ಭಾರತದಲ್ಲಿ ಗೂಗಲ್​ಗೆ ಕರ್ನಾಟಕ, ರಾಜಸ್ಥಾನ, ಗುಜರಾತ್​ನಿಂದ ಸ್ವಚ್ಛ ಶಕ್ತಿ ಪೂರೈಕೆ; ಅದಾನಿ, ಕ್ಲೀನ್​ಮ್ಯಾಕ್ಸ್ ಕಂಪನಿಗಳೊಂದಿಗೆ ಗೂಗಲ್ ಒಪ್ಪಂದ

|

Updated on: Oct 04, 2024 | 10:51 AM

Google deal with Adani Group and CleanMax for clean energy: ಗೂಗಲ್ ಸಂಸ್ಥೆ ಭಾರತದಲ್ಲಿರುವ ತನ್ನ ವಿವಿಧ ಘಟಕಗಳಿಗೆ ಸ್ವಚ್ಛ ಶಕ್ತಿ ಪೂರೈಕೆ ಮಾಡಲು ಅದಾನಿ ಗ್ರೂಪ್ ಮತ್ತು ಕ್ಲೀನ್​ಮ್ಯಾಕ್ಸ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಅದಾನಿ ಗ್ರೂಪ್ ತನ್ನ ಗುಜರಾತ್ ಘಟಕದಿಂದ 61 ಮೆಗಾವ್ಯಾಟ್​ನಷ್ಟು ರಿನಿವಬಲ್ ಎನರ್ಜಿಯನ್ನು ಗೂಗಲ್​ಗೆ ಒದಗಿಸಲಿದೆ. ಕ್ಲೀನ್​ಮ್ಯಾಕ್ಸ್ ಸಂಸ್ಥೆ ಕರ್ನಾಟಕ ಹಾಗು ರಾಜಸ್ಥಾನದಲ್ಲಿರುವ ತನ್ನ ಘಟಕಗಳಿಂದ 125 ಮೆಗಾವ್ಯಾಟ್​ನಷ್ಟು ವಿದ್ಯುತ್ ಅನ್ನು ಗೂಗಲ್​ಗೆ ಸರಬರಾಜು ಮಾಡಲಿದೆ.

ಭಾರತದಲ್ಲಿ ಗೂಗಲ್​ಗೆ ಕರ್ನಾಟಕ, ರಾಜಸ್ಥಾನ, ಗುಜರಾತ್​ನಿಂದ ಸ್ವಚ್ಛ ಶಕ್ತಿ ಪೂರೈಕೆ; ಅದಾನಿ, ಕ್ಲೀನ್​ಮ್ಯಾಕ್ಸ್ ಕಂಪನಿಗಳೊಂದಿಗೆ ಗೂಗಲ್ ಒಪ್ಪಂದ
ಗೂಗಲ್
Follow us on

ನವದೆಹಲಿ, ಅಕ್ಟೋಬರ್ 4: ಭಾರತದಲ್ಲಿನ ಗೂಗಲ್​ನ ಕ್ಲೈಡ್ ಸರ್ವಿಸ್ ಮತ್ತು ಆಪರೇಷನ್ಸ್​ಗೆ ಕರ್ನಾಟಕ ಸೇರಿದಂತೆ ವಿವಿಧೆಡೆಯಿಂದ ಸ್ವಚ್ಛ ಶಕ್ತಿ ಪೂರೈಕೆ ಆಗಲಿದೆ. ಗೂಗಲ್ ಸಂಸ್ಥೆ ಅದಾನಿ ಗ್ರೂಪ್ ಮತ್ತು ಕ್ಲೀನ್​ಮ್ಯಾಕ್ಸ್ ಎಂಬ ಎರಡು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಕ್ಲೀನ್ ಮ್ಯಾಕ್ಸ್ ವತಿಯಿಂದ 125.4 ಮೆಗಾವ್ಯಾಟ್​ನಷ್ಟು ಕ್ಲೀನ್ ಎನರ್ಜಿ ಗೂಗಲ್​ನ ವಿವಿಧ ಕಚೇರಿಗಳಿಗೆ ಪೂರೈಕೆ ಆಗಲಿದೆ. ಹಾಗೆಯೇ, ಅದಾನಿ ಗ್ರೂಪ್ ಜೊತೆ 61.4 ಮೆಗಾವ್ಯಾಟ್​ನಷ್ಟು ವಿದ್ಯುತ್ ಪೂರೈಕೆಗೆ ಗೂಗಲ್ ಒಪ್ಪಂದ ಮಾಡಿಕೊಂಡಿದೆ.

