AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಪನಿಗಳು ಉದ್ಯೋಗಿಗಳ ಪಾಲಿಗೆ ಪ್ರೆಷರ್ ಕುಕ್ಕರ್​ಗಳಂತಾದ್ರೆ ಕಷ್ಟ: ಜೋಹೋ ಸಿಇಒ

Zoho CEO Sridhar Vembu speaks on work life balance: ಕಾರ್ಪೊರೇಟ್ ಕ್ಷೇತ್ರದಲ್ಲಿರುವ ಸಂಸ್ಥೆಗಳು ಉದ್ಯೋಗಿಗಳ ಪಾಲಿಗೆ ಪ್ರೆಷರ್ ಕುಕ್ಕರ್​ನಂತಾಗಿವೆ ಎಂದು ಐಟಿ ಸೆಕ್ಟರ್ ಕಂಪನಿಯಾದ ಜೋಹೋದ ಸಿಇಒ ಶ್ರೀಧರ್ ವೆಂಬು ಬೇಸರ ವ್ಯಕ್ತಪಡಿಸಿದ್ದಾರೆ. ಸಣ್ಣ ಪಟ್ಟಣಗಳಿಂದ ಕೆಲಸಕ್ಕೆ ದೊಡ್ಡ ನಗರಗಳಿಗೆ ಹೋಗುವ ಉದ್ಯೋಗಿಗಳು, ಕೆಲಸದ ಒತ್ತಡ, ನಗರದ ಒತ್ತಡ, ವೈಯಕ್ತಿಕ ಒತ್ತಡಗಳಿಗೆ ಸಿಲುಕಿ ಬರ್ನೌಟ್ ಆಗುತ್ತಾರೆ ಎಂಬುದು ವೆಂಬು ಅನಿಸಿಕೆ.

ಕಂಪನಿಗಳು ಉದ್ಯೋಗಿಗಳ ಪಾಲಿಗೆ ಪ್ರೆಷರ್ ಕುಕ್ಕರ್​ಗಳಂತಾದ್ರೆ ಕಷ್ಟ: ಜೋಹೋ ಸಿಇಒ
ಶ್ರೀಧರ್ ವೆಂಬು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 02, 2024 | 5:20 PM

ನವದೆಹಲಿ, ಅಕ್ಟೋಬರ್ 2: ಭಾರತದ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಸಾಕಷ್ಟು ಸ್ಟ್ರೆಸ್ ಅನುಭವಿಸುತ್ತಿದ್ದಾರೆ ಎಂದು ಜೋಹೋ ಸಂಸ್ಥೆಯ ಸಿಇಒ ಮತ್ತು ಸಹ-ಸಂಸ್ಥಾಪಕ ಶ್ರೀಧರ್ ವೆಂಬು ಆತಂಕ ವ್ಯಕ್ತಪಡಿಸಿದ್ದಾರೆ. ಉದ್ಯೋಗಿಗಳ ಮೇಲೆ ಕಂಪನಿಗಳು ತೀವ್ರವಾದ ಒತ್ತಡ ಹಾಕುತ್ತಿವೆ. ದೀರ್ಘಾವಧಿಯವರೆಗೆ ಇಂತಹ ವಾತಾವರಣದಲ್ಲಿ ಕೆಲಸ ಮಾಡಲು ಆಗುವುದಿಲ್ಲ. ಸಮತೋಲನದಿಂದ ಕೂಡಿದ ಕೆಲಸದ ವಾತಾವರಣ ಇದ್ದರೆ ಕಂಪನಿಗಳಿಗೂ ಒಳ್ಳೆಯದು, ಉದ್ಯೋಗಿಗಳಿಗೂ ಒಳ್ಳೆಯ ಎಂದು ವೆಂಬು ಅಭಿಪ್ರಾಯಪಟ್ಟಿದ್ದಾರೆ.

ಕೆಲಸದ ಒತ್ತಡ, ದೊಡ್ಡ ನಗರಗಳಲ್ಲಿನ ಓಡಾಟದ ಒತ್ತಡ, ಒಂಟಿತನ ಇತ್ಯಾದಿ ಸಮಸ್ಯೆಗಳು ಆರೋಗ್ಯಕರವಲ್ಲದ ಕೆಲಸದ ವಾತಾರಣಕ್ಕೆ ಎಡೆ ಮಾಡಿಕೊಡುತ್ತಿವೆ. ನೀವು ಜನರನ್ನು ಒಂದು ದೊಡ್ಡ ಪ್ರೆಷರ್ ಕುಕ್ಕರ್​ಗೆ ನೂಕುತ್ತಿದ್ದಾರೆ. ಹಲವರು ಮುರುಟಿಹೋಗುತ್ತಾರೆ. ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಉದ್ಯೋಗಿಗಳ ಮೇಲೆ ತೀರಾ ಒತ್ತಡ ಹೇರುವಂತಹ ಪ್ರವೃತ್ತಿಯನ್ನು ಬದಲಿಸಿಕೊಳ್ಳಬೇಕು ಎಂದು ಶ್ರೀಧರ್ ವೆಂಬು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: STP- ನಿಶ್ಚಿತವಾಗಿ ಸಂಪತ್ತು ಸೃಷ್ಟಿಸುವ ಏಕೈಕ ಮಾರ್ಗ ಈ ಎಸ್​ಟಿಪಿ; ಏನಿದು ಫಾರ್ಮುಲಾ?

