AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಟೈಲರ್ ಇವತ್ತು ಬಿಲಿಯನೇರ್; ಸಾವಿರಾರು ಕೋಟಿ ರೂ ಕುಬೇರನಾದರೂ ಮೂಲ ಕಸುಬು ಮರೆತಿಲ್ಲ ರಜಾಕ್

Rag-to-rich story of Prestige Group owner Irfan Razack: ಪ್ರೆಸ್ಟೀಜ್ ಗ್ರೂಪ್​ನ ಪ್ರೆಸ್ಟೀಜ್ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ಸ್ ದೇಶದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಯಾಗಿದೆ. ಬೆಂಗಳೂರು ಮೂಲದ ಪ್ರೆಸ್ಟೀಜ್ ಇವತ್ತು ಷೇರು ಪೇಟೆಯಲ್ಲಿ ಲಿಸ್ಟ್ ಆಗಿರುವ ಎರಡನೇ ಅತಿದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆ. ರಜಾಕ್ ಸತ್ತಾರ್ ಇದರ ಸಂಸ್ಥಾಪಕರು. ಇವರ ಮಗ ಇರ್ಫಾನ್ ರಜಾಕ್ ಸದ್ಯ ಇದರ ಛೇರ್ಮನ್ ಆಗಿದ್ದಾರೆ. ಅಪ್ಪನ ಟೈಲರ್ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದ ಇರ್ಫಾನ್ ಇವತ್ತು ಬಿಲಿಯನೇರ್ ಎನಿಸಿದ್ದಾರೆ. ಬೆಂಗಳೂರು, ಮುಂಬೈ ಮೊದಲಾದ ನಗರಗಳಲ್ಲಿ ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಪೂರ್ಣಗೊಳಿಸಿ ಸೈ ಎನಿಸಿದ್ದಾರೆ.

ಬೆಂಗಳೂರಿನ ಟೈಲರ್ ಇವತ್ತು ಬಿಲಿಯನೇರ್; ಸಾವಿರಾರು ಕೋಟಿ ರೂ ಕುಬೇರನಾದರೂ ಮೂಲ ಕಸುಬು ಮರೆತಿಲ್ಲ ರಜಾಕ್
ಇರ್ಫಾನ್ ರಜಾಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 18, 2024 | 3:53 PM

Share

ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಪ್ರೆಸ್ಟೀಜ್ ಗ್ರೂಪ್ (Prestige Group) ಪ್ರಧಾನ ಹೆಸರು. ಬೆಂಗಳೂರು ಹಾಗೂ ಇತರ ಕೆಲ ಪ್ರಮುಖ ನಗರಗಳಲ್ಲಿ ಬಹಳಷ್ಟು ರಿಯಲ್ ಎಸ್ಟೇಟ್ ಪ್ರಾಜೆಕ್ಟ್​ಗಳನ್ನು ಈ ಸಂಸ್ಥೆ ನಡೆಸಿದೆ. ಅಪ್ಪಟ ಮಧ್ಯಮವರ್ಗದ ಜನರಿಗೆ ಪ್ರತಿಷ್ಠಿತ ಲೇಔಟ್, ಅಪಾರ್ಟ್ಮೆಂಟ್​ಗಳನ್ನು ಈ ಸಂಸ್ಥೆ ನಿರ್ಮಿಸಿಕೊಡುತ್ತದೆ. ಇದರ ಛೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಇರ್ಫಾನ್ ರಜಾಕ್. ಇವರೀಗ ಬಿಲಿಯನೇರ್. ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಎರಡನೇ ಅತಿದೊಡ್ಡ ರಿಯಲ್ ಎಸ್ಟೇಟ್ ಕಂಪನಿ ಇವರದ್ದು. ಆದರೆ, ಇರ್ಫಾನ್ ರಜಾಕ್ ತೀರಾ ಸಾಧಾರಣ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಇವರ ತಂದೆ ದರ್ಜಿಯಾಗಿದ್ದವರು. ಇರ್ಫಾನ್ (Irfan Razack) ಕೂಡ ಟೈಲರ್ ಕೆಲಸ ಮಾಡುತ್ತಲೇ ಬೆಳೆದವರು. ಇವತ್ತು ಭಾರತದ ಅತ್ಯಂತ ಶ್ರೀಮಂತರಲ್ಲಿ ಒಬ್ಬರೆನಿಸಿದ್ದಾರೆ.

