Maruti Suzuki car: ಈ ಮಾರುತಿ ಕಾರಿನಲ್ಲಿ ಚಿನ್ನದಷ್ಟೇ ಬೆಲೆಬಾಳುವ ಭಾಗವಿದೆ, ಕಳ್ಳರು ಅದನ್ನು ಕದ್ದು ಶ್ರೀಮಂತರಾಗ್ತಿದಾರೆ!

Maruti Suzuki Eeco car catalytic converter: ಈ ಮಾರುತಿ ಕಾರಿನಲ್ಲಿ ಚಿನ್ನದಷ್ಟೇ ಬೆಲೆಬಾಳುವ ಭಾಗವಿದೆ - ಇದು ನಿಜಕ್ಕೂ ದುಬಾರಿ. ಈ ಲೋಹಗಳನ್ನು ಮಾಲಿನ್ಯ ಕಡಿಮೆ ಮಾಡುವ ಉಪಕರಣಗಳಲ್ಲಿ ಬಳಸಲಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಕಳ್ಳರು ಕೆಲವೇ ನಿಮಿಷಗಳಲ್ಲಿ ಇದನ್ನು ಹೊರತೆಗೆದು, ಸ್ಕ್ರ್ಯಾಪ್ ವಿತರಕರಿಗೆ ಮಾರುತ್ತಾರೆ. ಮುಂದೆ ಅವರಿಗೆ ಅದು ದೊಡ್ಡ ಲಾಭವನ್ನೇ ತಂದುಕೊಡುತ್ತದೆ.

Maruti Suzuki car: ಈ ಮಾರುತಿ ಕಾರಿನಲ್ಲಿ ಚಿನ್ನದಷ್ಟೇ ಬೆಲೆಬಾಳುವ ಭಾಗವಿದೆ, ಕಳ್ಳರು ಅದನ್ನು ಕದ್ದು ಶ್ರೀಮಂತರಾಗ್ತಿದಾರೆ!
ಮಾರುತಿ ಕಾರುಗಳಲ್ಲಿ ಸೈಲೆಂಟಾಗಿ ಸೈಲೆನ್ಸ​​ರ್​ಗಳನ್ನು ಕದಿಯುತ್ತಿರುವ ಕಳ್ಳರು!
Follow us
|

Updated on: Oct 03, 2024 | 2:03 AM

ಮಾರುತಿ ಸುಜುಕಿ ಇಕೋ (Maruti Suzuki Eeco): ಮಾರುತಿ ಸುಜುಕಿ ಕಾರುಗಳು ಭಾರತದಲ್ಲಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಬಹಳ ಜನಪ್ರಿಯವಾಗಿವೆ, ಭಾರತದಲ್ಲಂತೂ ತುಂಬಾ ಬೇಡಿಕೆಯಿದೆ. ಜನರು ಅವುಗಳನ್ನು ಸಲೀಸಾಗಿ ಖರೀದಿಸುತ್ತಾರೆ. ಎಸ್‌ಯುವಿ ಶ್ರೇಣಿವರೆಗೆ ಮಾರುತಿ ಕಾರುಗಳು ಪ್ರತಿಯೊಂದು ವಿಭಾಗದಲ್ಲೂ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತವೆ.

ಆದರೆ ಕಳೆದ ಕೆಲವು ವರ್ಷಗಳಿಂದ, Maruti Suzuki Eeco ಹೆಸರಿನ ಮಾರುತಿ ಸುಜುಕಿ ಕಾರಿನ ಮಾಲೀಕರು ದೊಡ್ಡ, ಆತಂಕಕಾರಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೌದು ವಾಸ್ತವವಾಗಿ ಈ ಕಾರಿನಲ್ಲಿ ಬೆಲೆಬಾಳುವ ಭಾಗವೊಂದಿದ್ದು, ಕಳ್ಳರು ಆ ಭಾಗವನ್ನು ಕಳ್ಳತನ ಮಾಡಿ ದುಡ್ಡು ಸಂಪಾದಿಸುತ್ತಿದ್ದಾರೆ. ಈ ಭಾಗವು ಚಿನ್ನದಷ್ಟೇ ಮೌಲ್ಯಯುತವಾಗಿದೆ. ಇದು ಯಾವ ಭಾಗವಾಗಿದೆ ಮತ್ತು ಇದು ಅಷ್ಟೊಂದು ಮೌಲ್ಯಯುತವಾಗಲು ಏನು ಕಾರಣ ಎಂಬುದನ್ನು ಈಗ ತಿಳಿಯೋಣ.

