ಐಟಿ ರಿಟರ್ನ್ಸ್ ಸಲ್ಲಿಕೆಗೆ ಆಗಸ್ಟ್ 31ರವರೆಗೂ ಅವಕಾಶ? ಇದು ಸುಳ್ಳು ಸುದ್ದಿ ಎಂದ ಪಿಐಬಿ ಫ್ಯಾಕ್ಟ್ ಚೆಕ್ ಟೀಮ್

ITR filing deadline extension updates: ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆಗೆ ಇದ್ದ ಜುಲೈ 31ರ ಡೆಡ್​ಲೈನ್ ಅನ್ನು ಆಗಸ್ಟ್ 31ಕ್ಕೆ ವಿಸ್ತರಿಸಲಾಗಿದೆ ಎನ್ನುವ ಸುದ್ದಿ ಸುಳ್ಳು ಎಂದು ಸರ್ಕಾರ ಹೇಳಿದೆ. ಜುಲೈ 25ರಂದು ಪ್ರೆಸ್ ರಿಜಿಸ್ಟ್ರಾರ್ ಜನರಲ್ ಕಚೇರಿಯು ಆ್ಯನುಯಲ್ ಸ್ಟೇಟ್ಮೆಂಟ್ ಫೈಲ್ ಮಾಡುವ ಡೆಡ್​ಲೈನ್ ಅನ್ನು ವಿಸ್ತರಿಸಿ ಅಡ್ವೈಸರಿ ಬಿಡುಗಡೆ ಮಾಡಿತ್ತು. ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಐಟಿಆರ್ ಸಲ್ಲಿಕೆಗೆ ಡೆಡ್ಲೈನ್ ವಿಸ್ತರಣೆ ಆಗಿದೆ ಎನ್ನುವ ಸುಳ್ಳು ಸುದ್ದಿ ಹರಡಿದೆ.

ಐಟಿ ರಿಟರ್ನ್ಸ್ ಸಲ್ಲಿಕೆಗೆ ಆಗಸ್ಟ್ 31ರವರೆಗೂ ಅವಕಾಶ? ಇದು ಸುಳ್ಳು ಸುದ್ದಿ ಎಂದ ಪಿಐಬಿ ಫ್ಯಾಕ್ಟ್ ಚೆಕ್ ಟೀಮ್
ಇನ್ಕಮ್ ಟ್ಯಾಕ್ಸ್ ರಿಟರ್ನ್
Follow us
|

Updated on: Aug 01, 2024 | 7:22 PM

ನವದೆಹಲಿ, ಆಗಸ್ಟ್ 1: ಐಟಿ ರಿಟರ್ನ್ಸ್ ಸಲ್ಲಿಕೆಗೆ ನಿಗದಿ ಮಾಡಲಾಗಿದ್ದ ಜುಲೈ 31ರ ಡೆಡ್​ಲೈನ್ ಅನ್ನು ಆಗಸ್ಟ್ 31ರವರೆಗೆ ಒಂದು ತಿಂಗಳು ವಿಸ್ತರಿಸಲಾಗಿದೆ ಎನ್ನುವಂತಹ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಮತ್ತು ಕೆಲ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ, ಐಟಿಆರ್ ಫೈಲ್ ಮಾಡುವ ಡೆಡ್​ಲೈನ್ ಅನ್ನು ವಿಸ್ತರಿಸಲಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಮೂಲಕ ದಂಡ ಇಲ್ಲದೇ ಐಟಿ ರಿಟರ್ನ್ಸ್ ಸಲ್ಲಿಸುವ ಅವಕಾಶ ಮುಗಿದುಹೋಗಿದೆ.

ಪ್ರೆಸ್ ರಿಜಿಸ್ಟ್ರಾರ್ ಜನರಲ್ ಹೊರಡಿಸಿದ ಸೂಚನೆಯಿಂದ ಗೊಂದಲ

ಮಾಹಿತಿ ಮತ್ತು ಪ್ರಸರಣ ಸಚಿವಾಲಯದ ಅಡಿಗೆ ಬರುವ ಭಾರತೀಯ ಪ್ರೆಸ್ ರಿಜಿಸ್ಟ್ರಾರ್ ಜನರಲ್ ಕಚೇರಿ ಕಳೆದ ವಾರ ಬಿಡುಗಡೆ ಮಾಡಿದ ಅಡ್ವೈಸರಿಯೊಂದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದು ಈ ಗೊಂದಲಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರದ ಪಿಐಬಿಯ ಫ್ಯಾಕ್ಟ್ ಚೆಕ್ ವಿಭಾಗದಿಂದಲೂ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ.

