂದಿದೆ. ಚಿನ್ನದ ಬೆಲೆ 10 ಗ್ರಾಮ್​ಗೆ 100 ರೂ ಇಳಿದಿದೆ. ಈಗ 100 ಗ್ರಾಮ್ ಚಿನ್ನದ ಬೆಲೆ 52,100 ರೂಗೆ ಬಂದು ನಿಂತಿದೆ. ನಿನ್ನೆಯೂ ಚಿನ್ನದ ಬೆಲೆ 100 ರೂನಷ್ಟು ಇಳಿಕೆ ಕಂಡಿತ್ತು. ವಿಶ್ಲೇಷಕರ ಪ್ರಕಾರ, ಅಮೆರಿಕದ ಆರ್ಥಿಕತೆ ತುಸು ಉತ್ತಮಗೊಳ್ಳುತ್ತಿರುವುದರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲಾಗುತ್ತಿದೆ. ಚಿನ್ನದ ದರಗಳು ಇಳಿಕೆ ಕಾಣುತ್ತಿವೆ.

24 ಕ್ಯಾರಟ್ ಚಿನ್ನದ ವಿಚಾರಕ್ಕೆ ಬಂದರೆ 10 ಗ್ರಾಂಗೆ 100 ರೂನಷ್ಟು ಬೆಲೆ ಇಳಿಕೆಯಾಗಿದೆ. 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ ಈಗ 56,730 ರೂ ಇದೆ. 24 ಕ್ಯಾರಟ್ ಚಿನ್ನ ಎಂದರೆ ಅಪರಂಜಿ ಚಿನ್ನ ಅಥವಾ ಶುದ್ಧ ಚಿನ್ನ. 22 ಕ್ಯಾರಟ್ ಚಿನ್ನ ಆಭರಣಕ್ಕೆ ಬಳಸುವ ಚಿನ್ನವಾಗಿದೆ. ಇದು ತುಸು ಬೇರೆ ವಸ್ತುಗಳ ಬೆರಕೆಯಾಗಿರುತ್ತದೆ.

ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಇಂದು 10 ಗ್ರಾಂಗೆ 52,050 ರೂ ಇದ್ದರೆ 24 ಕ್ಯಾರಟ್ ಚಿನ್ನದ ಬೆಲೆ 56,780 ರೂ ಇದೆ. ದುಬೈನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ತುಸು ಇಳಿದಿದೆ. 10 ಗ್ರಾಮ್​ಗೆ 2070 ದಿನಾರ್ ಇದ್ದದ್ದು ಈಗ 2,055ಕ್ಕೆ ಇಳಿದಿದೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ 46,320 ರೂ ಇದೆ

ಇನ್ನು ಬೆಳ್ಳಿ ಬೆಲೆ 100 ಗ್ರಾಮ್​ಗೆ 6,850 ರೂ ಇದೆ. ಬೆಂಗಳೂರಿನಲ್ಲಿ ಬೆಳ್ಳಿ ದರ 7,170 ರೂ ಇದೆ.

2022 ಫೆಬ್ರುವರಿ 22ರ ಬೆಲೆ:

22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ)

ಚೆನ್ನೈ: 52,750 ರೂ

ಮುಂಬೈ: 52,000 ರೂ

ದೆಹಲಿ: 52,150 ರೂ

ಕೋಲ್ಕತಾ: 52,000

ಬೆಂಗಳೂರು: 52,050

ಹೈದರಾಬಾದ್: 52,000

ಕೇರಳ: 52,000 ರೂ

ಪುಣೆ: 52,000 ರೂ

ಅಹ್ಮದಾಬಾದ್: 52,050 ರೂ

ಜೈಪುರ್: 52,150 ರೂ

ಲಕ್ನೋ: 52,150 ರೂ

24 ಕ್ಯಾರಟ್ ಚಿನ್ನದ ಬೆಲೆ:

ಚೆನ್ನೈ: 57,550 ರೂ

ಮುಂಬೈ: 56,730 ರೂ

ದೆಹಲಿ: 56,880 ರೂ

ಕೋಲ್ಕತಾ: 56,730 ರೂ

ಬೆಂಗಳೂರು: 56,780 ರೂ

ಹೈದರಾಬಾದ್: 56,730 ರೂ

ಕೇರಳ: 56,730 ರೂ

ಪುಣೆ: 56,730 ರೂ

ಅಹ್ಮದಾಬಾದ್: 56,780 ರೂ

ಜೈಪುರ್: 56,880 ರೂ

ಲಕ್ನೋ: 57,880 ರೂ

ಬೇರೆ ದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ:

ದುಬೈ: 2055 ಅರಬ್ ದಿನಾರ್ (ಸುಮಾರು 46,320 ರೂಪಾಯಿ)

ಸಿಂಗಾಪುರ: 766 ಸಿಂಗಾಪುರ ಡಾಲರ್ (ಸುಮಾರು 47,435 ರೂ)

ಅಮೆರಿಕ: 565 ಡಾಲರ್ (46,776 ರೂ)

ಮಲೇಷ್ಯಾ: 2,610 ರಿಂಗಿಟ್ (48,747 ರೂ)

ಕುವೇತ್: 176 ಕುವೇತ್ ದಿನಾರ್ (47,514 ರೂ)

ಬೆಳ್ಳಿ ಬೆಲೆ 100 ಗ್ರಾಂಗೆ:

ಚೆನ್ನೈ: 7,170 ರೂ

ಮುಂಬೈ: 6,850 ರೂ

ದೆಹಲಿ: 6,830 ರೂ

ಕೋಲ್ಕತಾ: 6,850 ರೂ

ಬೆಂಗಳೂರು: 7,170 ರೂ

ಹೈದರಾಬಾದ್: 7,170 ರೂ

ಕೇರಳ: 7,170 ರೂ

ಪುಣೆ: 6,850 ರೂ

ಅಹ್ಮದಾಬಾದ್: 6,850 ರೂ

ಜೈಪುರ್: 6,850 ರೂ

ಲಕ್ನೋ: 6,850 ರೂ

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