AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಎಸ್​ಟಿ ಪೋರ್ಟಲ್​ನಲ್ಲಿ ಈಗ ತೆರಿಗೆ ಸಂಗ್ರಹ ಮತ್ತಿತರ ದಾಖಲೆಗಳು ಲಭ್ಯ; ಜುಲೈನಲ್ಲಿ 1.82 ಲಕ್ಷ ಕೋಟಿ ರೂ ತೆರಿಗೆ ಸಂಗ್ರಹ

GST collections on July 2024: ರಾಜ್ಯಗಳಿಂದ ಸಂಗ್ರಹವಾದ ಜಿಎಸ್​ಟಿ ತೆರಿಗೆ, ಕೇಂದ್ರದಿಂದ ರಾಜ್ಯಗಳಿಗೆ ಸಿಕ್ಕ ತೆರಿಗೆ ಪಾಲು ಇತ್ಯಾದಿ ವಿವರಗಳು ಈಗ ಜಿಎಸ್​ಟಿ ಪೋರ್ಟಲ್​ನಲ್ಲಿ ಅಪ್​ಲೋಡ್ ಆಗುತ್ತಿವೆ. ಸಾರ್ವಜನಿಕರು ಇದನ್ನು ವೀಕ್ಷಿಸಬಹುದು. ಜಿಎಸ್​​ಟಿ ಇಲಾಖೆಯಿಂದ ಇಂದು ಜುಲೈ ತಿಂಗಳ ಅಂಕಿ ಅಂಶ ಬಿಡುಗಡೆ ಆಗಿದ್ದು, 1.82 ಲಕ್ಷ ಕೋಟಿ ರೂ ಜಿಎಸ್​ಟಿ ಸಂಗ್ರಹವಾಗಿದೆ.

ಜಿಎಸ್​ಟಿ ಪೋರ್ಟಲ್​ನಲ್ಲಿ ಈಗ ತೆರಿಗೆ ಸಂಗ್ರಹ ಮತ್ತಿತರ ದಾಖಲೆಗಳು ಲಭ್ಯ; ಜುಲೈನಲ್ಲಿ 1.82 ಲಕ್ಷ ಕೋಟಿ ರೂ ತೆರಿಗೆ ಸಂಗ್ರಹ
ಜಿಎಸ್​ಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 01, 2024 | 8:56 PM

Share

ನವದೆಹಲಿ, ಆಗಸ್ಟ್ 1: ದೇಶಾದ್ಯಂತ ಸಂಗ್ರಹವಾಗುವ ಸರಕು ಮತ್ತು ಸೇವಾ ತೆರಿಗೆಯಾದ ಜಿಎಸ್​ಟಿ ವಿವರಗಳು ಈಗ ಜಿಎಸ್​ಟಿ ವೆಬ್​ಸೈಟ್​ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯ ಇರಲಿವೆ. ಇದೀಗ ಜುಲೈ ತಿಂಗಳ ಜಿಎಸ್​ಟಿ ಸಂಗ್ರಹ ಮತ್ತು ರಾಜ್ಯವಾರು ಐಜಿಎಸ್​ಟಿ ಸೆಟಲ್ಮೆಂಟ್​ನ ದತ್ತಾಂಶವನ್ನು ಈ ವೆಬ್​ಸೈಟ್​ಗೆ (www.gst.gov.in/) ಹಾಕಲಾಗಿದೆ. ಜಾಲತಾಣದ ಮುಖ್ಯಪುಟದಲ್ಲಿರುವ ನ್ಯೂಸ್ ಅಂಡ್ ಅಪ್​ಡೇಟ್ಸ್ ಸೆಕ್ಷನ್ ಅಡಿಯಲ್ಲಿ ಇದನ್ನು ನೋಡಬಹುದು. ಇನ್ಮುಂದೆ ಪ್ರತೀ ತಿಂಗಳ ಜಿಎಸ್​ಟಿ ಸಂಗ್ರಹದ ಡಾಟಾವನ್ನು ಯಾರು ಬೇಕಾದರೂ ಈ ವೆಬ್​ಸೈಟ್​ನಲ್ಲಿ ನೋಡಬಹುದು.