ಈ ಮಾರುತಿ ಕಾರಿನಲ್ಲಿ ಚಿನ್ನದಷ್ಟೇ ಬೆಲೆಬಾಳುವ ಭಾಗವಿದ್ದು, ಕಳ್ಳರು ಅದನ್ನು ಕದ್ದು ಶ್ರೀಮಂತರಾಗುತ್ತಿದ್ದಾರೆ!

ವಾಸ್ತವವಾಗಿ, ಇಲ್ಲಿ ಹೇಳುತ್ತಿರುವ ಮಾರುತಿ ಸುಜುಕಿ ಇಕೋ ಕಾರಿನ ಭಾಗವನ್ನು ವೇಗವರ್ಧಕ ಪರಿವರ್ತಕ (catalytic converter) ಎಂದು ಕರೆಯಲಾಗುತ್ತದೆ. ಇದು ಇತರ ಭಾಗಗಳಿಗಿಂತ ಹೆಚ್ಚು ಮೌಲ್ಯಯುತವಾಗಿದೆ. ಹಾಗಾಗಿ ಕಳ್ಳರು ಅದನ್ನು ಗುರಿಯಾಗಿಸುತ್ತಾರೆ. ಪಲ್ಲಾಡಿಯಮ್, ಪ್ಲಾಟಿನಂ ಮತ್ತು ರೋಢಿಯಮ್​​ (palladium, platinum, and rhodium) ಅಂತಹ ಬೆಲೆಬಾಳುವ ಲೋಹಗಳನ್ನು ಒಳಗೊಂಡಿರುವ ಕಾರಣ ಈ ಭಾಗವನ್ನು ಚಿನ್ನದಂತೆ ಮೌಲ್ಯಯುತವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: 2016-17ರ ಸರಣಿಯ ಸಾವರೀನ್ ಗೋಲ್ಡ್ ಬಾಂಡ್​ನಿಂದ ಸಿಕ್ಕ ಲಾಭ ಶೇ. 140; ಹೂಡಿಕೆದಾರರ ಕೈಹಿಡಿದ ಚಿನ್ನ

ಇದು ನಿಜಕ್ಕೂ ದುಬಾರಿಯಾಗಿದೆ. ಈ ಲೋಹಗಳನ್ನು ಮಾಲಿನ್ಯ ಕಡಿಮೆ ಮಾಡುವ ಉಪಕರಣಗಳಲ್ಲಿ ಬಳಸಲಾಗುತ್ತದೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವುಗಳಿಗೆ ಭಾರಿ ಬೇಡಿಕೆಯಿದೆ. ಕಳ್ಳರು ಅವುಗಳನ್ನು ಕೆಲವೇ ನಿಮಿಷಗಳಲ್ಲಿ ಹೊರತೆಗೆಯಬಲ್ಲರು. ಮತ್ತು ಅವುಗಳನ್ನು ಸ್ಕ್ರ್ಯಾಪ್ ವಿತರಕರಿಗೆ ಮಾರಾಟ ಮಾಡಿಬಿಡುತ್ತಾರೆ. ಮುಂದೆ ಅವರಿಗೆ ಅದು ದೊಡ್ಡ ಲಾಭವನ್ನೇ ತಂದುಕೊಡುತ್ತದೆ.

ಮಾರುತಿ ಕಾರಿನಲ್ಲಿ ವೇಗವರ್ಧಕ ಪರಿವರ್ತಕ ಹೇಗೆ ಕೆಲಸ ಮಾಡುತ್ತದೆ?

