ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವು ಮೇ ತಿಂಗಳಲ್ಲಿ ರೂ. 1.41 ಲಕ್ಷ ಕೋಟಿಗೆ ಕುಸಿದಿದ್ದು, ಏಪ್ರಿಲ್‌ನ ಸಾರ್ವಕಾಲಿಕ ಗರಿಷ್ಠ ರೂ. 1.68 ಲಕ್ಷ ಕೋಟಿಯಿಂದ ಶೇಕಡಾ 16ರಷ್ಟು ಕಡಿಮೆಯಾಗಿದೆ ಎಂದು ಹಣಕಾಸು ಸಚಿವಾಲಯವು ಜೂನ್ 1 ರಂದು ಬಿಡುಗಡೆ ಮಾಡಿದ ಅಂಕಿಅಂಶಗಳು ತೋರಿಸಿವೆ. ವರ್ಷದಿಂದ ವರ್ಷಕ್ಕೆ ನೋಡಿದಾಗ ಮೇ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹವು ಶೇ 44ರಷ್ಟು ಹೆಚ್ಚಾಗಿದೆ. “ಆರ್ಥಿಕ ವರ್ಷದ ಮೊದಲ ತಿಂಗಳ ಏಪ್ರಿಲ್‌ನ ಆದಾಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಮೇ ತಿಂಗಳ ಸಂಗ್ರಹವು ಯಾವಾಗಲೂ ಏಪ್ರಿಲ್‌ನಲ್ಲಿನ ಆದಾಯಕ್ಕಿಂತ ಕಡಿಮೆಯಿರುತ್ತದೆ. ಇದು ಆರ್ಥಿಕ ವರ್ಷದ ಮುಕ್ತಾಯದ ಮಾರ್ಚ್‌ನ ಆದಾಯಕ್ಕೆ ಸಂಬಂಧಿಸಿದೆ,” ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
“ಆದರೆ, 2022ರ ಮೇ ತಿಂಗಳಿನಲ್ಲಿಯೂ ಒಟ್ಟು ಜಿಎಸ್‌ಟಿ ಆದಾಯವು 1.40 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ ಎಂದು ನೋಡುವುದು ಉತ್ತೇಜನಕಾರಿಯಾಗಿದೆ,” ಎಂದು ಅದು ಸೇರಿಸಿದೆ. ಮೇ ತಿಂಗಳ ಒಟ್ಟು ಜಿಎಸ್‌ಟಿ ಸಂಗ್ರಹದಲ್ಲಿ ಕೇಂದ್ರ ಜಿಎಸ್‌ಟಿ 25,036 ಕೋಟಿ, ರಾಜ್ಯ ಜಿಎಸ್‌ಟಿ 32,001 ಕೋಟಿ, ಇಂಟಿಗ್ರೇಟೆಡ್ ಜಿಎಸ್‌ಟಿ 73,345 ಕೋಟಿ, ಪರಿಹಾರ ಸೆಸ್ 10,502 ಕೋಟಿ ಇದೆ.
ಮೇ ತಿಂಗಳಲ್ಲಿ ಸರ್ಕಾರವು ಇಂಟಿಗ್ರೇಟೆಡ್ ಜಿಎಸ್‌ಟಿಯಿಂದ ಕೇಂದ್ರ ಜಿಎಸ್‌ಟಿಗೆ ರೂ. 27,924 ಕೋಟಿ ಮತ್ತು ರಾಜ್ಯ ಜಿಎಸ್‌ಟಿಗೆ ರೂ. 23,123 ಕೋಟಿ ವಿಲೇವಾರಿ ಮಾಡಿದೆ. ಪರಿಣಾಮವಾಗಿ, ವಿಲೇವಾರಿ ನಂತರದ ತಿಂಗಳ ಒಟ್ಟು ಆದಾಯವು ಕೇಂದ್ರಕ್ಕೆ 52,960 ಕೋಟಿ ರೂ. ಮತ್ತು ರಾಜ್ಯ ಜಿಎಸ್‌ಟಿಗೆ 55,124 ಕೋಟಿ ರೂ. ಇದೆ. ಇದು ಸತತ 11ನೇ ತಿಂಗಳಾಗಿದ್ದು, ಒಟ್ಟು ಜಿಎಸ್‌ಟಿ ಸಂಗ್ರಹ ರೂ. 1 ಲಕ್ಷ ಕೋಟಿಯ ಗಡಿ ದಾಟಿದೆ.
ತಿಂಗಳು ಮೊತ್ತ (ರೂ. ಕೋಟಿಯಲ್ಲಿ)
ಮೇ 2022 1,40,885
ಏಪ್ರಿಲ್ 2022 1,67,540
ಮಾರ್ಚ್ 2022 1,42,095
ಫೆಬ್ರವರಿ 2022 1,33,026
ಜನವರಿ 2022 1,40,986
ಡಿಸೆಂಬರ್ 2021 1,29,780
ನವೆಂಬರ್ 2021 1,31,526
ಅಕ್ಟೋಬರ್ 2021 1,30,127
ಸೆಪ್ಟೆಂಬರ್ 2021 1,17,010
ಆಗಸ್ಟ್ 2021 1,12,020
ಜುಲೈ 2021 1,16,393
ಜೂನ್ 2021 92,800
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