ಅಕ್ಟೋಬರ್​ನಿಂದ ಡಿಸೆಂಬರ್​ವರೆಗೆ ಸುಕನ್ಯಾ ಸಮೃದ್ಧಿ ಅಕೌಂಟ್ ಸೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಪರಿಷ್ಕರಣೆ; ಇಲ್ಲಿದೆ ಪಟ್ಟಿ

Small Savings schemes interest rates revised: ಹಣಕಾಸು ಸಚಿವಾಲಯದಿಂದ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಪರಿಷ್ಕರಣೆ ನಡೆದಿದೆ. 2024ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಕ್ವಾರ್ಟರ್​ಗೆ ದರ ಪರಿಷ್ಕರಣೆ ಆಗಿದ್ದು, ಹಿಂದಿನ ಬಡ್ಡಿದರಗಳನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆ, ಪಬ್ಲಿಕ್ ಪ್ರಾವಿಡೆಂಟ್ ಫಂಡ್, ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಇತ್ಯಾವಿ ವಿವಿಧ ಸ್ಮಾಲ್ ಸೇವಿಂಗ್ ಸ್ಕೀಮ್​ಗಳನ್ನು ಸರ್ಕಾರದಿಂದ ನಡೆಸಲಾಗುತ್ತಿದೆ.

ಅಕ್ಟೋಬರ್​ನಿಂದ ಡಿಸೆಂಬರ್​ವರೆಗೆ ಸುಕನ್ಯಾ ಸಮೃದ್ಧಿ ಅಕೌಂಟ್ ಸೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಪರಿಷ್ಕರಣೆ; ಇಲ್ಲಿದೆ ಪಟ್ಟಿ
ಹಣ
Follow us
|

Updated on: Oct 01, 2024 | 10:54 AM

ನವದೆಹಲಿ, ಅಕ್ಟೋಬರ್ 1: ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ತ್ರೈಮಾಸಿಕ ಅವಧಿಗೆ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳ ಬಡ್ಡಿದರ ಪರಿಷ್ಕರಣೆ ಮಾಡಲಾಗಿದೆ. ಸುಕನ್ಯಾ ಸಮೃದ್ದಿ, ಪಿಪಿಎಫ್ ಇತ್ಯಾದಿ ವಿವಿಧ ಯೋಜನೆಗಳಿಗೆ ಬಡ್ಡಿದರದಲ್ಲಿ ಯಾವ ಬದಲಾವಣೆ ಆಗಿಲ್ಲ. ಹಿಂದಿನ ದರಗಳೇ ಮುಂದುವರಿಯಲಿವೆ. ‘2024-25ರ ಹಣಕಾಸು ವರ್ಷದ ಮೂರನೆ ಕ್ವಾರ್ಟರ್​ಗೆ ವಿವಿಧ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರದಲ್ಲಿ ಬದಲಾವಣೆ ಮಾಡಲಾಗಿಲ್ಲ. ಜುಲೈನಿಂದ ಸೆಪ್ಟೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ನಿಗದಿಯಾಗಿದ್ದ ದರಗಳೇ ಮುಂದುವರಿಯಲಿವೆ,’ ಎಂದು ಹಣಕಾಸು ಸಚಿವಾಲಯ ನಿನ್ನೆ ಸೋಮವಾರ (ಸೆ. 30) ಅಧಿಸೂಚನೆಯಲ್ಲಿ ತಿಳಿಸಿದೆ.

ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಿಗೆ ವಾರ್ಷಿಕ ಶೇ. 8.2ರಷ್ಟು ಬಡ್ಡಿ ಸಿಗುತ್ತದೆ. ಸ್ಮಾಲ್ ಸೇವಿಂಗ್ ಸ್ಕೀಮ್​ಗಳ ಪೈಕಿ ಇವೆರಡು ಗರಿಷ್ಠ ಲಾಭ ನೀಡುತ್ತವೆ. ಕಿಸಾನ್ ವಿಕಾಸ್ ಪತ್ರ, ರಾಷ್ಟ್ರೀಯ ಉಳಿತಾಯ ಪತ್ರ ಯೋಜನೆಗಳಲ್ಲೂ ಉತ್ತಮ ಎನಿಸುವ ಬಡ್ಡಿದರ ಇದೆ. ಹಾಗೆಯೇ, ಪಿಪಿಎಫ್ ಇತ್ಯಾದಿ ಸ್ಕೀಮ್​ಗಳು ಟ್ಯಾಕ್ಸ್ ಡಿಡಕ್ಷನ್ ಅವಕಾಶ ನೀಡುತ್ತವೆ. ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಬಡ್ಡಿದರವನ್ನು ಶೇ. 8ರಿಂದ ಶೇ. 8.2ಕ್ಕೆ ಹೆಚ್ಚಿಸಿತ್ತು. ಹಾಗೆಯೇ, 3 ವರ್ಷದ ಫಿಕ್ಸೆಡ್ ಡೆಪಾಸಿಟ್​ಗೂ 20 ಮೂಲಾಂಕಗಳಷ್ಟು ಬಡ್ಡಿ ಹೆಚ್ಚಿಸಲಾಗಿತ್ತು.

