Inspiring: 22 ವರ್ಷಕ್ಕೆ ಐಎಎಸ್ ಹುದ್ದೆ ಬಿಟ್ಟು 14,000 ಕೋಟಿ ರೂ ಉದ್ಯಮ ಕಟ್ಟಿದ ಯುವಕ ರೋಮನ್ ಸೈನಿ

Unacademy co-founder Roman Saini's achievements: 16ರ ವಯಸ್ಸಿಗೆ ಏಮ್ಸ್ ಎಂಟ್ರೆನ್ಸ್ ಪರೀಕ್ಷೆ ತೇರ್ಗಡೆ ಮಾಡಿದ, 22 ವರ್ಷಕ್ಕೆ ಐಎಎಸ್ ಅಧಿಕಾರಿಯಾಗಿದ್ದ ರೋಮನ್ ಸೈನಿ ಭಾರತದ ಅತ್ಯಂತ ಕಿರಿಯ ವಯಸ್ಸಿನ ಯಶಸ್ವಿ ಉದ್ಯಮಿ ಎನಿಸಿದ್ದಾರೆ. ತಮ್ಮಿಬ್ಬರು ಸ್ನೇಹಿತರ ಜೊತೆ ಸೇರಿ ಕಟ್ಟಿದ ಅನ್​ಅಕಾಡೆಮಿ ಈಗ 14,000 ಕೋಟಿ ರೂ ಮೌಲ್ಯದ ಸಂಸ್ಥೆಯಾಗಿದೆ. ರೋಮನ್ ಸೈನಿ ವೃತ್ತಿಪರ ಯಶಸ್ಸಿನ ಒಂದು ಝಲಕ್ ಇಲ್ಲಿದೆ...

Inspiring: 22 ವರ್ಷಕ್ಕೆ ಐಎಎಸ್ ಹುದ್ದೆ ಬಿಟ್ಟು 14,000 ಕೋಟಿ ರೂ ಉದ್ಯಮ ಕಟ್ಟಿದ ಯುವಕ ರೋಮನ್ ಸೈನಿ
ರೋಮನ್ ಸೈನಿ
Follow us
|

Updated on: Oct 01, 2024 | 12:16 PM

ಹುರುನ್ ಅಂಡರ್-35 ಯುವ ಭಾರತೀಯ ಉದ್ಯಮಿಗಳ ಪಟ್ಟಿ ಇತ್ತೀಚೆಗೆ ಪ್ರಕಟವಾಗಿದೆ. ಇದರಲ್ಲಿ ರೋಮನ್ ಸೈನಿ ಮೊದಲ ಸ್ಥಾನ ಪಡೆದಿದ್ದಾರೆ. ಇವರು ಅನ್​ಅಕಾಡೆಮಿಯ ಸಹ-ಸಂಸ್ಥಾಪಕರು. 14,000 ಕೋಟಿ ರೂ ಮೌಲ್ಯದ ಅನ್​ಅಕಾಡೆಮಿಯನ್ನು ಕಟ್ಟಿದ ಈ ಯುವಕನ ಪ್ರತಿಭೆ ಅಸಾಮಾನ್ಯವಾದುದು. ಇವರದ್ದು ವಯಸ್ಸಿಗೆ ಮೀರಿದ ಪ್ರತಿಭೆ. ವೈದ್ಯರಾಗಬೇಕು, ಐಎಎಸ್ ಅಧಿಕಾರಿ ಆಗಬೇಕು ಎನ್ನುವುದು ಬಹಳ ಜನರ ಜೀವನದ ಹೆಗ್ಗುರಿಯಾಗಿರುತ್ತದೆ. ರೋಮನ್ ಸೈನಿ ಸಣ್ಣ ವಯಸ್ಸಿಗೆ ಇವೆಲ್ಲವನ್ನೂ ಮಾಡಿ ಬಿಟ್ಟು ಅನ್​ಅಕಾಡೆಮಿ ಹಾದಿ ಹಿಡಿದವರು…

