ಸಿಕ್ಸ್​ಟೀನ್ ಸೈಕ್… ಒಂದು ಲಕ್ಷ ಕ್ವಾಡ್ರಾಲಿಯನ್ ಡಾಲರ್ ಮೌಲ್ಯದ ಅಪೂರ್ವ ಖನಿಜಗಳ ಗಣಿ ಈ ಕ್ಷುದ್ರಗ್ರಹ; ಮೈನಿಂಗ್ ಮಾಡಲು ಮನುಷ್ಯ ಅಣಿ

Mining on asteroid 16 Psyche: ಭೂಮಿಯಿಂದ 30 ಲಕ್ಷ ಕಿಮೀ ದೂರದಲ್ಲಿರುವ 16 ಸೈಕ್ ಎಂಬ ಕ್ಷುದ್ರಗ್ರಹದಲ್ಲಿ ಅಪೂರ್ವವಾದ ಖನಿಜ ಮತ್ತು ಲೋಹಗಳಿರುವುದು ತಿಳಿದುಬಂದಿದೆ. ಇಲ್ಲಿರುವ ಪ್ಲಾಟಿನಂ, ಪಲ್ಲಾಡಿಯಂ ಲೋಹಗಳು ಕಾರ್ ತಯಾರಿಕೆಗೆ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ಉಪಯುಕ್ತವಾಗುತ್ತವೆ. ಇಲ್ಲಿ ಗಣಿಗಾರಿಕೆ ನಡೆಸಿ ಈ ಅಮೂಲ್ಯ ವಸ್ತುಗಳನ್ನು ಭೂಮಿಗೆ ತರಲು ವಿಜ್ಞಾನಿಗಳು, ತಂತ್ರಜ್ಞರು ಯೋಜಿಸುತ್ತಿದ್ದಾರೆ.

ಸಿಕ್ಸ್​ಟೀನ್ ಸೈಕ್... ಒಂದು ಲಕ್ಷ ಕ್ವಾಡ್ರಾಲಿಯನ್ ಡಾಲರ್ ಮೌಲ್ಯದ ಅಪೂರ್ವ ಖನಿಜಗಳ ಗಣಿ ಈ ಕ್ಷುದ್ರಗ್ರಹ; ಮೈನಿಂಗ್ ಮಾಡಲು ಮನುಷ್ಯ ಅಣಿ
16 ಸೈಕ್
Follow us
|

Updated on: Oct 02, 2024 | 4:08 PM

ನವದೆಹಲಿ, ಅಕ್ಟೋಬರ್ 2: ಒಂದು ವರ್ಷದ ಹಿಂದೆ ಅಮೆರಿಕ ನಾಸಾ ಒಂದು ದೊಡ್ಡ ಕ್ಷುದ್ರಗ್ರಹದ ಅನ್ವೇಷಣೆಯ ಯೋಜನೆ ಆರಂಭಿಸಿತು. ಆ ಆಸ್ಟಿರಾಯ್ಡ್ ಹೆಸರು ‘16 ಸೈಕ್’ ಎಂದಿದ್ದು ಅದು ಭೂಮಿಯಿಂದ 6 ವರ್ಷ ದೂರ ಇದೆ. ಆರು ವರ್ಷ ದೂರ ಎಂದರೆ ಮನುಷ್ಯನಿರ್ಮಿತ ಗಗನನೌಕೆ ಅಲ್ಲಿ ಹೋಗಲು ಆರು ವರ್ಷ ಬೇಕಾಗುತ್ತದೆ. ಸುಮಾರು 30 ಲಕ್ಷ ಕಿಮೀಯಷ್ಟು ದೂರ ಇದೆ ಆ ಕ್ಷುದ್ರಗ್ರಹ. ಆ ಆಕಾಶಕಾಯದಲ್ಲಿ ಮನುಷ್ಯರಿಗೆ ಬಹಳ ಅಗತ್ಯವಾಗಿರುವ ಅಮೂಲ್ಯ ಲೋಹ, ಖನಿಜಗಳು ಹೇರಳವಾಗಿವೆ. ಪ್ಲಾಟಿನಂ, ಪಲಾಡಿಯಂ ಇತ್ಯಾದಿ ಅಪರೂಪದ ವಸ್ತುಗಳು ಸಾಕಷ್ಟಿವೆ. ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಿಸಲು ಇವು ತುಂಬಾ ಅಗತ್ಯ. ಇಲ್ಲಿರುವ ಸಂಪನ್ಮೂಲಗಳ ಮೌಲ್ಯ ಬರೋಬ್ಬರಿ 1 ಲಕ್ಷ ಕ್ವಾಡ್ರಾಲಿಯನ್ ಡಾಲರ್​ಗೆ ಸಮ. ಒಂದು ಕ್ವಾಡ್ರಾಲಿಯನ್ ಎಂದರೆ ಒಂದು ಸಾವಿರ ಟ್ರಿಲಿಯನ್. ಅಮೆರಿಕದ ಆರ್ಥಿಕತೆ 40-45 ಟ್ರಿಲಿಯನ್ ಡಾಲರ್ ಇದೆ. ಇಡೀ ಜಗತ್ತಿನ ಜಿಡಿಪಿ ಸೇರಿಸಿದರೆ ನೂರು ಟ್ರಿಲಿಯನ್ ಡಾಲರ್ ಕೂಡ ಆಗುವುದಿಲ್ಲ. ಅಂಥದ್ದರಲ್ಲಿ ಲಕ್ಷ ಪಟ್ಟು ಹೆಚ್ಚು ಸಂಪನ್ಮೂಲವಿರುವ ಆಕಾಶಕಾಯವೊಂದು ಅನಾಥವಾಗಿ ಆಗಸದಲ್ಲಿ ಓಡಾಡುತ್ತಿದೆ. ಹೀಗಾಗಿ, ನಾಸಾ ಅಪರಿಮಿತ ಆಸಕ್ತಿಯಿಂದ ಈ ಯೋಜನೆ ಕೈಗೆತ್ತಿಕೊಂಡಿದೆ.

