Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಕ್ಕರೆ ಬೆಲೆ ಏರದಂತೆ ಮುನ್ನೆಚ್ಚರಿಕೆ; ವಾರ ವಾರ ಸಕ್ಕರೆ ದಾಸ್ತಾನು ವಿವರ ಸಲ್ಲಿಸಲು ವರ್ತಕರಿಗೆ ಸೂಚನೆ

Sugar Price Updates: ಸಗಟು ಮತ್ತು ಚಿಲ್ಲರೆ ಮಾರಾಟಗಾರರು, ಸಕ್ಕರೆ ಉತ್ಪಾದಕರು ಎಲ್ಲರೂ ತಮ್ಮಲ್ಲಿರುವ ಸಕ್ಕರೆ ದಾಸ್ತಾನಿನ ವಿವರವನ್ನು ಪ್ರತೀ ಸೋಮವಾರದಂದು ಕೇಂದ್ರ ಆಹಾರ ಇಲಾಖೆಯ ಇಶುಗರ್ ಪೋರ್ಟಲ್​ನಲ್ಲಿ ಅಪ್​ಡೇಟ್ ಮಾಡಬೇಕು ಎಂದು ಸೂಚಿಸಲಾಗಿದೆ. ಇದರಿಂದ ದೇಶದಲ್ಲಿರುವ ಸಕ್ಕರೆ ಆವಕ ಮತ್ತು ದಾಸ್ತಾನಿ ಸ್ಥಿತಿಗತಿ ಬಗ್ಗೆ ಸರ್ಕಾರಕ್ಕೆ ಸದಾ ಅರಿವಿದ್ದಂತಾಗುತ್ತದೆ.

ಸಕ್ಕರೆ ಬೆಲೆ ಏರದಂತೆ ಮುನ್ನೆಚ್ಚರಿಕೆ; ವಾರ ವಾರ ಸಕ್ಕರೆ ದಾಸ್ತಾನು ವಿವರ ಸಲ್ಲಿಸಲು ವರ್ತಕರಿಗೆ ಸೂಚನೆ
ಸಕ್ಕರೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 21, 2023 | 6:29 PM

ನವದೆಹಲಿ, ಸೆಪ್ಟೆಂಬರ್ 21: ಟೊಮೆಟೋ, ಈರುಳ್ಳಿ ಇತ್ಯಾದಿ ಆಹಾರವಸ್ತುಗಳ ಬೆಲೆ ಏರಿಕೆಯ ಆಘಾತ ಕಂಡಿರುವ ಭಾರತಕ್ಕೆ ಈಗ ಸಕ್ಕರೆ ಬೆಲೆ ಏರಿಕೆಯ ಭೀತಿ ಎದುರಾಗಿದೆ. ಅಂತಾರಾಷ್ಟ್ರೀಯವಾಗಿ ಸಕ್ಕರೆ ಬೆಲೆ ಗಗನಕ್ಕೇರಿದೆ. ಭಾರತದಲ್ಲೂ ಬೆಲೆ ಏರುವ ಸಾಧ್ಯತೆಯನ್ನು ತಪ್ಪಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಅಕ್ಕಿ ಇತ್ಯಾದಿ ಆಹಾರವಸ್ತುಗಳ ರಫ್ತಿಗೆ ನಿರ್ಬಂಧ ಹಾಕುವ ಮೂಲಕ ಅವುಗಲ ಬೆಲೆ ಏರಿಕೆ ಆಗದಂತೆ ಎಚ್ಚರ ವಹಿಸಿದ್ದ ಕೇಂದ್ರ ಸರ್ಕಾರ ಈಗ ಸಕ್ಕರೆ ಸಾಮಾನ್ಯ ಜನರಿಗೆ ಕಹಿಯಾಗದಂತೆ ಮುನ್ನೆಚ್ಚರಿಕೆಯ ಕ್ರಮ ಜಾರಿ ಮಾಡಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಸಕ್ಕರೆ ದಾಸ್ತಾನು ಎಷ್ಟಿದೆ ಎಂಬ ವಿವರವನ್ನು ವರ್ತಕರು ಸಲ್ಲಿಸಬೇಕು ಎಂದು ಸರ್ಕಾರ ಕಡ್ಡಾಯಪಡಿಸಿದೆ. ಇದು ಅನಗತ್ಯ ಸಕ್ಕರೆ ದಾಸ್ತಾನು ನಿಯಂತ್ರಿಸಲು ಕೈಗೊಂಡಿರುವ ಕ್ರಮ ಎನ್ನಲಾಗಿದೆ.