ಇದನ್ನೂ ಓದಿ: ಜುಲೈ 31ರ ಐಟಿಆರ್ ಡೆಡ್​ಲೈನ್ ಮುಗೀತು; ಫೈಲಿಂಗ್ ಮಾಡಿರದಿದ್ದರೆ ಮುಂದೇನು?

ಕಳೆದ ವಾರ ಪ್ರೆಸ್ ರಿಜಿಸ್ಟ್ರಾರ್ ಜನರಲ್ ಕಚೇರಿಯಿಂದ ಹೊರಡಿಸಲಾದ ಅಡ್ವೈಸರಿಯು ಐಟಿಆರ್​ಗೆ ಸಂಬಂಧಿಸಿದ್ದಲ್ಲ. ಅದು ಪ್ರೆಸ್ ಸೇವಾ ಪೋರ್ಟಲ್ ಮೂಲಕ ಆ್ಯನುಯಲ್ ಸ್ಟೇಟ್ಮೆಂಟ್ಸ್​ನ ಇ-ಫೈಲಿಂಗ್ ಮಾಡುವ ಸಂಬಂಧ ಜುಲೈ 25ರಂದು ಹೊರಡಿಸಿದ ಅಡ್ವೈಸರಿ ಅದಾಗಿತ್ತು. ಇದರ ಫೈಲಿಂಗ್​ಗೆ ಇದ್ದ ಡೆಡ್​ಲೈನ್ ಅನ್ನು ಆಗಸ್ಟ್ 31ಕ್ಕೆ ವಿಸ್ತರಿಸಲಾಗಿರುವುದನ್ನು ತಿಳಿಸಲಾಗಿತ್ತು. ಇದನ್ನು ಐಟಿಆರ್ ಫೈಲಿಂಗ್​ನ ಡೆಡ್​ಲೈನ್ ಎಂದು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿರಬಹುದು.

ಆ್ಯನುಯಲ್ ರಿಟರ್ನ್ಸ್ ಯಾರು ಸಲ್ಲಿಸುವುದು?

ಪ್ರೆಸ್ ಮತ್ತು ನಿಯತಕಾಲಿಕೆಗಳ ನೊಂದಣಿ ಕಾಯ್ದೆ ಅಡಿಯಲ್ಲಿ ರಿಜಿಸ್ಟರ್ ಆಗಿರುವ ಪ್ರಕಾಶಕ ಸಂಸ್ಥೆಗಳು ವಾರ್ಷಿಕ ರಿಟರ್ನ್ಸ್ ಅನ್ನು ಸಲ್ಲಿಸಬೇಕು. ನಿರ್ದಿಷ್ಟ ಮುದ್ರಣ ವರ್ಷದಲ್ಲಿ ನ್ಯೂಸ್​ಪೇಪರ್​ಗಳ ಸರ್ಕುಲೇಶನ್ ಎಷ್ಟಿದೆ ಎಂಬುದು ಈ ಆ್ಯನುಯಲ್ ಸ್ಟೇಟ್ಮೆಂಟ್​ನಲ್ಲಿ ದಾಖಲಾಗುತ್ತದೆ. ಇದರ ಫೈಲಿಂಗ್​ಗೆ ಇದ್ದ ಡೆಡ್​ಲೈನ್ ಅನ್ನು ವಿಸ್ತರಿಸಲಾಗಿರುವ ಮಾಹಿತಿಯನ್ನು ಜುಲೈ 25ರಂದು ಹೊರಡಿಸಲಾದ ಅಡ್ವೈಸರಿಯಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ: ಪಿಎಂಎಸ್ 4.0 ಆ್ಯಪ್ ಬಿಡುಗಡೆ; ಕೇಂದ್ರದಿಂದ ನೇರವಾಗಿ ಅಕ್ಕಿ ಖರೀದಿಸಲು ರಾಜ್ಯಗಳಿಗೆ ಅವಕಾಶ

ಇದರೊಂದಿಗೆ, ಆದಾಯ ತೆರಿಗೆ ಪಾವತಿದಾರರು ಸಲ್ಲಿಸಬೇಕಾದ ಐಟಿಆರ್ ಫೈಲಿಂಗ್​ನ ಗಡುವು ವಿಸ್ತರಣೆ ಆಗಿಲ್ಲ ಎಂಬುದು ಸ್ಪಷ್ಟವಾಗಿದೆ. ಜುಲೈ 31ರೊಳಗೆ ಐಟಿಆರ್ ಸಲ್ಲಿಸದವರು, ಈಗ 5,000 ರುವರೆಗೆ ದಂಡ ಪಾವತಿಸಿ ಐಟಿಆರ್ ಫೈಲ್ ಮಾಡಬಹುದು. ಅದಕ್ಕೆ ಡಿಸೆಂಬರ್ 31ರವರೆಗೂ ಕಾಲಾವಕಾಶ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