ತಾನೇ ಹುಟ್ಟುಹಾಕಿದ 7,000 ಕೋಟಿ ರೂ ಮೌಲ್ಯದ ಕಂಪನಿಯಿಂದ ಹೊರದಬ್ಬಿಸಿಕೊಂಡ ಅಂಕಿತಿಯಿಂದ ಈಗ ಮಾನನಷ್ಟ ಮೊಕದ್ದಮೆಯಲ್ಲಿ ಹೋರಾಟ

Ankiti Bose story: ಉತ್ತರಾಖಂಡ್​ನ ಡೆಹ್ರಾಡೂನ್ ಮೂಲಕ ಅಂಕಿತಿ ಬೋಸ್ 23ನೇ ವಯಸ್ಸಿನಲ್ಲಿ ಜಿಲಿಂಗೋ ಎಂಬ ಕಂಪನಿಯನ್ನು ಸ್ಥಾಪಿಸಿದ್ದರು. 2015ರಲ್ಲಿ ಸ್ಥಾಪನೆಯಾದ ಇದರ ಮಾರುಕಟ್ಟೆ ಮೌಲ್ಯ 2019ರಲ್ಲಿ 7,000 ಕೋಟಿ ರೂ ಇತ್ತು. 2022ರಲ್ಲಿ ವಿವಿಧ ಹಣಕಾಸು ಅಕ್ರಮಗಳ ಆರೋಪದ ಮೇಲೆ ಕಂಪನಿಯ ಆಡಳಿತ ಮಂಡಳಿಯು ಸಿಇಒ ಸ್ಥಾನದಿಂದ ಅಂಕಿತಿಯನ್ನು ಹೊರಹಾಕಿತ್ತು. ಇದಾದ ಬಳಿಕ ಮಹೇಶ್ ಮೂರ್ತಿ ಎಂಬುವವರು 2023ರಲ್ಲಿ ಅಂಕಿತಿ ವಿರುದ್ಧ ಆರೋಪ ಮಾಡಿ ಲೇಖನ ಬರೆದಿದ್ದರು. ಇವರ ವಿರುದ್ಧ ಅಂಕಿತಿ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಇದರ ಕೇಸ್​ನ ವಿಚಾರಣೆ ನಡೆಯುತ್ತಿದೆ.

ತಾನೇ ಹುಟ್ಟುಹಾಕಿದ 7,000 ಕೋಟಿ ರೂ ಮೌಲ್ಯದ ಕಂಪನಿಯಿಂದ ಹೊರದಬ್ಬಿಸಿಕೊಂಡ ಅಂಕಿತಿಯಿಂದ ಈಗ ಮಾನನಷ್ಟ ಮೊಕದ್ದಮೆಯಲ್ಲಿ ಹೋರಾಟ
ಅಂಕಿತಿ ಬೋಸ್
Follow us
|

Updated on: Apr 17, 2024 | 12:57 PM

ಅಂಕಿತಿ ಬೋಸ್ (Ankiti Bose) ಹೆಸರು ಕೇಳಿರಬಹುದು. 23ನೇ ವಯಸ್ಸಿನಲ್ಲಿ ಜಿಲಿಂಗೋ (Zilingo) ಎಂಬ ಕಂಪನಿಯನ್ನು ಸ್ಥಾಪಿಸಿ ಭಾರತದ ಸ್ಟಾರ್ಟಪ್ ಮುಖಂಡರ ಸಾಲಿನಲ್ಲಿ ಗುರುತಿಸಿಕೊಂಡವರಾಗಿದ್ದರು. ಬೆಂಗಳೂರಿನಲ್ಲಿ ಮೊದಲ ಉದ್ಯೋಗ ಮಾಡಿ ಬಳಿಕ ಇವರು ಸ್ಥಾಪಿಸಿದ್ದ ಕಂಪನಿ 7,000 ಕೋಟಿ ರೂ ಮೌಲ್ಯದ ಕಂಪನಿಯಾಗಿ ಬೆಳೆಸಿದ ಕೀರ್ತಿ ಇವರದ್ದು. ಆದರೆ, ತಾನೇ ಕಟ್ಟಿದ ಕಂಪನಿಯಿಂದ ಹೊರದಬ್ಬಿಸಿಕೊಂಡ ದುರದೃಷ್ಟವಂತೆಯೂ ಹೌದು.