ಬೇರೆ ಬೇರೆ ಸ್ಥಳಗಳಿಗೆ ಕಂಪನಿಗಳು ಹರಡಲಿ…

ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ ನಿತ್ಯವೂ ಪ್ರಯಾಣಕ್ಕೆ ಸಾಕಷ್ಟು ಸಮಯ ವ್ಯಯವಾಗುತ್ತದೆ. ಹಾಗೆಯೇ, ಸಣ್ಣ ನಗರಗಳಿಂದ ದೊಡ್ಡ ನಗರಗಳಿಗೆ ಹೋದವರಿಗೆ ಅಲ್ಲೇನೋ ಒಂಟಿತನ ಕಾಡುತ್ತದೆ. ಈ ಸವಾಲುಗಳನ್ನು ಎದುರಿಸಬೇಕಾದರೆ ಕಂಪನಿಗಳು ಪ್ರಾದೇಶಿಕವಾಗಿ ಚದುರಬೇಕು. ಸಣ್ಣ ನಗರ ಮತ್ತು ಸಣ್ಣ ಪಟ್ಟಣಗಳಲ್ಲಿ ಕಂಪನಿಗಳು ಸ್ಥಾಪಿತವಾದರೆ ಇಂತಹ ಕೆಲ ಒತ್ತಡಗಳನ್ನು ದೂರ ಮಾಡಬಹುದು. ಎಲ್ಲಾ ಚಟುವಟಿಕೆಗಳೂ ಒಂದೇ ಸ್ಥಳದಲ್ಲಿ ಆಗುವುದಕ್ಕಿಂತ ಬೇರೆ ಬೇರೆ ಸ್ಥಳಗಳಿಗೆ ಹಂಚಿಕೆ ಆಗುವುದು ತರ ಎಂದು ಜೋಹೋ ಸಿಇಒ ಹೇಳಿದ್ದಾರೆ.

ನಾನಿನ್ನೂ ಸಾಕಷ್ಟು ವರ್ಷ ಕೆಲಸ ಮಾಡಬೇಕು…

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶ್ರೀಧರ್ ವೆಂಬು, ಕೆಲಸದ ಸ್ಥಳದಲ್ಲಿ ಉದ್ಯೋಗಿಗಳ ಮಾನಸಿಕ ಆರೋಗ್ಯ ಸರಿಯಾಗಿರುವುದು ಬಹಳ ಮುಖ್ಯ. ನಾನು 27-28 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಇನ್ನೂ 28 ವರ್ಷ ಕೆಲಸ ಮಾಡಬೇಕೆಂದಿದ್ದೇನೆ. ಇದು ಸಾಧ್ಯವಾಗಬೇಕಾದರೆ ನಾನು ಬರ್ನೌಟ್ ಆಗದಂತೆ ಇರಬೇಕು. ನಾನು ಮಾತ್ರವಲ್ಲ, ನನ್ನ ಯಾವ ಉದ್ಯೋಗಿಯೂ ಬರ್ನೌಟ್ ಆಗಬಾರದು ಎಂದು ತಮಿಳುನಾಡು ಮೂಲದ ಈ ಉದ್ಯಮಿ ಹೇಳುತ್ತಾರೆ.

ಇದನ್ನೂ ಓದಿ: ಬಳಕೆಯಲ್ಲಿ ಇಲ್ಲದೆ ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಗಳನ್ನು ಮತ್ತೆ ಸಕ್ರಿಯಗೊಳಿಸುವ ಕ್ರಮ

ಶ್ರೀಧರ್ ವೆಂಬು 1996ರಲ್ಲಿ ಜೋಹೋ ಸಂಸ್ಥೆ ಸ್ಥಾಪಿಸಿದ್ದಾರೆ. ಚೆನ್ನೈನಲ್ಲಿ ಮುಖ್ಯ ಕಚೇರಿ ಹೊಂದಿರುವ ಈ ಮಲ್ಟಿನ್ಯಾಷನಲ್ ಕಂಪನಿಯು ಸಾಫ್ಟ್​ವೇರ್ ಸರ್ವಿಸ್, ಬಿಸಿನೆಸ್ ಟೂಲ್ ಇತ್ಯಾದಿ ಸೇವೆ ನೀಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