ಗೂಗಲ್​ನಲ್ಲಿ ಮತ್ತೆ ಲೇ ಆಫ್; ಬೆಂಗಳೂರು, ಮೆಕ್ಸಿಕೋ, ಡುಬ್ಲಿನ್​ನ ತನ್ನ ಘಟಕಗಳಲ್ಲಿ ಕೆಲಸಕ್ಕೆ ಮರು ಅರ್ಜಿ ಸಲ್ಲಿಸಲು ಅವಕಾಶ

Google Layoffs: ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಯಾದ ಗೂಗಲ್ ಮತ್ತೆ ಲೇ ಆಫ್ ಮಾಡಿದೆ. ವಿವಿಧ ತಂಡಗಳ ಫೈನಾನ್ಸ್ ಮತ್ತು ರಿಯಲ್ ಎಸ್ಟೇಟ್ ವಿಭಾಗದಲ್ಲಿ ಸಾಕಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿರುವುದು ತಿಳಿದುಬಂದಿದೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿರುವ ಗೂಗಲ್ ಗ್ರೋತ್ ಹಬ್​ಗಳಲ್ಲಿ ಕೆಲಸಕ್ಕೆ ಮರು ಅರ್ಜಿ ಸಲ್ಲಿಸುವ ಅವಕಾಶ ಈ ಬಾಧಿತ ಉದ್ಯೋಗಿಗಳಿಗೆ ಇರುತ್ತದೆ.

ಗೂಗಲ್​ನಲ್ಲಿ ಮತ್ತೆ ಲೇ ಆಫ್; ಬೆಂಗಳೂರು, ಮೆಕ್ಸಿಕೋ, ಡುಬ್ಲಿನ್​ನ ತನ್ನ ಘಟಕಗಳಲ್ಲಿ ಕೆಲಸಕ್ಕೆ ಮರು ಅರ್ಜಿ ಸಲ್ಲಿಸಲು ಅವಕಾಶ
ಗೂಗಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 18, 2024 | 12:02 PM

ಸ್ಯಾನ್ ಫ್ರಾನ್ಸಿಸ್ಕೋ, ಏಪ್ರಿಲ್ 18: ಗೂಗಲ್ ಸಂಸ್ಥೆ ಮತ್ತೊಂದು ಸುತ್ತಿನ ಲೇ ಆಫ್ (Google Layoffs) ನಡೆಸುತ್ತಿದೆ. ಆದರೆ, ಎಲ್ಲಾ ವಿಭಾಗಗಳಲ್ಲೂ ಕೆಲಸ ಹೋಗುತ್ತಿಲ್ಲ. ಫೈನಾನ್ಸ್ ಮತ್ತು ರಿಯಲ್ ಎಸ್ಟೇಟ್ ವಿಭಾಗದಲ್ಲಿ ಲೇ ಆಫ್ ಆಗುತ್ತಿರುವುದು ಗೊತ್ತಾಗಿದೆ. ಟ್ರೆಷರಿ, ಬಿಸಿನೆಸ್ ಸರ್ವಿಸ್, ರೆವಿನ್ಯೂ ಕ್ಯಾಷ್ ಆಪರೇಶನ್ಸ್ ತಂಡಗಳ ಫೈನಾನ್ಸ್ ವಿಭಾಗದಲ್ಲಿ (finance dept) ಹೆಚ್ಚು ಮಂದಿಗೆ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಅಧಿಕ ಸಂಖ್ಯೆಯಲ್ಲಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿರುವುದು ಗೊತ್ತಾಗಿದೆ. ವೆಚ್ಚ ಕಡಿತದ ಉದ್ದೇಶದಿಂದ (cost cutting measure) ಈ ಜಾಬ್ ಕಟ್ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ವರದಿಗಳ ಪ್ರಕಾರ ಕೆಲಸದಿಂದ ತೆಗೆದುಹಾಕಲಾಗುತ್ತಿರುವ ಉದ್ಯೋಗಿಗಳಿಗೆ ಗೂಗಲ್​ನ ಮ್ಯಾನೇಜ್ಮೆಂಟ್​ನಿಂದ ಮಾಹಿತಿ ನೀಡಲಾಗಿದೆ.

ಎಷ್ಟು ಮಂದಿಗೆ ಕೆಲಸ ಹೋಗುತ್ತಿದೆ ಎಂಬುದು ಗೊತ್ತಾಗಿಲ್ಲ. ಆದರೆ, ಇಂಟರ್ನಲ್ ರೋಲ್​ಗಳಿಗೆ ಈ ಉದ್ಯೋಗಿಗಳು ಮರು ಅರ್ಜಿ ಸಲ್ಲಿಸುವ ಅವಕಾಶ ಹೊಂದಿರುತ್ತಾರೆ. ಬೆಂಗಳೂರು, ಮೆಕ್ಸಿಕೋ ಸಿಟಿ, ಡುಬ್ಲಿನ್ ಮೊದಲಾದ ನಗರಗಳಲ್ಲಿ ತನ್ನ ಗ್ರೋತ್ ಹಬ್​ಗಳನ್ನು ವಿಸ್ತರಿಸುವ ಪ್ಲಾನ್ ಮಾಡಲಾಗಿದ್ದು ಅಲ್ಲಿಗೆ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಇಂಟರ್ನಲ್ ಮೇಲ್​ನಲ್ಲಿ ಉದ್ಯೋಗಿಗಳಿಗೆ ಅಫರ್ ಮಾಡಲಾಗಿದೆ.

ಗೂಗಲ್​ನಲ್ಲಿ ಕಳೆದ ಎರಡು ವರ್ಷದಿಂದ ಅಧಿಕ ಪ್ರಮಾಣದಲ್ಲಿ ಲೇ ಆಫ್ ಆಗಿದೆ. 2022ರಲ್ಲಿ ಶೇ. 6ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡುವ ಬಹಳ ಕಠಿಣ ನಿರ್ಧಾರವನ್ನು ಗೂಗಲ್ ಕೈಗೊಂಡಿತ್ತು. ಶೇ. 6ಎಂದರೆ ಬರೋಬ್ಬರಿ 12,000 ಗೂಗಲ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು. ಸಿಇಒ ಸುಂದರ್ ಪಿಚೈ ಈ ದೊಡ್ಡ ಲೇ ಆಫ್ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಬ್ ಕಟ್ ಇರುವುದಾಗಿಯೂ ಸುಳಿವು ನೀಡಿದ್ದರು.

ಇದನ್ನೂ ಓದಿ: ಚೈನ್ ಸ್ಮೋಕರ್ಸ್ 30 ವರ್ಷ ಬದುಕಬಲ್ಲುರು, ಈ ಎಫ್ ಅಂಡ್ ಒ ಟ್ರೇಡರ್ಸ್ ಬೇಗ ‘ಹೊಗೆ’ನೇ: ವಿಜಯ್ ಕೇದಿಯಾ

ಅದರಂತೆ 2023ರ ವರ್ಷದ ದ್ವಿತೀಯಾರ್ಧದಿಂದ ಗೂಗಲ್ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಎಂಜಿನಿಯರಿಂಗ್, ಹಾರ್ಡ್​ವೇರ್ ಮತ್ತು ಅಸಿಸ್ಟಂಟ್ ಟೀಮ್​ಗಳು ಸೇರಿದಂತೆ ವಿವಿಧ ತಂಡಗಳಲ್ಲಿನ ನೂರಾರು ಉದ್ಯೋಗಿಗಳನ್ನು ಜನವರಿಯಲ್ಲಿ ಲೇ ಆಫ್ ಮಾಡಲಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