16 ವರ್ಷಕ್ಕೆ ಏಮ್ಸ್ ಪ್ರವೇಶ ಪರೀಕ್ಷೆ ಪಾಸ್ ಆಗಿದ್ದ ಸೈನಿ

16-17ರ ವಯಸ್ಸಿನಲ್ಲಿ ರೋಮನ್ ಸೈನಿ ಏಮ್ಸ್ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆ ಸಾಧನೆ ಮಾಡಿದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ ಅವರು ಎಂಬ ದಾಖಲೆ ಇದೆ. ಅಷ್ಟೇ ಅಲ್ಲ, 18ರ ವಯಸ್ಸಿನಲ್ಲಿ ಇವರು ಬರೆದ ವೈದ್ಯಕೀಯ ಸಂಶೋಧನಾ ವರದಿಯನ್ನು ಪ್ರತಿಷ್ಠಿತ ಮೆಡಿಕಲ್ ಪಬ್ಲಿಕೇಶನ್​ನಲ್ಲಿ ಪ್ರಕಟವಾಗಿತ್ತು. ಆಡಳಿತ ವ್ಯವಸ್ಥೆ ಸರಿಪಡಿಸಲು ಐಎಎಸ್ ಮಾರ್ಗ…

ಎಂಬಿಬಿಎಸ್ ಓದು ಮುಗಿಸಿ ಸ್ವಲ್ಪ ದಿನ ಏಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ರೋಮನ್ ಸೈನಿ, ಐಎಎಸ್ ಅಧಿಕಾರಿಯಾಗಲು ನಿರ್ಧರಿಸಿದರು. ಹರ್ಯಾಣದ ದಯಾಳಪುರ್ ಗ್ರಾಮದಲ್ಲಿ ವೈದ್ಯನಾಗಿ ಭೇಟಿ ನೀಡಿದಾಗ, ಅಲ್ಲಿ ಮೂಲಸೌಕರ್ಯಗಳೇ ಸರಿಯಾಗಿ ಇಲ್ಲದ್ದನ್ನು ಗಮನಿಸಿದ್ದಾರೆ. ಈ ವ್ಯವಸ್ಥೆ ಬದಲಿಸಬೇಕೆಂದರೆ ಐಎಎಸ್​ನಂತಹ ಹುದ್ದೆಗಳಿಂದ ಸಾಧ್ಯ ಎಂದನಿಸಿದೆ. ಆಗಲೇ ಅವರು ಐಎಎಸ್ ಅಧಿಕಾರಿಯಾಗಲು ನಿರ್ಧರಿಸಿದರು.

ಇದನ್ನೂ ಓದಿ: ಹುರುನ್ ಅಂಡರ್ 35 ಉದ್ಯಮಿಗಳ ಪಟ್ಟಿಯಲ್ಲಿ ಪಲ್ಲೋನ್ ಮಿಸ್ತ್ರಿ, ಅಲಖ್ ಪಾಂಡೆ ಮತ್ತಿತರರು; ಚಿಕ್ಕ ವಯಸ್ಸಿನ ಉದ್ಯಮಿಗಳು ಬೆಂಗಳೂರಲ್ಲೇ ಹೆಚ್ಚು

22ರ ವಯಸ್ಸಿಗೆ ರೋಮನ್ ಸೈನಿ ಯುಪಿಎಸ್​ಸಿ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸ್ ಮಾಡಿ, ಐಎಎಸ್ ಅಧಿಕಾರಿಯಾದರು. ಆರು ತಿಂಗಳ ವೈದ್ಯಕೀಯ ವೃತ್ತಿಗೆ ತಿಲಾಂಜಲಿ ಹೇಳಿ, ಆಡಳಿತ ಸೇವೆಗೆ ನಿಂತರು. ಮಧ್ಯಪ್ರದೇಶದಲ್ಲಿ ಕಲೆಕ್ಟರ್ ಆಗಿ ಮೊದಲು ನಿಯೋಜನೆಗೊಂಡರು.