ಅಂಕಿತಿ ಬೋಸ್ ಉತ್ತರಾಖಂಡ್​ನ ಡೆಹ್ರಾಡೂನ್​ನವರು. ಓದಿದ್ದು ಮುಂಬೈನಲ್ಲಿ. ಕೆಲಸ ಆರಂಭಿಸಿದ್ದು ಬೆಂಗಳೂರಿನಲ್ಲಿ. ಮೆಕಿನ್ಸೀ ಅಂಡ್ ಕಂಪನಿ ಮತ್ತು ಸಿಕ್ವೋಯ ಕ್ಯಾಪಿಟಲ್ (Sequoia Capital) ಕಂಪನಿಗಳಲ್ಲಿ ಕೆಲಸ ಮಾಡಿದರು. 23ನೇ ವಯಸ್ಸಿನಲ್ಲಿ ಧ್ರುವ್ ಕಪೂರ್ ಜೊತೆ ಸೇರಿ ಅಂಕಿತಿ ಬೋಸ್ 2015ರಲ್ಲಿ ಜಿಲಿಂಗೋ ಕಂಪನಿಯನ್ನು ಸ್ಥಾಪಿಸಿದರು.

ಜಿಲಿಂಗೋ ಸ್ಥಾಪನೆಯ ಹಿಂದೆ ಥಾಯ್ಲೆಂಡ್ ಭೇಟಿ

ಅಂಕಿತಿ ಬೋಸ್ ಬೆಂಗಳೂರಿನಲ್ಲಿ ಸೀಕ್ವೋಯ ಕ್ಯಾಪಿಟಲ್ ಎಂಬ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಥಾಯ್ಲೆಂಡ್ ಪ್ರವಾಸ ಕೈಗೊಂಡಿದ್ದರು. ಥಾಯ್ಲೆಂಡ್​ನ ಅತಿದೊಡ್ಡ ವೀಕೆಂಡ್ ಮಾರುಕಟ್ಟೆ ಎನಿಸಿದ ಚತುಚಕ್ ಮಾರ್ಕೆಟ್​ಗೆ ಹೋದಾಗ ಅಂಕಿತಿಗೆ ಒಳ್ಳೆಯ ಬಿಸಿನೆಸ್ ಐಡಿಯ ಬಂದಿತ್ತು.

ಇದನ್ನೂ ಓದಿ: ಅದೇ ಸಂಬಳ, ಹೆಚ್ಚು ಕೆಲಸ; ಉದ್ಯೋಗಿಗಳನ್ನು ಕಾಡುತ್ತಿದೆ ‘ಒಣ ಬಡ್ತಿ’ ಟ್ರೆಂಡ್

ಆ ವೀಕೆಂಡ್ ಮಾರ್ಕೆಟ್​ನಲ್ಲಿ ಬರೋಬ್ಬರಿ 11,000ಕ್ಕೂ ಹೆಚ್ಚು ಸ್ಟಾಲ್​ಗಳಿವೆ. ಆದರೆ, ಈ ಸ್ಥಳೀಯ ಶಾಪ್​ಗಳು ಆನ್​ಲೈನ್ ಸೇವೆ ಹೊಂದಿಲ್ಲದಿರುವುದು ಮತ್ತು ಈ ಅಂಗಡಿಗಳಿಂದ ಇನ್ನೂ ಹೆಚ್ಚಿನ ಮಟ್ಟದ ಬಿಸಿನೆಸ್ ಆಗುವ ಸಂಭಾವ್ಯತೆಯನ್ನು ಅಂಕಿತಿ ಗ್ರಹಿಸಿದರು. ಅದರ ಬೆನ್ನಲ್ಲೇ ಜಿಲಿಂಗೋ ಸ್ಥಾಪನೆ ಮಾಡಿದರು. ಥಾಯ್ಲೆಂಡ್, ಫಿಲಿಪ್ಪೈನ್ಸ್, ಇಂಡೋನೇಷ್ಯಾ, ಹಾಂಕಾಂಗ್, ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲಿ ಇದರ ಬಿಸಿನೆಸ್ ಹರಡಿದೆ. 2019ರಲ್ಲಿ ಜಿಲಿಂಗೋದ ಮಾರುಕಟ್ಟೆ ಮೌಲ್ಯ 7,000 ಕೋಟಿ ರೂ ಮುಟ್ಟಿತ್ತು.

