AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಹೊಸ ತಲೆಮಾರಿನವರನ್ನು ವಿರಾಟ್ ಕೊಹ್ಲಿಗೆ ಹೋಲಿಸಿದ ರಘುರಾಮ್ ರಾಜನ್

Raghuram Rajan Compares Young Indian Entrepreneurs to Virat Kohli: ಭಾರತದಲ್ಲಿ ಕೆಲಸ ಮಾಡಬಲ್ಲ ಜನರ ಸಂಖ್ಯಾಬಲ ಇದೆ. ಆದರೆ, ಅದಕ್ಕೆ ತಕ್ಕಷ್ಟು ಫಲ ಉಣ್ಣಲು ಆಗುತ್ತಿಲ್ಲ ಎಂದು ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. ಇವತ್ತಿನ ಯುವ ಉದ್ಯಮಿಗಳು ಕ್ರಿಯಾಶೀಲರಾಗಿದ್ದರೂ ಸ್ಥಳೀಯವಾಗಿ ಮಾರುಕಟ್ಟೆ ಸಿಗದೇ ಹೊರ ದೇಶಗಳಲ್ಲಿ ಉದ್ಯಮ ಸ್ಥಾಪಿಸುವಂತಾಗಿದೆ. ಇವರು ಹೊರಗೆ ಹೋಗುವಂತಹ ಪರಿಸ್ಥಿತಿ ಯಾಕಾಗಿದೆ ಎನ್ನುವುದನ್ನು ಅವಲೋಕಿಸಬೇಕಿದೆ ಎಂದು ರಾಜನ್ ಹೇಳಿದ್ದಾರೆ.

ಭಾರತದ ಹೊಸ ತಲೆಮಾರಿನವರನ್ನು ವಿರಾಟ್ ಕೊಹ್ಲಿಗೆ ಹೋಲಿಸಿದ ರಘುರಾಮ್ ರಾಜನ್
ರಘುರಾಮ್ ರಾಜನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 17, 2024 | 2:45 PM

Share

ನವದೆಹಲಿ, ಏಪ್ರಿಲ್ 17: ಭಾರತದ ಯುವ ಸಮುದಾಯ ಬಹಳ ಕ್ರಿಯಾಶೀಲವಾಗಿದೆ. ಈ ವರ್ಗದ ಯುವ ಉದ್ಯಮಿಗಳಿಗೆ (young entrepreneurs) ಈ ಪ್ರಪಂಚವನ್ನು ಬದಲಿಸುವ ಮಹತ್ವಾಕಾಂಕ್ಷೆ ಇದೆ. ವಿಶ್ವದಲ್ಲಿ ಯಾರಿಗೂ ತಾನು ಕಡಿಮೆ ಇಲ್ಲ ಎನ್ನುವ ಮನಸ್ಥಿತಿ ಇದೆ. ಇವರದ್ದು ವಿರಾಟ್ ಕೊಹ್ಲಿ ರೀತಿಯ ಧೋರಣೆ ಎಂದು ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. ಭಾರತದ ಕ್ರಿಯಾಶೀಲ (innovative) ಉದ್ಯಮಿಗಳು ಸ್ಥಳೀಯ ಮಾರುಕಟ್ಟೆ ಸೃಷ್ಟಿಸಲು ಸಾಧ್ಯವಾಗದೇ ವಿದೇಶಗಳಲ್ಲಿ ಅವಕಾಶ ಅರಸುವಂತಾಗಿದೆ. ಭಾರತ ಬಿಟ್ಟು ಹೊರಗೆ ಹೋಗಿ ಉದ್ಯಮ ಸ್ಥಾಪಿಸುವ ಅನಿವಾರ್ಯ ಸ್ಥಿತಿ ಯಾಕೆ ಬಂದಿದೆ ಎನ್ನುವುದನ್ನು ನಾವು ಕೇಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ಜಾರ್ಜ್ ವಾಷಿಂಗ್ಟನ್ ಯೂನಿವರ್ಸಿಟಿಯಲ್ಲಿ ನಡೆದ ‘2047ರಲ್ಲಿ ಭಾರತವನ್ನು ಮುಂದುವರಿದ ಆರ್ಥಿಕತೆಯ ದೇಶ ಆಗಬೇಕೆಂದರೆ ಏನು ಮಾಡಬೇಕು’ ಎನ್ನುವ ವಿಚಾರ ಸಂಕಿರಣದಲ್ಲಿ ರಘುರಾಮ್ ರಾಜನ್ ಮಾತನಾಡುತ್ತಿದ್ದರು. ಶೇ. 8ರ ದರದಲ್ಲಿ ಆಗುತ್ತಿರುವ ಭಾರತದ ಜಿಡಿಪಿ ಬೆಳವಣಿಗೆ ದರದ ಬಗ್ಗೆ ರಾಜನ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಾರತ ಮುಂದುವರಿದ ದೇಶವಾಗಬೇಕಾದರೆ ಈ ನಾಲ್ಕು ಅಂಶಗಳು ಮುಖ್ಯ: ಮಾಜಿ ಆರ್​ಬಿಐ ಗವರ್ನರ್ ಸುಬ್ಬಾರಾವ್ ಸಲಹೆ