ಇರ್ಫಾನ್ ರಜಾಕ್ ತಂದೆ ರಜಾಕ್ ಸತ್ತಾರ್ (Razack Sattar) ಅವರು ಬೆಂಗಳೂರಿನಲ್ಲಿ ಸಣ್ಣ ಬಟ್ಟೆ ಅಂಗಡಿ ಮತ್ತು ಟೈಲರ್ ಶಾಪ್ ಇಟ್ಟುಕೊಂಡಿದ್ದರು. 1950ರಲ್ಲಿ ಅದೇ ಬಿಸಿನೆಸ್​ನಲ್ಲಿ ಬೆಳೆದು ಪ್ರೆಸ್ಟೀಜ್ ಗ್ರೂಪ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. 1953ರಲ್ಲಿ ಹುಟ್ಟಿದ ಇರ್ಫಾನ್ ರಜಾಕ್ ತನ್ನ ತಂದೆಯ ಟೈಲರ್ ಶಾಪ್​ನಲ್ಲಿ ಕೆಲಸ ಮಾಡುತ್ತಲೇ ದೊಡ್ಡವರಾಗುತ್ತಾರೆ. ಮುಂದೆ ಪ್ರೆಸ್ಟೀಜ್ ಗ್ರೂಪ್ ಅನ್ನು ಬಹಳ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾರೆ.

ಇದನ್ನೂ ಓದಿ: ತಾನೇ ಹುಟ್ಟುಹಾಕಿದ 7,000 ಕೋಟಿ ರೂ ಮೌಲ್ಯದ ಕಂಪನಿಯಿಂದ ಹೊರದಬ್ಬಿಸಿಕೊಂಡ ಅಂಕಿತಿಯಿಂದ ಈಗ ಮಾನನಷ್ಟ ಮೊಕದ್ದಮೆಯಲ್ಲಿ ಹೋರಾಟ

ಬೆಂಗಳೂರಿನಲ್ಲಿ ಹೆಸರುವಾಸಿಯಾದ ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್ ಸಂಸ್ಥೆ ಮುಂದೆ ಚೆನ್ನೈ, ಕೊಚ್ಚಿ, ಕ್ಯಾಲಿಕಟ್, ಹೈದರಾಬಾದ್ ಮತ್ತು ಮುಂಬೈ ನಗರಗಳಲ್ಲೂ ರಿಯಲ್ ಎಸ್ಟೇಟ್ ಯೋಜನೆ ವಿಸ್ತರಿಸುತ್ತದೆ. ಇರ್ಫಾನ್ ರಜಾಕ್ ಅವರ ತಮ್ಮಂದಿರಾದ ರಿಜ್ವಾನ್ ಮತ್ತು ನೋವಾಮನ್ ಅವರೂ ಕೂಡ ಇದೇ ಬಿಸಿನೆಸ್​ನಲ್ಲಿ ತೊಡಗಿಸಿಕೊಂಡು ಬೆಳೆಸುತ್ತಿದ್ದಾರೆ.

ಇಲ್ಲಿಯವರೆಗೆ ಇವರ ಕಂಪನಿ 7.5 ಕೋಟಿ ಚದರಡಿಯಷ್ಟು ಕಟ್ಟಡಗಳನ್ನು ನಿರ್ಮಿಸಿದೆ. 285 ಪ್ರಾಜೆಕ್ಟ್​ಗಳನ್ನು ಪೂರ್ಣಗೊಳಿಸಿದೆ. 54 ಪ್ರಾಜೆಕ್ಟ್​​ಗಳು ಸದ್ಯ ಪ್ರಗತಿಯಲ್ಲಿವೆ. ಆ್ಯಪಲ್, ಕ್ಯಾಟರ್​ಪಿಲ್ಲರ್, ಅರ್ಮಾನಿ, ಲೂಯಿಸ್ ವ್ಯೂಟಾನ್ ಮೊದಲಾದ ಪ್ರತಿಷ್ಠಿತ ಕ್ಲೈಂಟ್​ಗಳಿಗೆ ಕಟ್ಟಡ ನಿರ್ಮಿಸಿಕೊಟ್ಟಿದೆ.

ಇದನ್ನೂ ಓದಿ: ನಟಿ ಶಿಲ್ಪಾ ಶೆಟ್ಟಿ ಮನೆ ಸೀಜ್ ಮಾಡಲು ಕಾರಣವಾದ ಬಿಟ್​ಕಾಯಿನ್ ಹಗರಣ ಏನದು? ರಾಜ್ ಕುಂದ್ರಾ ಪಾತ್ರವೇನು, ಇಲ್ಲಿದೆ ಡೀಟೇಲ್ಸ್

ಇವತ್ತು ಇರ್ಫಾನ್ ರಜಾಕ್ ಅವರ ನಿವ್ವಳ ಆಸ್ತಿ ಮೌಲ್ಯ 1.3 ಬಿಲಿಯನ್ ಡಾಲರ್ ಇದೆ. ಇಷ್ಟು ಬೆಳೆದರೂ ರಜಾಕ್ ಕುಟುಂಬ ಅವರ ಮೂಲವನ್ನು ಬಿಟ್ಟಿಲ್ಲ. ಈಗಲೂ ಕೂಡ ಫ್ಯಾಬ್ರಿಕ್ ಮತ್ತು ಟೈಲರಿಂಗ್ ಶಾಪ್ ಅನ್ನು ನಡೆಸಿಕೊಂಡು ಹೋಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:53 pm, Thu, 18 April 24

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!