ನಟಿ ಶಿಲ್ಪಾ ಶೆಟ್ಟಿ ಮನೆ ಸೀಜ್ ಮಾಡಲು ಕಾರಣವಾದ ಬಿಟ್​ಕಾಯಿನ್ ಹಗರಣ ಏನದು? ರಾಜ್ ಕುಂದ್ರಾ ಪಾತ್ರವೇನು, ಇಲ್ಲಿದೆ ಡೀಟೇಲ್ಸ್

6,606 crore bitcoin scam and Raj Kundra involvement: ತಿಂಗಳಿಗೆ ಶೇ. 10ರಂತೆ ಲಾಭ ಕೊಡುವುದಾಗಿ ಹೇಳಿ ಭಾರತದಾದ್ಯಂತ ಹೂಡಿಕೆದಾರರಿಂದ ಸಾವಿರಾರು ಕೋಟಿ ರೂ ಮೌಲ್ಯದ ಬಿಟ್​ಕಾಯಿನ್​ಗಳನ್ನು ಸಂಗ್ರಹಿಸಿ ವಂಚಿಸಿರುವ ಮಹಾ ಹಗರಣ ಇದು. 6,606 ಕೋಟಿ ರೂ ಮೊತ್ತದ ಈ ಹಗರಣದ ತನಿಖೆಯನ್ನು ಇಡಿ 2018ರಿಂದ ನಡೆಸುತ್ತಿದೆ. ಈ ಹಗರಣದ ರೂವಾರಿಗಳಿಂದ ರಾಜ್ ಕುಂದ್ರಾ 285 ಬಿಟ್​ಕಾಯಿನ್ ಪಡೆದಿದ್ದರು. ಈ ಸಂಬಂಧ ರಾಜ್ ಕುಂದ್ರಾ ಅವರಿಗೆ ಸೇರಿರುವ ಕೆಲ ಆಸ್ತಿಗಳನ್ನು ಇಡಿ ಜಫ್ತಿ ಮಾಡಿದೆ.

ನಟಿ ಶಿಲ್ಪಾ ಶೆಟ್ಟಿ ಮನೆ ಸೀಜ್ ಮಾಡಲು ಕಾರಣವಾದ ಬಿಟ್​ಕಾಯಿನ್ ಹಗರಣ ಏನದು? ರಾಜ್ ಕುಂದ್ರಾ ಪಾತ್ರವೇನು, ಇಲ್ಲಿದೆ ಡೀಟೇಲ್ಸ್
ಬಿಟ್​ಕಾಯಿನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 18, 2024 | 2:34 PM

ನವದೆಹಲಿ, ಏಪ್ರಿಲ್ 18: ರಾಜ್ ಕುಂದ್ರಾ (Raj Kundra) ಅವರಿಗೆ ಸೇರಿದ್ದೆನ್ನಲಾದ 97.79 ಕೋಟಿ ರೂ ಮೌಲ್ಯದ ವಿವಿಧ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ED) ಜಫ್ತಿ ಮಾಡಿದೆ. ಇದರಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಹೆಸರಿನಲ್ಲಿರುವ ಮುಂಬೈನ ಜುಹುವಿನಲ್ಲಿರುವ ಫ್ಲ್ಯಾಟ್ ಕೂಡ ಒಳಗೊಂಡಿದೆ. ಸಿಂಗಾಪುರದಿಂದ ಕಾರ್ಯ ನಿರ್ವಹಿಸುವ ವೇರಿಯಬಲ್ ಟೆಕ್ ಪ್ರೈ ಲಿ ಎಂಬ ಸಂಸ್ಥೆಯ 6,600 ಕೋಟಿ ರೂ ಮೌಲ್ಯದ ಬಿಟ್​ಕಾಯಿನ್ ಹಗರಣಕ್ಕೆ (Bitcoin scam) ಸಂಬಂಧಿಸಿದ ಬೆಳವಣಿಗೆ ಇದು. ಈ ಮಹಾ ಹಗರಣದಲ್ಲಿ ಪಾಪದ ಹಣದಲ್ಲಿ ರಾಜ್ ಕುಂದ್ರಾದ್ದೂ ಪಾಲಿದೆ ಎನ್ನುವುದು ಇಡಿ ಆರೋಪ. ಜಾರಿ ನಿರ್ದೇಶನಾಲಯ 2018ರಿಂದ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಹೂಡಿಕೆದಾರರಿಗೆ ಸಖತ್ ಲಾಭ ಮಾಡಿಕೊಡುವ ಯೋಜನೆಯ ಆಮಿಷವೊಡ್ಡಿ ಸಾವಿರಾರು ಕೋಟಿ ರೂ ವಂಚನೆ ಎಸಗಲಾಗಿರುವ ಮಹಾ ಹಗರಣ ಇದು. ಈ ಹಗರಣದಲ್ಲಿ ರಾಜ್ ಕುಂದ್ರಾ ಪಾತ್ರ ಏನು, ಈ ಹಗರಣ ಯಾವುದು, ಇದರ ವಿವರ ಇಲ್ಲಿದೆ.