ಸ್ನೇಹಿತನ ಜೊತೆ ಸೇರಿ ಅನ್​ಅಕಾಡೆಮಿ ಸ್ಥಾಪನೆ

ಐಎಎಸ್ ಅಧಿಕಾರಿಯಾಗಿದ್ದಾಗ ಬಹಳ ಯುವಕರು ಐಎಎಸ್ ಪರೀಕ್ಷೆಗೆ ತಯಾರಾಗಲು ಕೋಚಿಂಗ್ ಇತ್ಯಾದಿಗೆ ಲಕ್ಷಾಂತರ ರೂ ಹಣ ಕೊಡಲಾಗದೇ ಪರದಾಡುತ್ತಿದ್ದುದು ರೋಮನ್ ಸೈನಿಗೆ ಅರಿವಿತ್ತು. ಇದೇ ಸಂದರ್ಭದಲ್ಲಿ ಅವರ ಸ್ನೇಹಿತ ಗೌರವ್ ಮುಂಜಲ್ ಅವರು ಯೂಟ್ಯೂಬ್ ಚಾನಲ್​ನಲ್ಲಿ ಕೋಚಿಂಗ್ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಅದೇ ವೇಳೆ ರೋಮನ್ ಅವರು ಬಹಳ ಕಡಿಮೆ ಬೆಲೆಗೆ ಶಿಕ್ಷಣ ಕೊಡಲು ಯೋಜಿಸಿದರು. ಪರಿಣಾಮವಾಗಿ 2015ರಲ್ಲಿ ಗೌರವ್ ಮುಂಜಲ್, ರೋಮನ್ ಸೈನಿ ಮತ್ತು ಹೇಮೇಶ್ ಸಿಂಗ್ ಈ ಮೂವರು ಸೇರಿಕೊಂಡು ಅನ್ ಅಕಾಡೆಮಿ ಸಂಸ್ಥೆ ಸ್ಥಾಪಿಸಿದರು.

ಯೂಟ್ಯೂಬ್ ವಾಹಿನಿಯಾಗಿ ಆರಂಭವಾಗಿದ್ದ ಅನ್​ಅಕಾಡೆಮಿ ಇವತ್ತು 2 ಬಿಲಿಯನ್ ಡಾಲರ್ ಮೌಲ್ಯದ ಸಂಸ್ಥೆ ಎನಿಸಿದೆ. 14,000 ಕೋಟಿ ರೂಗೂ ಹೆಚ್ಚು ಮೌಲ್ಯದ ಕಂಪನಿಯಾದ ಅನ್​ಅಕಾಡೆಮಿಯಲ್ಲಿ ಪ್ರಸಕ್ತ 5 ಕೋಟಿಗೂ ಹೆಚ್ಚು ಆನ್ಲೈನ್ ಬಳಕೆದಾರರಿದ್ದಾರೆ. ಭಾರತದ ಅತಿದೊಡ್ಡ ಎಜುಟೆಕ್ ಕಂಪನಿಗಳಲ್ಲಿ ಒಂದೆನಿಸಿದೆ.

ಇದನ್ನೂ ಓದಿ: ಸೋಷಿಯಲಿಸ್ಟ್ ಮನೋಭಾವವಾ? ಶ್ರೀಮಂತರನ್ನು ಕಂಡರೆ ಭಾರತೀಯರಿಗೆ ಯಾಕೆ ಕೋಪ? ನಿತಿನ್ ಕಾಮತ್ ನೇರಾನೇರ ಅನಿಸಿಕೆ ಕೇಳಿ

ಧೈರ್ಯವೇ ಪ್ರಧಾನ: ಯಶಸ್ಸಿಗೆ ಸೈನಿ ಮಂತ್ರ

ಜನರು ಹುಟ್ಟುತ್ತಲೇ ಜೀನಿಯಸ್ ಆಗಿರುವುದಿಲ್ಲ. ಎಲ್ಲರಿಗೂ ಅವರದ್ದೇ ಜ್ಞಾನ, ಪ್ರತಿಭೆ, ವ್ಯಕ್ತಿತ್ವಗಳಿರುತ್ತವೆ. ಗುರಿ ಇಟ್ಟುಕೊಂಡು ಪ್ರಯತ್ನಿಸಿದರೆ ಯಾರು ಬೇಕಾದರೂ ಸಾಧಿಸಬಹುದು. ಸವಾಲಿಗೆ ಮುಂಚೆ ಅದನ್ನು ಎದುರಿಸಲು ಸಜ್ಜಾಗಬೇಕು. ಅದನ್ನು ಹೇಗೆ ಎದುರಿಸಬೇಕು ಎಂದು ಕಲಿಯುವುದು ಹೇಗೆ ಎಂಬುದನ್ನು ಮೊದಲು ಕಲಿಯಬೇಕು. ಇದು ಯಶಸ್ಸಿಗೆ ಮೊದಲ ಮೆಟ್ಟಿಲು ಎನ್ನುತ್ತಾರೆ ರೋಮನ್ ಸೈನಿ.

