AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್-ಇಸ್ರೇಲ್ ಯುದ್ಧ ಕಾರ್ಮೋಡ; ಜಗತ್ತಿನಾದ್ಯಂತ ಷೇರುಮಾರುಕಟ್ಟೆ ತತ್ತರ; ಭಾರತ, ಚೀನಾ ಪೇಟೆಗಳಿಗೆ ರಜೆಯ ರಿಲೀಫ್

Stock market updates: ಅಕ್ಟೋಬರ್ 2, ಬುಧವಾರ ವಿಶ್ವದ ಹೆಚ್ಚಿನ ಷೇರು ಮಾರುಕಟ್ಟೆಗಳು ಕುಸಿತ ಕಂಡಿವೆ. ನಿನ್ನೆ ಇಸ್ರೇಲ್ ಮೇಲೆ ಇರಾನ್ ಭೀಕರ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ ಎಂಬಂತೆ ಮಾರುಕಟ್ಟೆ ತತ್ತರಿಸಿದೆ. ಜಪಾನ್, ಸೌತ್ ಕೊರಿಯಾ, ಆಸ್ಟ್ರೇಲಿಯಾ ಮೊದಲಾದ ಮಾರುಕಟ್ಟೆಗಳ ಸೂಚ್ಯಂಕಗಳು ಹಿನ್ನಡೆ ಕಂಡಿವೆ. ಅಮೆರಿಕದ ಮಾರುಕಟ್ಟೆಯೂ ವ್ಯತ್ಯಯಗೊಂಡಿದೆ. ಭಾರತದ ಪೇಟೆ ಗಾಂಧಿ ಜಯಂತಿ ಪ್ರಯುಕ್ತ ರಜೆ ಹೊಂದಿದೆ. ಚೀನಾದಲ್ಲಿ ಹಬ್ಬದ ಸೀಸನ್ ಆದ್ದರಿಂದ ಸತತ ರಜೆಗಳಿವೆ.

ಇರಾನ್-ಇಸ್ರೇಲ್ ಯುದ್ಧ ಕಾರ್ಮೋಡ; ಜಗತ್ತಿನಾದ್ಯಂತ ಷೇರುಮಾರುಕಟ್ಟೆ ತತ್ತರ; ಭಾರತ, ಚೀನಾ ಪೇಟೆಗಳಿಗೆ ರಜೆಯ ರಿಲೀಫ್
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 02, 2024 | 2:00 PM

ನವದೆಹಲಿ, ಅಕ್ಟೋಬರ್ 2: ಇಸ್ರೇಲ್ ಮತ್ತು ಇರಾನ್ ಮಧ್ಯೆ ಪೂರ್ಣಪ್ರಮಾಣದ ಯುದ್ಧ ಶುರುವಾಗುವ ಭೀತಿ ಆವರಿಸಿದೆ. ಇರಾನ್ ಹಾಗೂ ಮಧ್ಯಪ್ರಾಚ್ಯ ಪ್ರದೇಶಗಳಾದ್ಯಂತ ದಾಳಿ ಮಾಡುವುದಾಗಿ ಇಸ್ರೇಲ್ ಘೋಷಿಸಿದೆ. ತನ್ನದು ಪ್ರತೀಕಾರದ ದಾಳಿ ಮಾತ್ರ. ಇದಕ್ಕೆ ಪ್ರತಿಯಾಗಿ ಮತ್ತೆ ದಾಳಿ ಮಾಡಿದರೆ ಇನ್ನೂ ಪ್ರಬಲ ಪ್ರತಿದಾಳಿ ಮಾಡುವುದಾಗಿ ಇರಾನ್ ಕೂಡ ಎಚ್ಚರಿಸಿದೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿಯಿಂದ ಆರಂಭವಾದ ದಾಳಿ ಪ್ರತಿದಾಳಿಗಳು ಈಗ ಮೂರನೇ ವಿಶ್ವ ಮಹಾಯುದ್ಧಕ್ಕೆ ನಾಂದಿ ಹಾಡುವಂತೆ ಕಾಣುತ್ತಿವೆ. ಇಸ್ರೇಲ್ ಮೇಲೆ ಇರಾನ್​ನ ನೂರಾರು ಕ್ಷಿಪಣಿಗಳ ದಾಳಿಯಾಗಿದ್ದು ಭಾರೀ ದೊಡ್ಡ ಬೆಳವಣಿಗೆ ಎನ್ನಲಾಗಿದೆ. ನಿರೀಕ್ಷೆಯಂತೆ ಇದು ಜಗತ್ತಿನ ಕಣ್ಣು ಅತ್ತ ನೆಡುವಂತೆ ಮಾಡಿದೆ. ಸಹಜವಾಗಿ ಷೇರು ಮಾರುಕಟ್ಟೆಯಲ್ಲಿ ತಲ್ಲಣದ ಛಾಯೆ ಆವರಿಸಿದೆ.