ಇದನ್ನೂ ಓದಿ: ಪಿಪಿಎಫ್, ಸುಕನ್ಯ ಸಮೃದ್ದಿ, ಎನ್​ಎಸ್​ಎಸ್ ಯೋಜನೆಗಳಲ್ಲಿ ಅ. 1ರಿಂದ ಹೊಸ ನಿಯಮಗಳು; ತಪ್ಪದೇ ತಿಳಿದಿರಿ

ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ (2024ರ ಅಕ್ಟೋಬರ್​ನಿಂದ ಡಿಸೆಂಬರ್):

  • ಸೇವಿಂಗ್ಸ್ ಡೆಪಾಸಿಟ್: ಶೇ. 4ರಷ್ಟು ವಾರ್ಷಿಕ ಬಡ್ಡಿದರ
  • ಅಂಚೆ ಕಚೇರಿ 1 ವರ್ಷದ ಟೈಮ್ ಡೆಪಾಸಿಟ್: ಶೇ. 6.9 ಬಡ್ಡಿ
  • ಅಂಚೆ ಕಚೇರಿ 2 ವರ್ಷದ ಟೈಮ್ ಡೆಪಾಸಿಟ್: ಶೇ. 7.0 ಬಡ್ಡಿ
  • ಅಂಚೆ ಕಚೇರಿ 3 ವರ್ಷದ ಟೈಮ್ ಡೆಪಾಸಿಟ್: ಶೇ. 7.1 ಬಡ್ಡಿ
  • ಅಂಚೆ ಕಚೇರಿ 5 ವರ್ಷದ ಟೈಮ್ ಡೆಪಾಸಿಟ್: ಶೇ. 7.5 ಬಡ್ಡಿ
  • ಅಂಚೆ ಕಚೇರಿ 5 ವರ್ಷದ ಆರ್​ಡಿ: ಶೇ. 6.7 ಬಡ್ಡಿ
  • ನ್ಯಾಷನ್ ಸೇವಿಂಗ್ ಸರ್ಟಿಫಿಕೇಟ್ (ಎನ್​ಎಸ್​ಸಿ): ಶೇ. 7.7 ಬಡ್ಡಿ
  • ಕಿಸಾನ್ ವಿಕಾಸ್ ಪತ್ರ: ಶೇ. 7.5 ಬಡ್ಡಿ
  • ಪಬ್ಲಿಕ್ ಪ್ರಾವಿಡೆಂಟ್ ಫಂಡ್: ಶೇ. 7.1 ಬಡ್ಡಿ
  • ಸುಕನ್ಯ ಸಮೃದ್ಧಿ ಯೋಜನೆ: ಶೇ. 8.2 ಬಡ್ಡಿ
  • ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್: ಶೇ. 8.2 ಬಡ್ಡಿ
  • ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ: ಶೇ. 7.4 ಬಡ್ಡಿ