ಜಿಲಿಂಗೋದಿಂದ ಉಚ್ಛಾಟನೆಗೊಂಡ ಅಂಕಿತಿ ಬೋಸ್

ಜಿಲಿಂಗೋದ ಸಹ-ಸಂಸ್ಥಾಪಕಿಯಾಗಿ ಮತ್ತು ಅದರ ಬಿಸಿನೆಸ್ ಸಕ್ಸಸ್​ನಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದ ಅಂಕಿತಿ ಬೋಸ್ ಅವರನ್ನು ಆ ಕಂಪನಿಯಿಂದಲೇ ಉಚ್ಛಾಟಿಸಲಾಗಿತ್ತು. ಬೋರ್ಡ್ ಅನುಮತಿ ಇಲ್ಲದೇ ಸಂಬಳವನ್ನು ಹಲವು ಪಟ್ಟು ಹೆಚ್ಚಿಸಿಕೊಂಡ ಆರೋಪ ಅವರ ಮೇಲಿದೆ. ಹಾಗೆಯೇ, ಹಲವು ವೆಂಡರ್​ಗಳಿಗೆ ಅಕ್ರಮವಾಗಿ ಹಣ ಪಾವತಿ ಮಾಡಿರುವುದು ಇನ್ನೊಂದು ಆರೋಪ ಇದೆ. ಅಲ್ಲದೇ, ಉದ್ಯೋಗಿಗಳನ್ನು ಬೆದರಿಸಿ ಕೆಲಸ ಮಾಡಿಸುತ್ತಾರೆ ಎನ್ನುವ ಆರೋಪವೂ ಇತ್ತು. ಈ ಕಾರಣಕ್ಕೆ ಕಂಪನಿಯ ಮ್ಯಾನೇಜ್ಮೆಂಟ್ ಬೋರ್ಡ್ 2022ರಲ್ಲಿ ಅಂಕಿತಿ ಬೋಸ್ ಅವರನ್ನು ಸಿಇಒ ಸ್ಥಾನದಿಂದ ತೆಗೆದುಹಾಕಿತು.

ಇದನ್ನೂ ಓದಿ: ಭಾರತ ಮುಂದುವರಿದ ದೇಶವಾಗಬೇಕಾದರೆ ಈ ನಾಲ್ಕು ಅಂಶಗಳು ಮುಖ್ಯ: ಮಾಜಿ ಆರ್​ಬಿಐ ಗವರ್ನರ್ ಸುಬ್ಬಾರಾವ್ ಸಲಹೆ

ಮಹೇಶ್ ಮೂರ್ತಿ ಎಂಬ ಹೂಡಿಕೆದಾರರ ವಿರುದ್ಧ ಮಾನನಷ್ಟ ಮೊಕದ್ದಮೆ

ಮಹೇಶ್ ಮೂರ್ತಿ ಎಂಬ ಹೂಡಿಕೆದಾರರೊಬ್ಬರು 2023ರ ಮಾರ್ಚ್ 1ರಂದು ಔಟ್​ಲುಕ್ ಬಿಸಿನೆಸ್ ಮ್ಯಾಗಜಿನ್​ನಲ್ಲಿ ಭಾರತದಲ್ಲಿನ ಹೂಡಿಕೆ ಕಂಪನಿಗಳ ಬಗ್ಗೆ ಲೇಖನ ಬರೆದಿದ್ದರು. ಅದರಲ್ಲಿ ಅಂಕಿತಿ ಬೋಸ್ ವಿರುದ್ಧ ಬರೆಯಲಾಗಿತ್ತು.

ತನ್ನ ಬಗ್ಗೆ ಸುಳ್ಳು ಸಂಗತಿಗಳನ್ನು ಬರೆದು ಮಾನ ಹಾನಿಗೆ ಕಾರಣವಾಗಿದ್ದಾರೆ ಎಂದು ಆರೋಪಿಸಿ ಅಂಕಿತಿ ಬೋಸ್ ಅವರು ಎಪ್ರಿಲ್ ತಿಂಗಳಲ್ಲಿ ಬಾಂಬೆ ಹೈಕೋರ್ಟ್​ನಲ್ಲಿ 820 ಕೋಟಿ ರೂ ಮೊತ್ತಕ್ಕೆ ಡಿಫೆಮೇಶನ್ ಕೇಸ್ ಹಾಕಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