ಏಷ್ಯಾದ ಹಲವು ಮಾರುಕಟ್ಟೆಗಳು ಕಳೆಗುಂದಿವೆ. ಜಪಾನ್​ನ ನಿಕ್ಕೀ ಸೂಚ್ಯಂಕ ಶೇ. 1.5ರಷ್ಟು ಕುಸಿತ ಕಂಡಿದೆ. ಸೌತ್ ಕೊರಿಯಾದ ಕೋಸ್​ಪಿ ಸೂಚ್ಯಂಕ 1.3 ಪ್ರತಿಶತದಷ್ಟು ನಷ್ಟ ಕಂಡರೆ, ಆಸ್ಟ್ರೇಲಿಯಾದ ಸೂಚ್ಯಂಕವೂ ಹಿನ್ನಡೆ ಕಂಡಿದೆ.

ಅಮೆರಿಕದ ಎಸ್ ಅಂಡ್ ಪಿ 500 ಸ್ಟಾಕ್ ಇಂಡೆಕ್ಸ್ ಫ್ಯೂಚರ್ಸ್​ನಲ್ಲಿ ಕುಸಿತ ಮುಂದುವರಿದಿದೆ. ಎಂಎಸ್​ಸಿಐನ ಏಷ್ಯಾ ಪೆಸಿಫಿಕ್ ಇಂಡೆಕ್ಸ್ ಕೂಡ ಇಳಿಕೆ ಕಂಡಿದೆ. ಇವೆಲ್ಲವೂ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಪರಿಣಾಮ ಎಂದು ಹೇಳಲಾಗದು. ಸ್ವಲ್ಪ ಮಟ್ಟಿಗಾದರೂ ಹೂಡಿಕೆದಾರರನ್ನು ಭೀತಿಗೊಳಿಸಿರಬಹುದು.

ಹಾಂಕಾಂಗ್ ಮಾರುಕಟ್ಟೆ ಚೇತರಿಕೆ

ಏಷ್ಯಾದ ಮಾರುಕಟ್ಟೆಗಳು ಹಿನ್ನಡೆ ಕಾಣುತ್ತಿರುವ ಹೊತ್ತಲ್ಲೇ ಹಾಂಕಾಂಗ್​ನ ಹ್ಯಾಂಗ್ ಸೆಂಗ್ ಇಂಡೆಕ್ಸ್ ಹೊಳೆಯುತ್ತಿದೆ. ಇಂದು ಬುಧವಾರ ಶೇ. 2.3ರಷ್ಟು ಹೆಚ್ಚಳ ಕಂಡಿದೆ. ಚೀನಾದ ಆರ್ಥಿಕತೆಗೆ ಪುಷ್ಟಿ ಕೊಡಲು ಅಲ್ಲಿನ ಸರ್ಕಾರ ತೆಗೆದುಕೊಂಡ ಕ್ರಮಗಳ ಪರಿಣಾಮ ಹಾಂಕಾಂಗ್ ಮಾರುಕಟ್ಟೆ ಮೇಲಾಗುತ್ತಿದೆ.

ಇದನ್ನೂ ಓದಿ: STP- ನಿಶ್ಚಿತವಾಗಿ ಸಂಪತ್ತು ಸೃಷ್ಟಿಸುವ ಏಕೈಕ ಮಾರ್ಗ ಈ ಎಸ್​ಟಿಪಿ; ಏನಿದು ಫಾರ್ಮುಲಾ?

ಕಳೆದ ಕೆಲ ದಿನಗಳಿಂದ ಅದ್ಭುತವಾಗಿ ಬೆಳೆಯುತ್ತಿರುವ ಚೀನಾದ ಷೇರು ಮಾರುಕಟ್ಟೆಗೆ ಈಗ ಸಾಲಸಾಲು ರಜಾದಿನಗಳಿವೆ. ಹಬ್ಬದ ಸೀಸನ್ ಆದ್ದರಿಂದ ಸತತವಾಗಿ ರಜೆ ಇದೆ.

ಇತ್ತ, ಭಾರತದಲ್ಲಿ ನಿನ್ನೆ ಮಂಗಳವಾರ ಅಲ್ಪ ಕುಸಿತ ಕಂಡಿದ್ದ ಷೇರುಮಾರುಕಟ್ಟೆಗೆ ಇಂದು ಗಾಂಧಿ ಜಯಂತಿ ನಿಮಿತ್ತ ರಜೆ ಇದೆ. ನಾಳೆಯೂ ಕುಸಿತ ಮುಂದುವರಿಯುವ ಸಾಧ್ಯತೆ ಕಾಣುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?