ಮನೆಯಲ್ಲಿ ಪೋಷಕರ ಇಷ್ಟಕ್ಕೆ ವಿರುದ್ಧವಾಗಿ, ಅಥವಾ ಸಮಾಜದ ಕಟ್ಟುಪಾಡಿಗೆ ವಿರುದ್ಧವಾಗಿ, ಅಥವಾ ತಮ್ಮದೇ ಮನಸ್ಸಿನ ಭಯಕ್ಕೆ ವಿರುದ್ಧವಾಗಿ ಹೆಜ್ಜೆಗಳನ್ನು ಇಟ್ಟರೆ ಆಗ ಸಾಧಿಸಬಹುದು ಎಂಬುದು ರೋಮನ್ ಸೈನಿ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೋಸಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಸೇತುವೆಯಿಂದ ಓಡಿದ ಜನ
ಕೋಸಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಸೇತುವೆಯಿಂದ ಓಡಿದ ಜನ
ಶಓಮಿ ರೆಡ್ಮಿ ಸ್ಮಾರ್ಟ್​ವಾಚ್ ಬ್ಯಾಟರಿ 18 ದಿನ ಬಾಳಿಕೆ ಬರುತ್ತೆ!
ಶಓಮಿ ರೆಡ್ಮಿ ಸ್ಮಾರ್ಟ್​ವಾಚ್ ಬ್ಯಾಟರಿ 18 ದಿನ ಬಾಳಿಕೆ ಬರುತ್ತೆ!
ಮುಡಾ 364 ಕೋಟಿ ರೂ. ದುರ್ಬಳಕೆ: ಇಡಿ ದೂರುದಾರರಿಂದ ಶಾಕಿಂಗ್ ಹೇಳಿಕೆ
ಮುಡಾ 364 ಕೋಟಿ ರೂ. ದುರ್ಬಳಕೆ: ಇಡಿ ದೂರುದಾರರಿಂದ ಶಾಕಿಂಗ್ ಹೇಳಿಕೆ
ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ
ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ
ಬಿಗ್ ಬಾಸ್ ಮನೆಗೆ ಕಿಚ್ಚು ಹೊತ್ತಿಸಿದ ನಾಮಿನೇಷನ್ ಪ್ರಕ್ರಿಯೆ
ಬಿಗ್ ಬಾಸ್ ಮನೆಗೆ ಕಿಚ್ಚು ಹೊತ್ತಿಸಿದ ನಾಮಿನೇಷನ್ ಪ್ರಕ್ರಿಯೆ
ನಾಗಮಂಗಲ ಗಲಭೆ ಕೇಸ್; ನ್ಯಾಯಾಂಗ ಬಂಧನದಲ್ಲಿದ್ದ 55 ಆರೋಪಿಗಳು ಬಿಡುಗಡೆ
ನಾಗಮಂಗಲ ಗಲಭೆ ಕೇಸ್; ನ್ಯಾಯಾಂಗ ಬಂಧನದಲ್ಲಿದ್ದ 55 ಆರೋಪಿಗಳು ಬಿಡುಗಡೆ
Daily Devotional: ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಮಹತ್ವ ತಿಳಿಯಿರಿ
Daily Devotional: ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಮಹತ್ವ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಪ್ರಭಾವಿ ವ್ಯಕ್ತಿಗಳಿಂದ ಕೆಲಸ ಆಗಲಿದೆ
Nithya Bhavishya: ಈ ರಾಶಿಯವರಿಗೆ ಪ್ರಭಾವಿ ವ್ಯಕ್ತಿಗಳಿಂದ ಕೆಲಸ ಆಗಲಿದೆ
ರಾಹುಲ್ ಗಾಂಧಿ ಕಾರಿನ ಪಕ್ಕ ಬೈಕ್​ನಲ್ಲಿ ಕೋಲು ಹಿಡಿದು ಬಂದ ವ್ಯಕ್ತಿ
ರಾಹುಲ್ ಗಾಂಧಿ ಕಾರಿನ ಪಕ್ಕ ಬೈಕ್​ನಲ್ಲಿ ಕೋಲು ಹಿಡಿದು ಬಂದ ವ್ಯಕ್ತಿ
ಪೊಲೀಸ್ ಠಾಣೆ ಮುಂದೆ ಯುವಕನ ಹೈಡ್ರಾಮಾ: ಕೊನೆಗೆ ಪೊಲೀಸ್​ ಮಾಡಿದ್ದೇನು?
ಪೊಲೀಸ್ ಠಾಣೆ ಮುಂದೆ ಯುವಕನ ಹೈಡ್ರಾಮಾ: ಕೊನೆಗೆ ಪೊಲೀಸ್​ ಮಾಡಿದ್ದೇನು?