ಶೀಘ್ರದಲ್ಲೆ ಸೆನ್ಸೆಕ್ಸ್ 1,00,000 ಗಡಿ ಮುಟ್ಟುತ್ತೆ, ಷೇರು ಖರೀದಿಗೆ ಸಿದ್ಧವಾಗಿ; ಶೇ. 10 ಹೂಡಿಕೆ ಚಿನ್ನದ ಮೇಲಿರಲಿ: ಮಾರ್ಕ್ ಮೋಬಿಯಸ್

Mark Mobius investment ideas: ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂಕ 2024ರ ಅಂತ್ಯದೊಳಗೆ 1,00,000 ಅಂಕಗಳ ಗಡಿ ಮುಟ್ಟಲಿದೆ ಎಂದು ಖ್ಯಾತ ಹೂಡಿಕೆದಾರ ಮಾರ್ಕ್ ಮೋಬಿಯಸ್ ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಸೆನ್ಸೆಕ್ಸ್ 84,300 ಅಂಕಗಳ ಆಸುಪಾಸಿನಲ್ಲಿದೆ. ಮೂರು ತಿಂಗಳಲ್ಲಿ ಶೇ. 18ರಷ್ಟು ಹೆಚ್ಚಳವಾಗಬಹುದು ಎನ್ನುವುದು ಮೋಬಿಯಸ್ ಅವರ ಭವಿಷ್ಯ. ಹಾಗೆಯೇ, ಒಬ್ಬ ವ್ಯಕ್ತಿಯ ಹೂಡಿಕೆ ಪೋರ್ಟ್​ಫೋಲಿಯೋದಲ್ಲಿ ಚಿನ್ನದ ಪ್ರಮಾಣ ಶೇ 10ರಷ್ಟಿರಬೇಕು ಎನ್ನುವುದು ಅವರ ಸಲಹೆ.

ಶೀಘ್ರದಲ್ಲೆ ಸೆನ್ಸೆಕ್ಸ್ 1,00,000 ಗಡಿ ಮುಟ್ಟುತ್ತೆ, ಷೇರು ಖರೀದಿಗೆ ಸಿದ್ಧವಾಗಿ; ಶೇ. 10 ಹೂಡಿಕೆ ಚಿನ್ನದ ಮೇಲಿರಲಿ: ಮಾರ್ಕ್ ಮೋಬಿಯಸ್
ಷೇರುಪೇಟೆ
Follow us
|

Updated on: Sep 30, 2024 | 3:01 PM

ನವದೆಹಲಿ, ಸೆಪ್ಟೆಂಬರ್ 30: ಇವತ್ತು ಸೋಮವಾರ ಷೇರು ಮಾರುಕಟ್ಟೆ ಸಾಕಷ್ಟು ಹಿನ್ನಡೆ ಕಂಡಿದೆ. ಇದೇ ಹೊತ್ತಲ್ಲಿ ಖ್ಯಾತ ಹೂಡಿಕೆದಾರ ಮಾರ್ಕ್ ಮೋಬಿಯಸ್ ಭಾರತೀಯ ಷೇರು ಮಾರುಕಟ್ಟೆ ಸದ್ಯೋಭವಿಷ್ಯದಲ್ಲಿ ಪ್ರಚಂಡವಾಗಿ ಏರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅವರ ಪ್ರಕಾರ ಈ ವರ್ಷಾಂತ್ಯದೊಳಗೆಯೇ ಸೆನ್ಸೆಕ್ಸ್ 1,00,000 ಅಂಕಗಳ ಗಡಿ ದಾಟಲಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್ ಸೂಚ್ಯಂಕ ಸದ್ಯ 84,300 ಆಸುಪಾಸಿನ ಮಟ್ಟದಲ್ಲಿದೆ. ಈ ವರ್ಷಾದ್ಯಂತ ಶೇ. 18ರಷ್ಟು ಏರಿರುವ ಸೆನ್ಸೆಕ್ಸ್, ಕೊನೆಯ ಮೂರು ತಿಂಗಳಲ್ಲಿ ಮತ್ತೆ ಶೇ. 18ರಷ್ಟು ಏರಿಕೆ ಆಗಬಲ್ಲುದಾ? ಮಾರ್ಕ್ ಮೋಬಿಯಸ್ ಪ್ರಕಾರ ಹೌದು.