ಗೂಗಲ್ ಸಂಸ್ಥೆ ಭಾರತದಲ್ಲಿರುವ ತನ್ನ ಕ್ಲೌಡ್ ಸರ್ವಿಸ್ ಸೇರಿದಂತೆ ಎಲ್ಲಾ ಕಚೇರಿ ಮತ್ತು ಯೂನಿಟ್​ಗಳಿಗೆ 2030ರಷ್ಟರಲ್ಲಿ ಸಂಪೂರ್ಣ ಮರುಬಳಕೆ ಶಕ್ತಿ ಆಧಾರಿತ ವಿದ್ಯುತ್ ಅನ್ನು ಬಳಸಲು ಗುರಿ ಇಟ್ಟಿದೆ. ಈ ನಿಟ್ಟಿನಲ್ಲಿ ಇವೆರಡು ಒಪ್ಪಂದಗಳು ಪ್ರಮುಖ ಹೆಜ್ಜೆಗಳಾಗಿವೆ.

ಇದನ್ನೂ ಓದಿ: ರೈಲ್ವೆ ಉದ್ಯೋಗಿಗಳಿಗೆ 2,029 ಕೋಟಿ ರೂ ಮೊತ್ತದ ಬೋನಸ್ ಬಿಡುಗಡೆಗೆ ಸಂಪುಟ ಅನುಮೋದನೆ

ಕ್ಲೀನ್​ಮ್ಯಾಕ್ಸ್ ಕಂಪನಿ ಮುಂಬೈ ಮೂಲದ್ದಾಗಿದ್ದು, ದೇಶದ ವಿವಿಧೆಡೆ ಸೋಲಾರ್ ಮತ್ತು ವಿಂಡ್ ಎನರ್ಜಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ವರ್ಷಕ್ಕೆ ಒಟ್ಟು 100 ಮೆಗಾವ್ಯಾಟ್​ಗಳಷ್ಟು ಸ್ವಚ್ಛ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕರ್ನಾಟಕದ ಜಗಳೂರಿನಲ್ಲೇ 47 ಮೆಗಾವ್ಯಾಟ್​ನಷ್ಟು ಸೋಲಾರ್-ವಿಂಡ್ ಫಾರ್ಮ್ ಹೊಂದಿದೆ. ಬೆಂಗಳೂರು ಏರ್ಪೋರ್ಟ್ ಸೇರಿದಂತೆ ಹಲವು ಸಂಸ್ಥೆಗಳಿಗೆ ಇದು ವಿದ್ಯುತ್ ಪೂರೈಕೆ ಮಾಡುತ್ತದೆ. ಈಗ 59.4 ಮೆಗಾವ್ಯಾಟ್​ನಷ್ಟು ವಾಯುಶಕ್ತಿಯನ್ನು ಗೂಗಲ್ ಕಚೇರಿಗಳೀಗೆ ಅದು ಪೂರೈಕೆ ಮಾಡಲಿದೆ.

ರಾಜಸ್ಥಾನದಲ್ಲಿರುವ ತನ್ನ ವಿವಿಧ ಯೂನಿಟ್​ಗಳಿಂದ 66 ಮೆಗಾವ್ಯಾಟ್ ಸೌರಶಕ್ತಿಯನ್ನು ಕ್ಲೀನ್ ಮ್ಯಾಕ್ಸ್ ಸಂಸ್ಥೆ ಗೂಗಲ್​ಗೆ ಸರಬರಾಜು ಮಾಡಲಿದೆ.

ಇದನ್ನೂ ಓದಿ: ಸಿಕ್ಸ್​ಟೀನ್ ಸೈಕ್… ಒಂದು ಲಕ್ಷ ಕ್ವಾಡ್ರಾಲಿಯನ್ ಡಾಲರ್ ಮೌಲ್ಯದ ಅಪೂರ್ವ ಖನಿಜಗಳ ಗಣಿ ಈ ಕ್ಷುದ್ರಗ್ರಹ; ಮೈನಿಂಗ್ ಮಾಡಲು ಮನುಷ್ಯ ಅಣಿ

ಅದಾನಿ ಗ್ರೂಪ್​ನಿಂದ 61.4 ಮೆಗಾವ್ಯಾಟ್ ವಿದ್ಯುತ್ ಪೂರೈಕೆ

ಅದಾನಿ ಗ್ರೂಪ್ ಕೂಡ ಸಾಕಷ್ಟು ರಿನಿವಬಲ್ ಎನರ್ಜಿ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಗುಜರಾತ್​ನ ಖಾವಡಾ ಎನರ್ಜಿ ಪಾರ್ಕ್​ನಲ್ಲಿ 30 ಗಿಗಾವ್ಯಾಟ್ ಉತ್ಪಾದನಾ ಶಕ್ತಿ ಇದ್ದು, ಅದರಲ್ಲಿ 61.4 ಮೆಗಾವ್ಯಾಟ್​ನಷ್ಟು ವಿದ್ಯುತ್ ಅನ್ನು ಗೂಗಲ್ ಯೂನಿಟ್​ಗಳಿಗೆ ಪೂರೈಕೆ ಮಾಡಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