ಮಾರುತಿ ಇಕೋದಲ್ಲಿನ ವೇಗವರ್ಧಕ ಪರಿವರ್ತಕವನ್ನು ವಾಹನದ ಇಂಜಿನ್‌ನಿಂದ ಹಾನಿಕಾರಕ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಇದು ವಾಹನದ ನಿಷ್ಕಾಸ ವ್ಯವಸ್ಥೆಯ (exhaust system) ಭಾಗವಾಗಿದೆ ಮತ್ತು ಮೂರು ಪ್ರಮುಖ ಮಾಲಿನ್ಯಕಾರಕಗಳನ್ನು (ಕಾರ್ಬನ್ ಮಾನಾಕ್ಸೈಡ್ (CO), ನೈಟ್ರೋಜನ್ ಆಕ್ಸೈಡ್‌ಗಳು (NOx), ಮತ್ತು ಹೈಡ್ರೋಕಾರ್ಬನ್‌ಗಳು) ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಅಚ್ಚರಿಯ ಬೆಲೆಯಲ್ಲಿ ಸೂಪರ್ ಫೀಚರ್ಸ್ ಹೊಂದಿರುವ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ಬಿಡುಗಡೆ

ಅದರೊಳಗಿರುವ ಬೆಲೆಬಾಳುವ ಲೋಹಗಳಾದ ಪ್ಲಾಟಿನಮ್, ಪಲ್ಲಾಡಿಯಮ್ ಮತ್ತು ರೋಢಿಯಮ್ ರಾಸಾಯನಿಕ ಕ್ರಿಯೆಯನ್ನು ವೇಗಗೊಳಿಸುತ್ತದೆ. ಇದು ಈ ಮಾಲಿನ್ಯಕಾರಕಗಳನ್ನು ಕಡಿಮೆ ಹಾನಿಕಾರಕ ಅನಿಲಗಳಾಗಿ ಪರಿವರ್ತಿಸುತ್ತದೆ.

ಆಯ್ದ ವೇಗವರ್ಧಕ ಕಡಿತ (Selective catalytic reduction -SCR): ಈ ಪ್ರಕ್ರಿಯೆಯು ನೈಟ್ರೋಜನ್ ಆಕ್ಸೈಡ್ ಅನಿಲಗಳನ್ನು ಸಾರಜನಕ ಮತ್ತು ಆಮ್ಲಜನಕವಾಗಿ ವಿಭಜಿಸುತ್ತದೆ, ಇದರಿಂದಾಗಿ ಗಾಳಿಯಲ್ಲಿ ನೈಟ್ರೋಜನ್ ಆಕ್ಸೈಡ್​​ಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!

ಆಕ್ಸಿಡೀಕರಣ ವೇಗವರ್ಧಕ: ಇದರಲ್ಲಿ ಇಂಗಾಲದ ಮಾನಾಕ್ಸೈಡ್ ಮತ್ತು ಹೈಡ್ರೋಕಾರ್ಬನ್‌ಗಳನ್ನು ಇಂಗಾಲದ ಡೈಆಕ್ಸೈಡ್ ಮತ್ತು ನೀರಾಗಿ ಪರಿವರ್ತಿಸಲಾಗುತ್ತದೆ, ಇದರಿಂದಾಗಿ ಈ ಅನಿಲಗಳ ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

ಆಮ್ಲಜನಕ ಶೇಖರಣೆ: ಇದು ಆಮ್ಲಜನಕದ ಪ್ರಮಾಣವನ್ನು ನಿಯಂತ್ರಿಸುವ ಸಂವೇದಕವನ್ನು (sensor) ಹೊಂದಿದ್ದು, ನಿಷ್ಕಾಸದಲ್ಲಿ (exhaust) ಇರುವ ಮಾಲಿನ್ಯಕಾರಕಗಳನ್ನು ಪರಿಣಾಮಕಾರಿಯಾಗಿ ವಿಭಜಿಸಬಲ್ಲದು.

ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