ಭಾರತದ ಷೇರು ಮಾರುಕಟ್ಟೆ ಬಗ್ಗೆ ಬಹಳಷ್ಟು ಆಶಾದಾಯಕವಾಗಿರುವ ಮಾರ್ಕ್ ಮೋಬಿಯಸ್, ಮಾರ್ಕೆಟ್ ಕರೆಕ್ಷನ್​ನಲ್ಲಿ ಒಳ್ಳೆಯ ಷೇರು ಬೆಲೆ ಕಡಿಮೆಗೆ ಸಿಕ್ಕಲ್ಲಿ ಅದನ್ನು ಖರೀದಿಸಿ ಎಂದು ರೀಟೇಲ್ ಹೂಡಿಕೆದಾರರಿಗೆ ಸಲಹೆಯನ್ನೂ ನೀಡಿದ್ದಾರೆ.

ಶೇ. 10ರಷ್ಟು ಹೂಡಿಕೆ ಚಿನ್ನದ ಮೇಲಿರಲಿ….

ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಒಳ್ಳೆಯ ಕಾಲ. ಕಳೆದ 12 ತಿಂಗಳಲ್ಲಿ ಚಿನ್ನದ ಬೆಲೆ ಶೇ. 18ರಷ್ಟು ಏರಿದೆ. ಬೆಲೆ ಇನ್ನೂ ಹೆಚ್ಚಾಗಲಿದೆ. ಒಬ್ಬ ವ್ಯಕ್ತಿಯ ಹೂಡಿಕೆಯಲ್ಲಿ ಶೇ. 10ರಷ್ಟು ಹೂಡಿಕೆ ಚಿನ್ನದ ಮೇಲಿರಲಿ ಎಂದು ಮೋಬಿಯಸ್ ತಿಳಿಸುತ್ತಾರೆ.

ಇದನ್ನೂ ಓದಿ: 2016-17ರ ಸರಣಿಯ ಸಾವರೀನ್ ಗೋಲ್ಡ್ ಬಾಂಡ್​ನಿಂದ ಸಿಕ್ಕ ಲಾಭ ಶೇ. 140; ಹೂಡಿಕೆದಾರರ ಕೈಹಿಡಿದ ಚಿನ್ನ