ಆರ್ಥಿಕ ತಜ್ಞರೂ ಆಗಿರುವ ರಘುರಾಮ್ ರಾಜನ್ ಪ್ರಕಾರ ಭಾರತದಲ್ಲಿ ಜಿಡಿಪಿ ದರ ಶೇ. 6 ಮಾತ್ರವೇ ಇರುವುದು. ಜನಸಂಖ್ಯಾ ಬಲ ಇದ್ದರೂ ಅದರ ಫಲ ಪಡೆಯಲು ಭಾರತಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಅವರು ಚೀನಾ ಮತ್ತು ಕೊರಿಯಾದ ಉಲ್ಲೇಖ ಮಾಡಿದ್ದಾರೆ.

‘ಚೀನಾ ಮತ್ತು ಕೊರಿಯಾ ದೇಶಗಳು ತಮ್ಮ ಜನಸಂಖ್ಯಾ ಬಲದ ಫಲ ಎಷ್ಟು ಪಡೆದಿದ್ದವು ನೋಡಿ. ಅದಕ್ಕೆ ಹೋಲಿಸಿದರೆ ಭಾರತ ಪಡೆಯುತ್ತಿರುವುದು ಏನೇನೂ ಅಲ್ಲ. ಈಗ ನಾವು ಸಾಧಿಸುತ್ತಿರುವ ಬೆಳವಣಿಗೆಯೇ ಅದ್ಬುತ ಎಂದು ಹೇಳಿದರೆ ಅದು ಅತಿರೇಕದಂತೆ ಅನಿಸುತ್ತದೆ. ನಾವು ಜನಸಂಖ್ಯಾಬಲದ ಫಲದಿಂದ ದೂರ ಉಳಿಯುತ್ತಿದ್ದೇವೆ ಎಂಬುದಕ್ಕಿಂತ ಹೆಚ್ಚಾಗಿ ಯುವಕರಿಗೆ ಕೆಲಸ ನೀಡುತ್ತಿಲ್ಲ ಎಂಬುದು ಬೇಸರದ ಸಂಗತಿ,’ ಎಂದು ರಘುರಾಮ್ ರಾಜನ್ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಸಕ್ತ ಹಣಕಾಸು ವರ್ಷ ಭಾರತದ ಆರ್ಥಿಕತೆ ಶೇ. 6.8ರಷ್ಟು ಬೆಳೆಯುವ ಸಾಧ್ಯತೆ; ಅಂದಾಜು ಹೆಚ್ಚಿಸಿದ ಐಎಂಎಫ್

ಉದ್ಯೋಗ ಸೃಷ್ಟಿಸುವುದು ಹೇಗೆ?

ಜನರ ಕೌಶಲ್ಯ ಹೆಚ್ಚಿಸುವುದು ಮತ್ತು ಈಗಿರುವ ಉದ್ಯೋಗಗಳ ರೀತಿಯನ್ನು ತುಸು ಬದಲಿಸುವುದು, ಈ ಎರಡು ಅಂಶಗಳು ನನ್ನ ಮನಸಿಗೆ ಬರುತ್ತವೆ ಎಂದು ಹೇಳಿದ ಅವರು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿರುವ ಅಪ್ರೆಂಟಿಸ್​ಶಿಪ್ ಐಡಿಯವನ್ನು ಉಲ್ಲೇಖಿಸಿದ್ದಾರೆ.

ಈ ಅಪ್ರೆಂಟಿಸ್​ಶಿಪ್ ಐಡಿಯಾವನ್ನು ಪ್ರಯತ್ನಿಸಬಹುದು. ಉತ್ತಮ ಉದ್ಯೋಗಿಯಾಗಲು ಸಮರ್ಥಿರುವಂತಹ ಹಲವು ವಿದ್ಯಾರ್ಥಿಗಳ ಅಗತ್ಯತೆ ಇದೆ ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