ಹಣಕಾಸು ಸಚಿವಾಲಯ ಪ್ರತೀ ಕ್ವಾರ್ಟರ್​ಗೂ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಪರಿಷ್ಕರಿಸುತ್ತಿರುತ್ತದೆ. ಮುಂದಿನ ಪರಿಷ್ಕರಣೆ ಡಿಸೆಂಬರ್ 31ರಂದು ನಡೆಯಲಿದೆ. ಸರ್ಕಾರದ ವತಿಯಿಂದ ನಡೆಯುತ್ತಿರುವುದರಿಂದ ಈ ಸೇವಿಂಗ್ ಸ್ಕೀಮ್​ಗಳು ಸಾಕಷ್ಟು ಜನಪ್ರಿಯತೆ ಪಡೆದಿವೆ. ಅಂಚೆ ಕಚೇರಿಯಲ್ಲಿ ಈ ಯೋಜನೆಗಳೆಲ್ಲವೂ ಲಭ್ಯ ಇವೆ. ಪಿಪಿಎಫ್, ಸುಕನ್ಯಾ ಸಮೃದ್ಧಿ ಇತ್ಯಾದಿ ಕೆಲ ಸ್ಕೀಮ್​ಗಳನ್ನು ಬ್ಯಾಂಕುಗಳಲ್ಲೂ ಆರಂಭಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮುಡಾ 364 ಕೋಟಿ ರೂ. ದುರ್ಬಳಕೆ: ಇಡಿ ದೂರುದಾರರಿಂದ ಶಾಕಿಂಗ್ ಹೇಳಿಕೆ
ಮುಡಾ 364 ಕೋಟಿ ರೂ. ದುರ್ಬಳಕೆ: ಇಡಿ ದೂರುದಾರರಿಂದ ಶಾಕಿಂಗ್ ಹೇಳಿಕೆ
ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ
ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ
ಬಿಗ್ ಬಾಸ್ ಮನೆಗೆ ಕಿಚ್ಚು ಹೊತ್ತಿಸಿದ ನಾಮಿನೇಷನ್ ಪ್ರಕ್ರಿಯೆ
ಬಿಗ್ ಬಾಸ್ ಮನೆಗೆ ಕಿಚ್ಚು ಹೊತ್ತಿಸಿದ ನಾಮಿನೇಷನ್ ಪ್ರಕ್ರಿಯೆ
ನಾಗಮಂಗಲ ಗಲಭೆ ಕೇಸ್; ನ್ಯಾಯಾಂಗ ಬಂಧನದಲ್ಲಿದ್ದ 55 ಆರೋಪಿಗಳು ಬಿಡುಗಡೆ
ನಾಗಮಂಗಲ ಗಲಭೆ ಕೇಸ್; ನ್ಯಾಯಾಂಗ ಬಂಧನದಲ್ಲಿದ್ದ 55 ಆರೋಪಿಗಳು ಬಿಡುಗಡೆ
Daily Devotional: ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಮಹತ್ವ ತಿಳಿಯಿರಿ
Daily Devotional: ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಮಹತ್ವ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಪ್ರಭಾವಿ ವ್ಯಕ್ತಿಗಳಿಂದ ಕೆಲಸ ಆಗಲಿದೆ
Nithya Bhavishya: ಈ ರಾಶಿಯವರಿಗೆ ಪ್ರಭಾವಿ ವ್ಯಕ್ತಿಗಳಿಂದ ಕೆಲಸ ಆಗಲಿದೆ
ರಾಹುಲ್ ಗಾಂಧಿ ಕಾರಿನ ಪಕ್ಕ ಬೈಕ್​ನಲ್ಲಿ ಕೋಲು ಹಿಡಿದು ಬಂದ ವ್ಯಕ್ತಿ
ರಾಹುಲ್ ಗಾಂಧಿ ಕಾರಿನ ಪಕ್ಕ ಬೈಕ್​ನಲ್ಲಿ ಕೋಲು ಹಿಡಿದು ಬಂದ ವ್ಯಕ್ತಿ
ಪೊಲೀಸ್ ಠಾಣೆ ಮುಂದೆ ಯುವಕನ ಹೈಡ್ರಾಮಾ: ಕೊನೆಗೆ ಪೊಲೀಸ್​ ಮಾಡಿದ್ದೇನು?
ಪೊಲೀಸ್ ಠಾಣೆ ಮುಂದೆ ಯುವಕನ ಹೈಡ್ರಾಮಾ: ಕೊನೆಗೆ ಪೊಲೀಸ್​ ಮಾಡಿದ್ದೇನು?
ಆಂಧ್ರಪ್ರದೇಶದ ಎಟಿಎಂನಲ್ಲಿ ಹಾವು ಕಂಡು ಬೆಚ್ಚಿಬಿದ್ದ ಜನ
ಆಂಧ್ರಪ್ರದೇಶದ ಎಟಿಎಂನಲ್ಲಿ ಹಾವು ಕಂಡು ಬೆಚ್ಚಿಬಿದ್ದ ಜನ
‘ದೇವರು ಬಂದ್ರು, ಹುಲಿ ಬಂತು’: ದರ್ಶನ್ ಕಂಡು ಜೈಕಾರ ಹಾಕಿದ ಫ್ಯಾನ್ಸ್
‘ದೇವರು ಬಂದ್ರು, ಹುಲಿ ಬಂತು’: ದರ್ಶನ್ ಕಂಡು ಜೈಕಾರ ಹಾಕಿದ ಫ್ಯಾನ್ಸ್