ಜನರಿಗೆ ಷೇರುಪೇಟೆ ಭ್ರಮೆ ಎಂದ ಐಐಟಿ ಪ್ರೊಫೆಸರ್; ಪರ್ಯಾಯ ಹೂಡಿಕೆ ಮಾರ್ಗಗಳೇನು?

IIT Madras professor Dr. M Pattabiraman speaks of stock market myth: ಭಾರತದಲ್ಲಿ ಷೇರು ಮಾರುಕಟ್ಟೆಯತ್ತ ಜನರು ಹೆಚ್ಚೆಚ್ಚು ಆಕರ್ಷಿತರಾಗುತ್ತಿದ್ದಾರೆ. ಷೇರುಗಳು, ಮ್ಯೂಚುವಲ್ ಫಂಡ್, ಇಟಿಎಫ್​ಗಳಲ್ಲಿ ಹೂಡಿಕೆ ಹೆಚ್ಚುತ್ತಿವೆ. ಆದರೆ, ಈ ಟ್ರೆಂಡ್ ಬಗ್ಗೆ ಮದ್ರಾಸ್ ಐಐಟಿ ಪ್ರೊಫೆಸರ್ ಪಟ್ಟಾಭಿರಾಮನ್ ಕಳವಳ ವ್ಯಕ್ತಪಡಿಸಿದ್ದಾರೆ. ಜನರು ಸಾಲ ಮಾಡಿ ಷೇರುಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಮಾರುಕಟ್ಟೆ ಹೀಗೇ ಓಡುತ್ತಿರುತ್ತೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.

ಜನರಿಗೆ ಷೇರುಪೇಟೆ ಭ್ರಮೆ ಎಂದ ಐಐಟಿ ಪ್ರೊಫೆಸರ್; ಪರ್ಯಾಯ ಹೂಡಿಕೆ ಮಾರ್ಗಗಳೇನು?
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 01, 2024 | 1:01 PM

ನವದೆಹಲಿ, ಅಕ್ಟೋಬರ್ 1: ಭಾರತದ ಷೇರು ಮಾರುಕಟ್ಟೆ ಇತ್ತೀಚಿನ ವರ್ಷಗಳಲ್ಲಿ ಅದ್ವಿತೀಯವಾಗಿ ಓಡುತ್ತಿದೆ. ಕಳೆದ ಮೂರು ವರ್ಷಗಳನ್ನು ತೆಗೆದು ನೋಡಿದರೆ ಹೆಚ್ಚಿನ ಮ್ಯೂಚುವಲ್ ಫಂಡ್​ಗಳು ಶೇ. 15ಕ್ಕಿಂತ ಹೆಚ್ಚಿನ ರಿಟರ್ನ್ ತಂದುಕೊಟ್ಟಿವೆ. ಬಹಳಷ್ಟು ಷೇರುಗಳು ಮಲ್ಟಿಬ್ಯಾಗರ್ ಎನಿಸಿವೆ. ಹೆಚ್ಚೆಚ್ಚು ಸಂಖ್ಯೆಯಲ್ಲಿ ಜನರು ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್​ಗಳತ್ತ ವಾಲುತ್ತಿರುವುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಆದರೆ, ಬಹಳಷ್ಟು ತಜ್ಞರು ಷೇರು ಮಾರುಕಟ್ಟೆಯನ್ನು ಮಾಯಾಬಜಾರು ಎಂದು ಹೇಳಿರುವುದುಂಟು. ಷೇರು ಮಾರುಕಟ್ಟೆಯಲ್ಲಿ ಅಪಾಯ ಎಷ್ಟಿದೆ ಎಂದು ಅರಿಯದೆಯೇ ಆಳಕ್ಕೆ ಇಳಿಯುವುದು ಎಷ್ಟು ಅಪಾಯಕಾಗಿ ಎಂಬುದನ್ನು ಬಹಳ ಜನರು ಹೇಳಿದ್ದಾರೆ. ಈ ಪಟ್ಟಿಯಲ್ಲಿ ಮದ್ರಾಸ್ ಐಐಟಿ ಪ್ರೊಫೆಸರ್ ಡಾ. ಎಂ ಪಟ್ಟಾಬಿರಾಮ್ ಕೂಡ ಇದ್ದಾರೆ. ಪೋಡ್​ಕ್ಯಾಸ್ಟ್​ವೊಂದರಲ್ಲಿ ಮಾತನಾಡುತ್ತಿದ್ದ ಪಟ್ಟಾಭಿರಾಮನ್, ಈಕ್ವಿಟಿಯಲ್ಲಿ ಹೂಡಿಕೆ ಹೆಚ್ಚಿಸಿದರೆ ಹೆಚ್ಚು ಆದಾಯ ಪಡೆಯಬಹುದು ಎಂದು ಭಾವಿಸುವುದು ಭ್ರಮೆ ಎಂದು ಎಚ್ಚರಿಸಿದ್ದಾರೆ.

