AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2016-17ರ ಸರಣಿಯ ಸಾವರೀನ್ ಗೋಲ್ಡ್ ಬಾಂಡ್​ನಿಂದ ಸಿಕ್ಕ ಲಾಭ ಶೇ. 140; ಹೂಡಿಕೆದಾರರ ಕೈಹಿಡಿದ ಚಿನ್ನ

Sovereign Gold Bond 2016-17 Series-2 redemption details: 2016ರ ಸೆಪ್ಟೆಂಬರ್ 30ರಂದು ಬಿಡುಗಡೆ ಮಾಡಲಾಗಿದ್ದ ಸಾವರೀನ್ ಗೋಲ್ಡ್ ಬಾಂಡ್​ಗಳು ಈಗ ಮೆಚ್ಯೂರಿಟಿ ಆಗಿವೆ. ಗ್ರಾಮ್​ಗೆ 3,119 ರೂ ನಂತೆ ಹೂಡಿಕೆ ಆಗಿತ್ತು. ಈಗ ಗ್ರಾಮ್​ಗೆ 7,517 ರೂಗೆ ರಿಡೆಂಪ್ಷನ್ ಪ್ರೈಸ್ ನಿಗದಿಯಾಗಿದೆ. ಎಂಟು ವರ್ಷದಲ್ಲಿ ಹೂಡಿಕೆ ಮೌಲ್ಯ ಶೇ. 141ರಷ್ಟು ಹೆಚ್ಚಾಗಿದೆ. ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ಆ ಹೂಡಿಕೆ 2.40 ಲಕ್ಷ ರೂ ಆಗಿರುತ್ತದೆ.

2016-17ರ ಸರಣಿಯ ಸಾವರೀನ್ ಗೋಲ್ಡ್ ಬಾಂಡ್​ನಿಂದ ಸಿಕ್ಕ ಲಾಭ ಶೇ. 140; ಹೂಡಿಕೆದಾರರ ಕೈಹಿಡಿದ ಚಿನ್ನ
ಸಾವರೀನ್ ಗೋಲ್ಡ್ ಬಾಂಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 30, 2024 | 12:54 PM

Share

ನವದೆಹಲಿ, ಸೆಪ್ಟೆಂಬರ್ 30: ಎಂಟು ವರ್ಷಗಳ ಹಿಂದೆ ಬಿಡುಗಡೆ ಮಾಡಲಾಗಿದ್ದ ಸಾವರೀನ್ ಗೋಲ್ಡ್ ಬಾಂಡ್​ಗಳು ಇವತ್ತು ಮೆಚ್ಯೂರಿಟಿಗೆ ಬಂದಿವೆ. ಗ್ರಾಮ್​ಗೆ 7,517 ರೂ ಬೆಲೆಯಂತೆ ಹೂಡಿಕೆದಾರರಿಗೆ ರಿಟರ್ನ್ಸ್ ಸಿಗಲಿದೆ. ನಿಯಮದ ಪ್ರಕಾರ 2024ರ ಮೆಚ್ಯೂರಿಟಿ ದಿನದ ಹಿಂದಿನ ವಾರದ ಸರಾಸರಿ ಚಿನ್ನದ ಬೆಲೆಯನ್ನು ರಿಡೆಂಪ್ಷನ್ ಪ್ರೈಸ್ ಆಗಿ ನಿಗದಿ ಮಾಡಲಾಗುತ್ತದೆ. ಅದರಂತೆ 2024ರ ಸೆಪ್ಟೆಂಬರ್ 23ರಿಂದ 27ರವರೆಗೆ ಇದ್ದ ಸರಾಸರಿ ಚಿನ್ನದ ಬೆಲೆಯನ್ನು ರಿಡೆಂಪ್ಷನ್ ಪ್ರೈಸ್ ಆಗಿ ನಿಗದಿ ಮಾಡಲಾಗಿದೆ.

2016ರ ಸೆಪ್ಟೆಂಬರ್ 30ರಂದು ಎಸ್​ಜಿಬಿ 2016-17ರ ಸೀರೀಸ್-1 ಬಾಂಡ್​ಗಳನ್ನು ಬಿಡುಗಡೆ ಮಾಡಲಾಗಿತ್ತು. ಆಗ ಗ್ರಾಮ್​ಗೆ 3,119 ರೂನಂತೆ ಹೂಡಿಕೆಗಳನ್ನು ಪಡೆಯಲಾಗಿತ್ತು. ಎಂಟು ವರ್ಷದ ಬಳಿಕ ಚಿನ್ನದ ಬೆಲೆ ಗ್ರಾಮ್​ಗೆ 7,517 ಆಗಿದೆ. ಶೇ. 141ರಷ್ಟು ಬೆಲೆ ಹೆಚ್ಚಳ ಆಗಿದೆ.

ಎಸ್​ಜಿಬಿ ಹೂಡಿಕೆದಾರರಿಗೆ ಎಷ್ಟು ಲಾಭ ಸಿಗುತ್ತೆ, ಲೆಕ್ಕಾಚಾರ ಹೀಗಿದೆ…

ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್​ನಲ್ಲಿ 4 ಕಿಲೋ ಚಿನ್ನದ ಮೌಲ್ಯದಷ್ಟು ಹಣವನ್ನು ಹೂಡಿಕೆ ಮಾಡಲು ಅವಕಾಶ ಇದೆ. ಒಂದು ವೇಳೆ 2016ರ ಸೆಪ್ಟೆಂಬರ್ 30ರಂದು ಎಸ್​ಜಿಬಿ ಬಾಂಡ್​ಗಳಲ್ಲಿ 1,00,000 ರೂ ಹೂಡಿಕೆ ಮಾಡಿದ್ದರೆ ಇವತ್ತು ಎಂಟು ವರ್ಷದಲ್ಲಿ ಆ ಹಣ 2,41,000 ರೂ ಆಗಿರುತ್ತದೆ.