ಶೇ. 50ರಷ್ಟು ಹೂಡಿಕೆ ಭಾರತದಲ್ಲೇ

ಮಾರ್ಕ್ ಮೋಬಿಯಸ್ ತಮ್ಮ ಹೂಡಿಕೆ ರಣತಂತ್ರವನ್ನು ಬಹಿರಂಗಪಡಿಸಿದ್ದಾರೆ. ತಮಗೆ ಈಗ ನೂರು ಡಾಲರ್ ಹೂಡಿಕೆ ಮಾಡಬೇಕೆಂದಿದ್ದರೆ, ಭಾರತೀಯ ಮಾರುಕಟ್ಟೆಯಲ್ಲಿ ಶೇ. 50, ಚೀನಾ ಮತ್ತು ತೈವಾನ್ ಮಾರುಕಟ್ಟೆಯಲ್ಲಿ ಶೇ. 25, ಟರ್ಕಿ, ವಿಯೆಟ್ನಾಂ ಮತ್ತಿತರ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಶೇ. 25ರಷ್ಟು ಹೂಡಿಕೆ ಮಾಡುತ್ತೇನೆ ಎಂದಿದ್ದಾರೆ. ಹಾಗೆಯೇ, ತಮ್ಮ ಇನ್ವೆಸ್ಟ್​ಮೆಂಟ್ ಪೋರ್ಟ್​ಫೋಲಿಯೋದಲ್ಲಿ ಶೇ. 10ರಷ್ಟು ಹೂಡಿಕೆ ಚಿನ್ನದ ಮೇಲಿರುವಂತೆ ನೋಡಿಕೊಳ್ಳುತ್ತೇನೆ ಎನ್ನುತ್ತಾರೆ ಅವರು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದ ದರ್ಶನ್; ಜೈಲಿಂದ ದಾಸ ಕೊಟ್ಟ ಸಿಗ್ನಲ್ ಏನು?
ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದ ದರ್ಶನ್; ಜೈಲಿಂದ ದಾಸ ಕೊಟ್ಟ ಸಿಗ್ನಲ್ ಏನು?
ಮಗನನ್ನು ಪುನಃ ಲಾಂಚ್ ಮಾಡಲು ಹಟತೊಟ್ಟ ಹೆಚ್ಡಿಕೆ ಕ್ಷೇತ್ರ ಬಿಟ್ಟುಕೊಡುವರೇ?
ಮಗನನ್ನು ಪುನಃ ಲಾಂಚ್ ಮಾಡಲು ಹಟತೊಟ್ಟ ಹೆಚ್ಡಿಕೆ ಕ್ಷೇತ್ರ ಬಿಟ್ಟುಕೊಡುವರೇ?
ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಮಯ ಬೇಕು: ವಿಜಯೇಂದ್ರ
ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಮಯ ಬೇಕು: ವಿಜಯೇಂದ್ರ
ಪ್ರಧಾನಿ ನರೇಂದ್ರ ಮೋದಿ ಭೇಟಿ ಬಗ್ಗೆ ಸೋಮಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ
ಪ್ರಧಾನಿ ನರೇಂದ್ರ ಮೋದಿ ಭೇಟಿ ಬಗ್ಗೆ ಸೋಮಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ
ಕೋರ್ಟ್ ಆದೇಶದ ಮೇರೆಗೆ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಪ್ರದೋಶ್ ವಾಪಸ್
ಕೋರ್ಟ್ ಆದೇಶದ ಮೇರೆಗೆ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಪ್ರದೋಶ್ ವಾಪಸ್
ಜಗಳೂರು ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭ!
ಜಗಳೂರು ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭ!
ಭಾರತ ರತ್ನ ರತನ್ ಟಾಟಾ ನಿಧನಕ್ಕೆ ಮುಂಬೈನಲ್ಲಿ ಪ್ರಕೃತಿಯಿಂದಲೂ ಶೋಕಾಚರಣೆ
ಭಾರತ ರತ್ನ ರತನ್ ಟಾಟಾ ನಿಧನಕ್ಕೆ ಮುಂಬೈನಲ್ಲಿ ಪ್ರಕೃತಿಯಿಂದಲೂ ಶೋಕಾಚರಣೆ
ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್​ಗೆ ಪ್ರೇಕ್ಷಕರು ನಿಬ್ಬೆರಗು
ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್​ಗೆ ಪ್ರೇಕ್ಷಕರು ನಿಬ್ಬೆರಗು
ಹರಿವ ನೀರಲ್ಲಿ ಕಾರುಗಳನ್ನು ಮುಂದಕ್ಕೆ ಓಡಿಸಲು ಚಾಲಕರ ಪಡಿಪಾಟಲು
ಹರಿವ ನೀರಲ್ಲಿ ಕಾರುಗಳನ್ನು ಮುಂದಕ್ಕೆ ಓಡಿಸಲು ಚಾಲಕರ ಪಡಿಪಾಟಲು
ನರಕದವರನ್ನು ಒಲಿಸಲು ತಪ್ಪು ನಿರ್ಧಾರ ತೆಗೆದುಕೊಂಡ್ರಾ ಹಂಸಾ?
ನರಕದವರನ್ನು ಒಲಿಸಲು ತಪ್ಪು ನಿರ್ಧಾರ ತೆಗೆದುಕೊಂಡ್ರಾ ಹಂಸಾ?