‘ಮಾರುಕಟ್ಟೆ ಓಟ ಎಂದಿಗೂ ನಿಲ್ಲಲ್ಲ ಎಂಬಂತೆ ಜನರು ವರ್ತಿಸುತ್ತಿದ್ದಾರೆ. ಇದು ಕಳವಳಕಾರಿ ಅಂಶ. ಈ ಓಟ ಯಾವಾಗಲಾದರೂ ನಿಲ್ಲುವುದು ಅನಿವಾರ್ಯ. ಭ್ರಮೆಯಲ್ಲಿದ್ದವರಿಗೆ ಅದರ ಪರಿಣಾಮ ಮಾತ್ರ ತೀವ್ರವಾಗಿರುತ್ತದೆ’ ಎಂದು ಐಐಟಿ ಪ್ರೊಫೆಸರ್ ಹೇಳಿದ್ದಾರೆ.

ಇದನ್ನೂ ಓದಿ: ಅಕ್ಟೋಬರ್​ನಿಂದ ಡಿಸೆಂಬರ್​ವರೆಗೆ ಸುಕನ್ಯಾ ಸಮೃದ್ಧಿ ಅಕೌಂಟ್ ಸೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಪರಿಷ್ಕರಣೆ; ಇಲ್ಲಿದೆ ಪಟ್ಟಿ

ಗಮನಿಸಬೇಕಾದ ಸಂಗತಿ ಎಂದರೆ ಪಟ್ಟಾಭಿರಾಮನ್ ಅವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯೇ ಮಾಡಬೇಡಿ ಎಂದು ಸಲಹೆ ನೀಡುತ್ತಿಲ್ಲ. ಬದಲಾಗಿ ಹೂಡಿಕೆಗಳು ಹೆಚ್ಚೆಚ್ಚು ಹರಡಿರಲಿ ಎಂದೆನ್ನುತ್ತಾರೆ.

ಅವರ ಪ್ರಕಾರ ಒಬ್ಬರ ಸರಾಸರಿ ಹೂಡಿಕೆದಾರ ತನ್ನ ಶೇ. 50ರಿಂದ 60ರಷ್ಟು ಹೂಡಿಕೆಯನ್ನು ಈಕ್ವಿಟಿಯಲ್ಲಿ ತೊಡಗಿಸಿದರೆ ಸಾಕು. ಫಿಕ್ಸೆಡ್ ಡೆಪಾಸಿಟ್, ಡೆಟ್ ಇತ್ಯಾದಿ ನಿಶ್ಚಿತ ಆದಾಯ ತರಬಲ್ಲಂತಹ ಯೋಜನೆಗಳಲ್ಲೂ ಹಣ ತೊಡಗಿಸಿಕೊಳ್ಳುವುದು ಬಹಳ ಮುಖ್ಯ. ಮಾರುಕಟ್ಟೆ ಕುಸಿದಾಗ ಇವು ಕೈ ಹಿಡಿಯುತ್ತವೆ.

ಐಐಟಿ ಪ್ರೊಫೆಸರ್ ಡಾ. ಪಟ್ಟಾಭಿರಾಮನ್ ಅವರು ಈಕ್ವಿಟಿ ಹುಚ್ಚಿನ ಬಗ್ಗೆ ಭಯ ಪಡಲು ಕಾರಣ ಇದೆ. ಭಾರತದಲ್ಲಿ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದು ಹೆಚ್ಚುತ್ತಿದೆ. ಅದರ ಜೊತೆಗೆ ಸಾಲದ ಪ್ರಮಾಣವೂ ಹೆಚ್ಚುತ್ತಿದೆ. ಜನರು ಸಾಲ ಮಾಡಿ ಆ ಹಣವನ್ನು ಈಕ್ವಿಟಿಗಳಲ್ಲಿ ಹೂಡಿಕೆ ಮಾಡುತ್ತಿರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: Inspiring: 22 ವರ್ಷಕ್ಕೆ ಐಎಎಸ್ ಹುದ್ದೆ ಬಿಟ್ಟು 14,000 ಕೋಟಿ ರೂ ಉದ್ಯಮ ಕಟ್ಟಿದ ಯುವಕ ರೋಮನ್ ಸೈನಿ

ಈಕ್ವಿಟಿ ಹೊರತಾದ ಪರ್ಯಾಯ ಹೂಡಿಕೆ ಆಯ್ಕೆಗಳಿವು…

  • ಚಿನ್ನ, ಬೆಳ್ಳಿ ಇತ್ಯಾದಿ ಅಮೂಲ್ಯ ಲೋಹಗಳು
  • ರಿಯಲ್ ಎಸ್ಟೇಟ್
  • ಫಿಕ್ಸೆಡ್ ಡೆಪಾಸಿಟ್, ರೆಕರಿಂಗ್ ಡೆಪಾಸಿಟ್ ಇತ್ಯಾದಿ
  • ಪಿಪಿಎಫ್, ಎನ್​ಎಸ್​ಸಿ ಇತ್ಯಾದಿ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳು

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