
ನವದೆಹಲಿ, ಅಕ್ಟೋಬರ್ 1: ಸರ್ಕಾರಕ್ಕೆ ಒಟ್ಟು ಜಿಎಸ್‌ಟಿ (GST) ಆದಾಯ ಸಂಗ್ರಹದಲ್ಲಿ ಭರ್ಜರಿ ಏರಿಕೆ ಕಂಡುಬಂದಿದ್ದು, 2026ರ ಸೆಪ್ಟೆಂಬರ್ ಅವಧಿಯಲ್ಲಿ ₹2,03,521 ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ (ಸೆಪ್ಟೆಂಬರ್ 2025 ರಲ್ಲಿ ₹1,77,365 ಕೋಟಿ) ಹೋಲಿಸಿದರೆ ಜಿಎಸ್‌ಟಿ ಆದಾಯದಲ್ಲಿ ಶೇ. 14.7 ರಷ್ಟು ಗಣನೀಯ ಪ್ರಗತಿ ದಾಖಲಾಗಿದೆ. ರೀಫಂಡ್ಗಳನ್ನು ಕಳೆದು ನಿವ್ವಳ ಜಿಎಸ್ಟಿ ಆದಾಯದಲ್ಲಿ ಶೇ. 18ರಷ್ಟು ಹೆಚ್ಚಳ ಆಗಿದೆ. ₹1,76,520 ಕೋಟಿ ನಿವ್ವಳ ಜಿಎಸ್ಟಿ ಆದಾಯ ಸರ್ಕಾರಕ್ಕೆ ಸಿಕ್ಕಿದೆ.
ಇನ್ನು, ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ, ಅಂದರೆ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗಿನ ಆರು ತಿಂಗಳ ಅವಧಿಯಲ್ಲಿ ಸಂಗ್ರಹವಾದ ಒಟ್ಟು ಜಿಎಸ್ಟಿ ₹12.46 ಲಕ್ಷ ಕೋಟಿ ದಾಟಿದೆ. ನಿವ್ವಳ ಜಿಎಸ್ಟಿ ಆದಾಯ ₹10.66 ಲಕ್ಷ ಕೋಟಿ ದಾಖಲಾಗಿದೆ.
ಇದನ್ನೂ ಓದಿ: LPG Cylinder Price Hike: ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಹೆಚ್ಚಿದ ಹೊರೆ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಭಾರೀ ಹೆಚ್ಚಳ
ಒಟ್ಟು ಜಿಎಸ್ಟಿ ಸಂಗ್ರಹ: ₹2,03,521
ಒಟ್ಟು ರಿಫಂಡ್ (Total Refunds): ₹27,001 ಕೋಟಿ ಪಾವತಿಸಲಾಗಿದ್ದು, ನಿವ್ವಳ ಜಿಎಸ್‌ಟಿ ಆದಾಯವು (Net GST Revenue) ₹1,76,520 ಕೋಟಿಗೆ ತಲುಪಿದೆ.
ಕರ್ನಾಟಕ ರಾಜ್ಯವು ಜಿಎಸ್‌ಟಿ ಸಂಗ್ರಹದಲ್ಲಿ ಉತ್ತಮ ಸಾಧನೆ ಮುಂದುವರಿಸಿದೆ. ಆಮದು ಸರಕು ಹೊರತುಪಡಿಸಿ, ಕರ್ನಾಟಕದ ಆಂತರಿಕ ಜಿಎಸ್‌ಟಿ ಆದಾಯವು ₹13,884 ದಾಖಲಾಗಿದೆ. ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ₹12,001 ಜಿಎಸ್ಟಿ ಪಡೆಯಲಾಗಿತ್ತು. ಶೇ. 16ರಷ್ಟು ಜಿಎಸ್ಟಿ ಸಂಗ್ರಹ ಹೆಚ್ಚಿಸಿದ ರಾಜ್ಯ.
ರಾಜ್ಯ ಎಸ್‌ಜಿಎಸ್‌ಟಿ ಮತ್ತು ಐಜಿಎಸ್‌ಟಿ ಹಂಚಿಕೆ ಸೇರಿದಂತೆ (Post-Settlement SGST) ಕರ್ನಾಟಕವು 2026ರ ಸೆಪ್ಟೆಂಬರ್ನಲ್ಲಿ ₹8,094 ಕೋಟಿ ಆದಾಯ ಪಡೆದಿದ್ದು, ಶೇ. 14 ರಷ್ಟು ಹೆಚ್ಚಳ ದಾಖಲಿಸಿದೆ.
ಇದನ್ನೂ ಓದಿ: 3ನೇ ಕ್ವಾರ್ಟರ್ಗೆ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಘೋಷಣೆ; ವಿವಿಧ ಸ್ಕೀಮ್ಗಳ ಬಡ್ಡಿದರದಲ್ಲಿ ಇಲ್ಲ ಬದಲಾವಣೆ
ದೇಶದ ಹಬ್ಬದ ಋತುವಿನ ವ್ಯಾಪಾರ-ವಹಿವಾಟುಗಳು ಚುರುಕುಗೊಂಡಿರುವುದು ಮತ್ತು ಆರ್ಥಿಕ ಚಟುವಟಿಕೆಗಳು ಸಕ್ರಿಯವಾಗಿರುವುದು ಈ ಭರ್ಜರಿ ಜಿಎಸ್‌ಟಿ ಸಂಗ್ರಹಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