ಈ ವೆಬ್​ಸೈಟ್​ನ ಡೌನ್​ಲೋಡ್ಸ್ ಸೆಕ್ಷನ್​ಗೆ ಹೋದರೆ ಅಲ್ಲಿರುವ ಜಿಎಸ್​ಟಿ ಸ್ಟಾಟಿಸ್ಟಿಕ್ಸ್ ಅಡಿಯಲ್ಲಿ 2017ರಿಂದೀಚೆ ಜಿಎಸ್​ಟಿ ರಿಟರ್ನ್ ಸಲ್ಲಿಕೆಯ ಪೂರ್ಣ ಮಾಹಿತಿ ಲಭಿಸುತ್ತದೆ. ರಾಜ್ಯವಾರು ಸಿಜಿಎಸ್​ಟಿ, ಎಸ್​ಜಿಎಸ್​ಟಿ, ಐಜಿಎಸ್​ಟಿ ಮತ್ತು ಸೆಸ್​ನ ವಿವರಗಳನ್ನೂ ಕಾಣಬಹುದು.

ಕರ್ನಾಟದಿಂದ ಹೆಚ್ಚಾದ ಜಿಎಸ್​ಟಿ ಕೊಡುಗೆ

ಇಂದು ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಜುಲೈ ತಿಂಗಳಲ್ಲಿ ಒಟ್ಟಾರೆ ಜಿಎಸ್​ಟಿ ಸಂಗ್ರಹ 1.82 ಲಕ್ಷ ಕೋಟಿ ರೂ ದಾಟಿದೆ. ರೀಫಂಡ್ ಕಳೆದು ಬಂದ ನಿವ್ವಳ ಜಿಎಸ್​ಟಿ ಸಂಗ್ರಹ 1,44,897 ಕೋಟಿ ರೂ ಇದೆ. ಕರ್ನಾಟಕದಲ್ಲಿ ಸಂಗ್ರಹವಾದ ಜಿಎಸ್​ಟಿ ಪ್ರಮಾಣ 13,025 ಕೋಟಿ ರೂ ಆಗಿದೆ. ಹಿಂದಿನ ವರ್ಷದ ಸಂಗ್ರಹಕ್ಕೆ ಹೋಲಿಸಿದರೆ ಶೇ. 13ರಷ್ಟು ತೆರಿಗೆ ಸಂಗ್ರಹ ಹೆಚ್ಚಳವಾಗಿದೆ. ಮಹಾರಾಷ್ಟ್ರದಲ್ಲಿ ಜಿಎಸ್​ಟಿ ಸಂಗ್ರಹ 28,970 ಕೋಟಿ ರೂ ಆಗಿದೆ.

ಇದನ್ನೂ ಓದಿ: ಐಟಿ ರಿಟರ್ನ್ಸ್ ಸಲ್ಲಿಕೆಗೆ ಆಗಸ್ಟ್ 31ರವರೆಗೂ ಅವಕಾಶ? ಇದು ಸುಳ್ಳು ಸುದ್ದಿ ಎಂದ ಪಿಐಬಿ ಫ್ಯಾಕ್ಟ್ ಚೆಕ್ ಟೀಮ್

ಜುಲೈನಲ್ಲಿ ಅತಿಹೆಚ್ಚು ಜಿಎಸ್​ಟಿ ಸಂಗ್ರಹ ಮಾಡಿರುವ ರಾಜ್ಯಗಳ ಟಾಪ್ 10 ಪಟ್ಟಿ

  1. ಮಹಾರಾಷ್ಟ್ರ: 28,970 ಕೋಟಿ ರೂ
  2. ಕರ್ನಾಟಕ: 13,025 ಕೋಟಿ ರೂ
  3. ಗುಜರಾತ್: 11,015 ಕೋಟಿ ರೂ
  4. ತಮಿಳುನಾಡು: 10,490 ಕೋಟಿ ರೂ
  5. ಉತ್ತರಪ್ರದೇಶ: 9,125 ಕೋಟಿ ರೂ
  6. ಹರ್ಯಾಣ: 9,082 ಕೋಟಿ ರೂ
  7. ದೆಹಲಿ: 5,964 ಕೋಟಿ ರೂ
  8. ಪಶ್ಚಿಮ ಬಂಗಾಳ: 5,257 ಕೋಟಿ ರೂ
  9. ತೆಲಂಗಾಣ: 4,940 ಕೋಟಿ ರೂ
  10. ಒಡಿಶಾ: 4,925 ಕೋಟಿ ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:52 pm, Thu, 1 August 24

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