ಇದನ್ನೂ ಓದಿ: ಪಿಪಿಎಫ್, ಸುಕನ್ಯ ಸಮೃದ್ದಿ, ಎನ್​ಎಸ್​ಎಸ್ ಯೋಜನೆಗಳಲ್ಲಿ ಅ. 1ರಿಂದ ಹೊಸ ನಿಯಮಗಳು; ತಪ್ಪದೇ ತಿಳಿದಿರಿ

ಹೆಚ್ಚೂಕಡಿಮೆ ಒಂದೂವರೆ ಪಟ್ಟು ಲಾಭ ಸಿಕ್ಕಿದೆ. ಇಷ್ಟೇ ಅಲ್ಲ, ಎಸ್​ಜಿಬಿ ಸ್ಕೀಮ್​ನ ಮತ್ತೊಂದು ವಿಶೇಷತೆ ಎಂದರೆ ಹೂಡಿಕೆಯ ಮೊತ್ತಕ್ಕೆ ವರ್ಷಕ್ಕೆ 2.5 ಪ್ರತಿಶತದಷ್ಟು ಇಂಟರೆಸ್ಟ್ ಕೂಡ ಸಿಗುತ್ತದೆ. ಅಂದರೆ, ನಿಮ್ಮ ಒಂದು ಲಕ್ಷ ರೂ ಹೂಡಿಕೆಗೆ ಎರಡೂವರೆ ಪ್ರತಿಶತ ಎಂದರೆ 2,500 ರೂ ಹಣವು ವಾರ್ಷಿಕವಾಗಿ ನಿಮಗೆ ಸಿಗುತ್ತದೆ. ಎಂಟು ವರ್ಷದಲ್ಲಿ 20,000 ರೂ ಹಣ ಹೆಚ್ಚುವರಿಯಾಗಿ ನಿಮಗೆ ಸೇರುತ್ತದೆ. ಅಲ್ಲಿಗೆ ನಿಮ್ಮ ಒಂದು ಲಕ್ಷ ರೂ ಹೂಡಿಕೆಗೆ ಸಿಕ್ಕ ಪ್ರತಿಫಲ 2,61,000 ರೂ ಆದಂತಾಗುತ್ತದೆ.

ಹಾಗೆಯೇ, ಸಾವರೀನ್ ಗೋಲ್ಡ್ ಬಾಂಡ್​ನಲ್ಲಿ ಮಾಡಲಾಗುವ ಹೂಡಿಕೆಗಳಿಗೆ ತೆರಿಗೆ ವಿನಾಯಿತಿ ಇರುತ್ತದೆ. ನೀವು ಪಡೆಯುವ ಲಾಭಕ್ಕೆ ಯಾವ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಅನ್ವಯ ಆಗಲ್ಲ. ಈ ಮೂಲಕವೂ ಸುಮಾರು 10,000 ರೂಗಿಂತ ಹೆಚ್ಚಿನ ತೆರಿಗೆ ಹಣವನ್ನು ನೀವು ಉಳಿಸುತ್ತೀರಿ.

ಇದನ್ನೂ ಓದಿ: ಪೋಸ್ಟ್ ಆಫೀಸ್ ಸ್ಕೀಮ್​ಗಿಂತಲೂ ಒಂದೂವರೆ ಪಟ್ಟು ಹೆಚ್ಚು ಆದಾಯ; ಟ್ಯಾಕ್ಸ್ ಕಟ್ಟಬೇಕಿಲ್ಲ; ಇಲ್ಲಿದೆ ಎಸ್​ಡಬ್ಲ್ಯುಪಿ ಟ್ರಿಕ್ಸ್

ಎಸ್​ಜಿಬಿ ಬಾಂಡ್ ರಿಡಂಪ್ಷನ್ ಪಡೆಯುವುದು ಹೇಗೆ?

ಸಾವರೀನ್ ಗೋಲ್ಡ್ ಬಾಂಡ್ ಮೆಚ್ಯೂರ್ ಆದ ಬಳಿಕ ನಿಮ್ಮ ಬ್ಯಾಂಕ್ ಖಾತೆಗೆ ತನ್ನಂತಾನೆ ಹಣ ವರ್ಗಾವಣೆ ಆಗಿ ಹೋಗುತ್ತದೆ. ನೀವು ಹೂಡಿಕೆ ಮಾಡುವಾಗ ಬ್ಯಾಂಕ್ ಅಕೌಂಟ್ ನಂಬರ್ ಸರಿಯಾಗಿ ನಮೂದಿಸಿರಬೇಕು. ಒಂದು ವೇಳೆ ಬ್ಯಾಂಕ್ ಖಾತೆ ಬದಲಾವಣೆ ಆಗಬೇಕಿದ್ದರೆ, ರಿಡಂಪ್ಷನ್ ಡೇಟ್​ಗಿಂತ ಮುಂಚೆಯೇ ಬ್ಯಾಂಕ್​ಗೆ ಹೋಗಿ ಅಕೌಂಟ್ ನಂಬರ್ ಬದಲಾಯಿಸಬೇಕಾಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..