ಭೂಮಿಯಿಂದ ಸಾಕಷ್ಟು ಖನಿಜಗಳನ್ನು ಪಡೆದು ಬಳಸುತ್ತಿರುವ ಮನುಷ್ಯನಿಗೆ ಈಗ ಕ್ಷುದ್ರಗ್ರಹಗಳಂತಹ ಆಕಾಶಕಾಯಗಳಲ್ಲಿನ ಸಂಪನ್ಮೂಲಗಳು ಬಹಳ ಅವಶ್ಯಕವಾಗಿವೆ. ಅವಶ್ಯಕ ಖನಿಜ, ಲೋಹಗಳು ಇರುವ ಸೈಕ್​ನಂತಹ ಆಕಾಶಕಾಯಗಳನ್ನು ಜಗತ್ತಿನ ತಂತ್ರಜ್ಞರು, ವಿಜ್ಞಾನಿಗಳು ಗಮನಿಸುತ್ತಲೇ ಇರುತ್ತಾರೆ. ಆಸ್ಟ್ರೋಫೋರ್ಜ್, ಟ್ರಾನ್ಸ್​ ಆಸ್ಟ್ರಾ ಮೊದಲಾದ ಕಂಪನಿಗಳು ಈ ಅನ್ವೇಷಣೆಯಲ್ಲಿವೆ. ಆದರೆ, ಸವಾಲು ಇರುವುದು ಇಂತಹ ಆಕಾಶಕಾಯಗಳಲ್ಲಿ ಖನಿಜಗಳನ್ನು ಹೆಕ್ಕಿ ಭೂಮಿಗೆ ತರುವುದು ಹೇಗೆ ಎಂಬುದು.

ಇದನ್ನೂ ಓದಿ: ಇರಾನ್-ಇಸ್ರೇಲ್ ಯುದ್ಧ ಕಾರ್ಮೋಡ; ಜಗತ್ತಿನಾದ್ಯಂತ ಷೇರುಮಾರುಕಟ್ಟೆ ತತ್ತರ; ಭಾರತ, ಚೀನಾ ಪೇಟೆಗಳಿಗೆ ರಜೆಯ ರಿಲೀಫ್

ಆಕಾಶಕಾಯದಲ್ಲಿ ಮೈನಿಂಗ್ ಮಾಡುವುದು ಕಷ್ಟವೇ?