ಯಾವುದಿದು 6,600 ಕೋಟಿ ರೂ ಬಿಟ್​ಕಾಯಿನ್ ಹಗರಣ?

ಸಿಂಗಾಪುರದಲ್ಲಿ ಮುಖ್ಯ ಕಚೇರಿ ಹೊಂದಿರುವ ವೇರಿಯಬಲ್ ಟೆಕ್ ಪ್ರೈ ಲಿ ಸಂಸ್ಥೆ ಬಿಟ್​ಕಾಯಿನ್ ಬಿಸಿನೆಸ್​ನಿಂದ ಭಾರೀ ಲಾಭ ಕೊಡುವುದಾಗಿ ಆಮಿಷವೊಡ್ಡಿ ಭಾರತದಾದ್ಯಂತ 6,606 ಮೌಲ್ಯದ 80,000 ಬಿಟ್​ಕಾಯಿನ್​ಗಳನ್ನು ಸಂಗ್ರಹಿಸಿತ್ತು. ತಿಂಗಳಿಗೆ ಶೇ. 10ರಂತೆ ಲಾಭ ಸಿಗುತ್ತದೆ ಎಂಬ ಮಾತು ನಂಬಿ ಸಾವಿರಾರು ಜನರು ಬಿಟ್​ಕಾಯಿನ್ ಖರೀದಿಸಿ ಕೊಟ್ಟಿದ್ದರು. ಇದರಲ್ಲಿ ಬಹಳಷ್ಟು ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಅಥವಾ ಎಂಎಲ್​ಎಂ ಏಜೆಂಟ್​ಗಳ ಮುಖಾಂತರ ಈ ಕಾರ್ಯ ಮಾಡಿಸಲಾಗಿತ್ತು. ಅಜಯ್ ಭಾರದ್ವಜ್, ಮಹೇಂದರ್ ಭಾರದ್ವಜ್ ಅವರು ಈ ಹಗರಣದ ಪ್ರಮುಖ ಆರೋಪಿಗಳು. ಅಜಯ್ ಭಾರದ್ವಜ್ ಪತ್ನಿ ಸಿಂಪಿ ಭಾರದ್ವಜ್ ಸೇರಿದಂತೆ ಇನ್ನೂ ಹಲವರು ಆರೋಪಿಗಳಿದ್ದಾರೆ.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾಗೆ ಜಾರಿ ನಿರ್ದೇಶನಾಲಯ ಶಾಕ್; 98 ಕೋಟಿ ರೂಪಾಯಿ ಆಸ್ತಿ ಸೀಜ್

ಬಿಟ್​ಕಾಯಿನ್ ಮೈನಿಂಗ್ ಮಾಡಲಾಗುವುದು. ಇದರಿಂದ ಭರ್ಜರಿ ಲಾಭ ಸಿಗುತ್ತದೆ ಎಂದು ಹೂಡಿಕೆದಾರರಿಗೆ ಭರವಸೆ ನೀಡಲಾಗಿತ್ತು. 2017 ಮತ್ತು 2918ರಲ್ಲಿ ದುಬೈ ಮತ್ತು ಮಕಾವೋದಲ್ಲಿ ಈ ಹೂಡಿಕೆ ಸ್ಕೀಮ್ ಬಗ್ಗೆ ವರ್ಣರಂಜಿತವಾಗಿ ಪ್ರಚಾರ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿತ್ತು. ಹೀಗೆ ನಾನಾ ರೀತಿಯ ಆಮಿಷಗಳ ಮೂಲಕ ಹೂಡಿಕೆದಾರರಿಂದ ಸುಮಾರು 80,000 ಬಿಟ್​ಕಾಯಿನ್​ಗಳನ್ನು ಸಂಗ್ರಹಿಸಲಾಗಿತ್ತು. ಈ ಬಿಟ್​ಕಾಯಿನ್​ಗಳನ್ನು ಒಂಬತ್ತು ಸಂಸ್ಥೆಗಳ ಮೂಲಕ ಬೇರೆ ಬೇರೆ ದೇಶಗಳಲ್ಲಿ ಆಸ್ತಿ ಖರೀದಿಸಲು ಬಳಸಲಾಗಿದೆ.

ಏನಿದು ಬಿಟ್​ಕಾಯಿನ್ ಮೈನಿಂಗ್?

ಗೋಲ್ಡ್ ಮೈನಿಂಗ್​ನಲ್ಲಿ ಚಿನ್ನವನ್ನು ಪಡೆದಂತೆ ಬಿಟ್​ಕಾಯಿನ್ ಮೈನಿಂಗ್ ಕೂಡ. ಬಹಳ ಸಂಕೀರ್ಣವಾದ ಗಣಿತದ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಹೊಸ ಬಿಟ್​ಕಾಯಿನ್ ಸೃಷ್ಟಿ ಮಾಡುವುದಕ್ಕೆ ಬಿಟ್​ಕಾಯಿನ್ ಮೈನಿಂಗ್ ಎನ್ನುವುದು. ಬಿಟ್​ಕಾಯಿನ್ ಬ್ಲಾಕ್​ಚೈನ್​ನಲ್ಲಿ ಹೊಸ ಬ್ಲಾಕ್ ಅನ್ನು ಸರಿಯಾಗಿ ವ್ಯಾಲಿಡೇಟ್ ಮಾಡುವ ಒಬ್ಬ ಮೈನರ್​ಗೆ 6.25 ಬಿಟ್​ಕಾಯಿನ್ ಸಿಗುತ್ತದೆ. ಆದರೆ, ಈ ರೀತಿಯ ಮೈನಿಂಗ್​ಗೆ ಕಂಪ್ಯೂಟರ್ ಬಳಕೆ ಸಾಕಷ್ಟಾಗುತ್ತದೆ. ವಿದ್ಯುತ್ ಬಳಕೆ ತೀರಾ ಹೆಚ್ಚಿರುತ್ತದೆ. ಕೆಲ ವರದಿ ಪ್ರಕಾರ ಒಂದು ಬಿಟ್​ಕಾಯಿನ್ ಮೈನ್ ಮಾಡಲು ಬೇಕಾಗುವ ವಿದ್ಯುತ್ ಅನ್ನು ಒಂಬತ್ತು ವರ್ಷ ಕಾಲ ಒಂದು ಮನೆಗೆ ಬಳಸಲು ಸಾಧ್ಯವಂತೆ.

ಇದನ್ನೂ ಓದಿ: ಚೈನ್ ಸ್ಮೋಕರ್ಸ್ 30 ವರ್ಷ ಬದುಕಬಲ್ಲುರು, ಈ ಎಫ್ ಅಂಡ್ ಒ ಟ್ರೇಡರ್ಸ್ ಬೇಗ ‘ಹೊಗೆ’ನೇ: ವಿಜಯ್ ಕೇದಿಯಾ

ಬಿಟ್​ಕಾಯಿನ್ ಹಗರಣದಲ್ಲಿ ರಾಜ್ ಕುಂದ್ರಾ ಪಾತ್ರ ಏನು?

ಈ ಹಗರಣದ ಮಾಸ್ಟರ್​ಮೈಂಡ್ ಎನ್ನಲಾದ ಅಮಿತ್ ಭಾರದ್ವಜ್ ಅವರಿಂದ ರಾಜ್ ಕುಂದ್ರಾ 285 ಬಿಟ್​​ಕಾಯಿನ್​ಗಳನ್ನು ಪಡೆದಿದ್ದಾರೆ ಎನ್ನಲಾಗಿದೆ. ಉಕ್ರೇನ್​ನಲ್ಲಿ ಬಿಟ್​ಕಾಯಿನ್ ಮೈನಿಂಗ್ ಫಾರ್ಮ್ ಅನ್ನು ಸ್ಥಾಪಿಸುವ ಒಪ್ಪಂದದ ಭಾಗವಾಗಿ ರಾಜ್ ಕುಂದ್ರಾ ಈ ಬಿಟ್​ಕಾಯಿನ್ ಪಡೆದಿದ್ದರು. ಆದರೆ, ಮೈನಿಂಗ್ ಫಾರ್ಮ್ ಸ್ಥಾಪನೆ ಆಗಿರಲಿಲ್ಲ. ಆದರೂ ಈ ಬಿಟ್​ಕಾಯಿನ್ ಅನ್ನು ರಾಜ್ ಕುಂದ್ರಾ ಮರಳಿಸಿಲ್ಲ. ಇವುಗಳ ಈಗಿನ ಮೌಲ್ಯ 150 ಕೋಟಿ ರೂ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಶಿಲ್ಪಾ ಶೆಟ್ಟಿ ಅವರ ಪತಿಯಾದ ರಾಜ್ ಕುಂದ್ರಾ ಹೆಸರು ನೀಲಿ ಸಿನಿಮಾ ನಿರ್ಮಾಣ, ಬೆಟ್ಟಿಂಗ್ ಹಗರಣಗಳಲ್ಲೂ ಕೇಳಿಬಂದಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್