ಸಗಟು ಮತ್ತು ಚಿಲ್ಲರೆ ಮಾರಾಟಗಾರರು, ಸಕ್ಕರೆ ಉತ್ಪಾದಕರು ಎಲ್ಲರೂ ತಮ್ಮಲ್ಲಿರುವ ಸಕ್ಕರೆ ದಾಸ್ತಾನಿನ ವಿವರವನ್ನು ಪ್ರತೀ ಸೋಮವಾರದಂದು ಕೇಂದ್ರ ಆಹಾರ ಇಲಾಖೆಯ ಇಶುಗರ್ ಪೋರ್ಟಲ್​ನಲ್ಲಿ (esugar.nic.in) ಅಪ್​ಡೇಟ್ ಮಾಡಬೇಕು ಎಂದು ಸೂಚಿಸಲಾಗಿದೆ. ಇದರಿಂದ ದೇಶದಲ್ಲಿರುವ ಸಕ್ಕರೆ ಆವಕ ಮತ್ತು ದಾಸ್ತಾನಿ ಸ್ಥಿತಿಗತಿ ಬಗ್ಗೆ ಸರ್ಕಾರಕ್ಕೆ ಸದಾ ಅರಿವಿದ್ದಂತಾಗುತ್ತದೆ.

ಇದನ್ನೂ ಓದಿ: Arecanut Price 21 Sep: ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಮತ್ತು ಕೋಕೋ ದರ ಹೀಗಿದೆ

ಅನಗತ್ಯವಾಗಿ ಸಂಗ್ರಹ ಇಟ್ಟುಕೊಳ್ಳಲು ಮತ್ತು ಸಕ್ಕರೆ ಅಭಾವ ಸೃಷ್ಟಿಯಾದಂತೆ ಮಾಡುವುದನ್ನು ನಿಯಂತ್ರಿಸಲು ಸರ್ಕಾರದ ಈ ಕ್ರಮ ಸಹಾಯವಾಗಬಹುದು. ಸಕ್ಕರೆ ಕೊರತೆ ಕಂಡುಬರುತ್ತಿದ್ದಂತೆಯೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.

ಒಂದು ವೇಳೆ ಸರ್ಕಾರ ಹೇಳಿದ ರೀತಿಯಲ್ಲಿ ಪ್ರತೀ ವಾರವೂ ಸಕ್ಕರೆ ದಾಸ್ತಾನಿನ ವಿವರವನ್ನು ಅಪ್​ಡೇಟ್ ಮಾಡದೇ ಇರುವ ಸಕ್ಕರೆ ಕಾರ್ಖಾನೆಗಳು ಮತ್ತು ವರ್ತಕರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ.

ಇದನ್ನೂ ಓದಿ: Business Idea: ಕೇವಲ 3 ಲಕ್ಷ ಬಂಡವಾಳದಲ್ಲಿ ತಿಂಗಳಿಗೆ 70 ಸಾವಿರ ರೂ ವರಮಾನ ಕೊಡಬಲ್ಲ ಜೇನುಸಾಕಾಣಿಕೆ

ಈಗ ಹಬ್ಬದ ಸೀಸನ್ ಶುರುವಾಗಿರುವುದಿಂದ ಸಕ್ಕರೆಗೆ ಬೇಡಿಕೆ ಹೆಚ್ಚಿರುತ್ತದೆ. ಆದರೆ, ಭಾರತದಲ್ಲಿ ಸಾಕಷ್ಟು ಸಕ್ಕರೆ ದಾಸ್ತಾನು ಇದೆ ಎನ್ನಲಾಗಿದೆ. ಸರ್ಕಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ ಆಗಸ್ಟ್ ತಿಂಗಳಲ್ಲಿ 83 ಲಕ್ಷ ಮೆಟ್ರಿಲ್ ಟನ್​ನಷ್ಟು (ಎಲ್​ಎಂಟಿ) ಸಕ್ಕರೆ ದಾಸ್ತಾನು ಇದೆ. ಅಕ್ಟೋಬರ್ ತಿಂಗಳಲ್ಲಿ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬನ್ನು ಅರೆಯುತ್ತಿರುವುದರಿಂದ ಮುಂದಿನ ದಿನಗಳಲ್ಲೂ ಸಕ್ಕರೆ ದಾಸ್ತಾನು ಕಡಿಮೆ ಅಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:26 pm, Thu, 21 September 23

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!