ಭೂಮಿಯಲ್ಲಿ ತಕ್ಕಮಟ್ಟಿಗೆ ಗುರುತ್ವಾಕರ್ಷಕ ಶಕ್ತಿ ಇದೆ. ಮನುಷ್ಯನ ದೇಹ, ತಂತ್ರಜ್ಞಾನವೆಲ್ಲವೂ ಇದಕ್ಕೆ ಪೂರಕವಾಗಿ ಅಭಿವೃದ್ಧಿಯಾಗಿವೆ. ಆಕಾಶಕಾಯಗಳಲ್ಲಿ ಗುರುತ್ವಾಕರ್ಷಕ ಶಕ್ತಿ ಕಡಿಮೆ ಇರಬಹುದು, ಅಥವಾ ಇಲ್ಲದೇ ಇರಬಹುದು. ಜೊತೆಗೆ ವಾತಾವರಣದಲ್ಲಿ ವಿಕಿರಣಗಳ ಅಪಾಯ ಇರುತ್ತದೆ. ಇಂತಹ ವಾತಾವರಣದಲ್ಲಿ ನೆಲ ಅಗೆಯಬಲ್ಲಂತಹ ಉಪಕರಣಗಳನ್ನು ಅಭಿವೃದ್ಧಿಪಡಿಸಬೇಕು.

‘16 ಸೈಕ್​’ ನಂತಹ ಕ್ಷುದ್ರಗ್ರಹಕ್ಕೆ ಮನುಷ್ಯನೇ ಸ್ವತಃ ಹೋಗಿ ಮೈನಿಂಗ್ ನಡೆಸಲು ಸದ್ಯಕ್ಕೆ ಅಸಾಧ್ಯ. ಚಂದ್ರ, ಮಂಗಳನಲ್ಲಿ ರೋಬೋಗಳು ಅಖಾಡಕ್ಕೆ ಇಳಿದಿರುವ ರೀತಿಯಲ್ಲಿ ಈ ಕ್ಷುದ್ರಗ್ರಹಕ್ಕೆ ರೋಬೋ ರೂಪದಲ್ಲಿ ಯಂತ್ರೋಪಕರಣಗಳನ್ನು ಕಳುಹಿಸಬೇಕಾಗುತ್ತದೆ. ಆದರೆ, ಭೂಮಿಯಲ್ಲಿರುವ ಕೇಂದ್ರಗಳಿಂದ ಉಪಕರಣಗಳಿಗೆ ಸೂಚನೆ ರವಾನಿಸಿದರೆ, ಅದು ತಲುಪಲು 20 ನಿಮಿಷ ಬೇಕಾಗುತ್ತದೆ. ಇದರಿಂದ ಸಮರ್ಪಕವಾಗಿ ಮೈನಿಂಗ್ ಮಾಡಲು ಆಗುವುದಿಲ್ಲ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ರೀತಿಯಲ್ಲಿ ಆ ಉಪಕರಣಗಳು ತಾವೇ ಖುದ್ದಾಗಿ ಮೈನಿಂಗ್ ನಡೆಸಲು ಸಾಧ್ಯವಾಗುವ ರೀತಿಯಲ್ಲಿ ಅಭಿವೃದ್ಧಿಯಾಗಬೇಕು.

ಇದನ್ನೂ ಓದಿ: ಬಳಕೆಯಲ್ಲಿ ಇಲ್ಲದೆ ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಗಳನ್ನು ಮತ್ತೆ ಸಕ್ರಿಯಗೊಳಿಸುವ ಕ್ರಮ

ಕುತೂಹಲ ಎಂದರೆ ಈಗಾಗಲೇ ಲ್ಯಾಬ್​​ಗಳಲ್ಲಿ ಪ್ರಯೋಗಗಳಾಗಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ನೈಜ ವಾತಾವರಣದಲ್ಲಿ ಅದು ಹೇಗೆ ಕಾರ್ಯ ನಿರ್ವಹಿಸುತ್ತೆ ಎಂಬುದು ಸ್ಪಷ್ಟವಾಗಿಲ್ಲ. ಇಂತಹ ಉಪಕರಣಗಳಿಗೆ ತಂತ್ರಜ್ಞಾನ ಎಷ್ಟರಮಟ್ಟಿಗೆ ಸಿದ್ಧವಾಗಿದೆ ಎಂಬುದಕ್ಕೆ ನಾಸಾ 1ರಿಂದ 9ರವರೆಗೆ ಮಾಪಕ ಇಟ್ಟಿದೆ. ಸದ್ಯ ಇರುವ ತಂತ್ರಜ್ಞಾನ 3ರಿಂದ 5ರ ಮಟ್ಟದಲ್ಲಿ ಇದೆ. ರಿಯಲ್ ವಾತಾವರಣದಲ್ಲಿ ಮೈನಿಂಗ್ ನಡೆಸಲು ತಂತ್ರಜ್ಞಾನದ ಮಟ್ಟ 6-7ಕ್ಕೆ ಏರಬೇಕು ಎನ್ನುತ್ತಾರೆ ಸೆಂಟ್ರಲ್ ಫ್ಲೋರಿಡಾ ಯೂನಿವರ್ಸಿಟಿಯ ವಿಜ್ಞಾನಿ ಫಿಲಿಪ್ ಮೆಟ್ಜೆರ್.

ಮನುಷ್ಯನ ಈ ಪ್ರಯತ್ನ ಯಶಸ್ವಿಯಾದರೆ ದೇಶ ದೇಶಗಳ ಮಧ್ಯೆ ಸಂಪನ್ಮೂಲಕ್ಕೆ ಪೈಪೋಟಿ ಸೃಷ್ಟಿಯಾಗುವ ಅಪಾಯ ಇದೆ. ಚಂದ್ರ, ಮಂಗಳನಲ್ಲಿ ಹಕ್ಕು ಸ್ಥಾಪಿಸಲು ಈಗಾಗಲೇ ವಿವಿಧ ದೇಶಗಳು ಪ್ರಯತ್ನಿಸುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗ್ಯಾಲಕ್ಸಿ ಹೊಸ ಸ್ಮಾರ್ಟ್​ಫೋನ್ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!
ಗ್ಯಾಲಕ್ಸಿ ಹೊಸ ಸ್ಮಾರ್ಟ್​ಫೋನ್ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ
ಗಾಂಧಿ ಜಯಂತಿ: ಪೊರಕೆ ಹಿಡಿದ ಸಚಿವ ಪ್ರಲ್ಹಾದ್ ಜೋಶಿ, ವಿಜಯೇಂದ್ರ!
ಗಾಂಧಿ ಜಯಂತಿ: ಪೊರಕೆ ಹಿಡಿದ ಸಚಿವ ಪ್ರಲ್ಹಾದ್ ಜೋಶಿ, ವಿಜಯೇಂದ್ರ!
ಸಿಎಂ ಸಿದ್ದರಾಮಯ್ಯಗೆ ಗಾಂಧಿ ಟೋಪಿ ಹಾಕಿದ ಡಿಕೆ ಶಿವಕುಮಾರ್​
ಸಿಎಂ ಸಿದ್ದರಾಮಯ್ಯಗೆ ಗಾಂಧಿ ಟೋಪಿ ಹಾಕಿದ ಡಿಕೆ ಶಿವಕುಮಾರ್​
ಗಾಂಧಿ ಜಂಯತಿ 2024: ವಿಧಾನಸೌಧದವರೆಗೂ ನಡೆದುಕೊಂಡೇ ಹೋದ ಸಿಎಂ, ಡಿಸಿಎಂ
ಗಾಂಧಿ ಜಂಯತಿ 2024: ವಿಧಾನಸೌಧದವರೆಗೂ ನಡೆದುಕೊಂಡೇ ಹೋದ ಸಿಎಂ, ಡಿಸಿಎಂ
ಇದು ಪ್ರಾರಂಭ ಅಷ್ಟೆ, ಪಿಕ್ಚರ್ ಇನ್ನೂ ಬಾಕಿ ಇದೆ ಎಂದ ಜಗದೀಶ್
ಇದು ಪ್ರಾರಂಭ ಅಷ್ಟೆ, ಪಿಕ್ಚರ್ ಇನ್ನೂ ಬಾಕಿ ಇದೆ ಎಂದ ಜಗದೀಶ್
ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ
ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ
ಬೆಂಗಳೂರು ಹನುಮಂತನಗರದಲ್ಲಿ ಲಾಂಗ್, ಬ್ಯಾಟ್ ಹಿಡಿದು ಪುಡಿ ರೌಡಿಗಳ ಅಟ್ಟಹಾಸ
ಬೆಂಗಳೂರು ಹನುಮಂತನಗರದಲ್ಲಿ ಲಾಂಗ್, ಬ್ಯಾಟ್ ಹಿಡಿದು ಪುಡಿ ರೌಡಿಗಳ ಅಟ್ಟಹಾಸ
ರಾಜ್​ಘಾಟ್​ನಲ್ಲಿ ರಾಷ್ಟ್ರಪಿತನಿಗೆ ಪುಷ್ಟನಮನ ಸಲ್ಲಿಸಿದ ಪ್ರಧಾನಿ ಮೋದಿ
ರಾಜ್​ಘಾಟ್​ನಲ್ಲಿ ರಾಷ್ಟ್ರಪಿತನಿಗೆ ಪುಷ್ಟನಮನ ಸಲ್ಲಿಸಿದ ಪ್ರಧಾನಿ ಮೋದಿ
ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಸೇವೆ
ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಸೇವೆ