GST: ರೈಲ್ವೇ ಟಿಕೆಟ್ ರದ್ದತಿ ಶುಲ್ಕದೊಂದಿಗೆ ಜಿಎಸ್​ಟಿ ಪಾವತಿಸಬೇಕು; ಇಲ್ಲಿದೆ ಶುಲ್ಕದ ವಿವರ

ಕೆಲವೊಮ್ಮೆ ಪ್ರಯಾಣಿಕರು ಕಾರಣಾಂತರಗಳಿಂದ ದೃಢೀಕರಿಸಿದ್ದ ರೈಲ್ವೇ ಟಿಕೆಟ್​ಗಳನ್ನು ರದ್ದು ಮಾಡುತ್ತಾರೆ. ಇಂತಹ ಸಮಯದಲ್ಲಿ ಇಲಾಖೆಯು ರದ್ದತಿ ಶುಲ್ಕವನ್ನು ವಿಧಿಸುತ್ತದೆ. ದೃಢೀಕೃತ ರೈಲು ಟಿಕೆಟ್ ರದ್ದುಗೊಳಿಸುವಿಕೆ ಶುಲ್ಕಕ್ಕೆ ಜಿಎಸ್​ಟಿ ಸೇರುವುದರಿಂದ ಇದು ದುಬಾರಿಯಾಗಿರುತ್ತದೆ.

GST: ರೈಲ್ವೇ ಟಿಕೆಟ್ ರದ್ದತಿ ಶುಲ್ಕದೊಂದಿಗೆ ಜಿಎಸ್​ಟಿ ಪಾವತಿಸಬೇಕು; ಇಲ್ಲಿದೆ ಶುಲ್ಕದ ವಿವರ
ಸಾಂದರ್ಭಿಕ ಚಿತ್ರ
Updated By: Rakesh Nayak Manchi

Updated on: Sep 01, 2022 | 3:38 PM

ಭಾರತೀಯ ರೈಲ್ವೇಯು ವರ್ಷವಿಡೀ ಅನೇಕ ಜನರ ಪ್ರಯಾಣ ಅಗತ್ಯಗಳನ್ನು ಪೂರೈಸುತ್ತದೆ. ಹಬ್ಬದ ಸಮಯದಲ್ಲಿ ರೈಲು ಟಿಕೆಟ್‌ಗಳ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗುತ್ತದೆ. ದೃಢೀಕೃತ ಆಸನವನ್ನು ಪಡೆಯಲು ಜನರು ಸಾಮಾನ್ಯವಾಗಿ ಟಿಕೆಟ್‌ಗಳನ್ನು ಮುಂಚಿತವಾಗಿಯೇ ಕಾಯ್ದಿರಿಸುತ್ತಾರೆ. ಆದಾಗ್ಯೂ ಕೆಲವರು ಕೊನೆಯ ಕ್ಷಣದ ತುರ್ತುಸ್ಥಿತಿಯಿಂದಾಗಿ ತಮ್ಮ ಟಿಕೆಟ್‌ಗಳನ್ನು ರದ್ದು ಮಾಡುತ್ತಾರೆ. ಈ ವೇಳೆ ಇಲಾಖೆಯು ರದ್ದತಿ ಶುಲ್ಕವನ್ನು ವಿಧಿಸುತ್ತದೆ. ದೃಢೀಕೃತ ರೈಲು ಟಿಕೆಟ್ ರದ್ದುಗೊಳಿಸುವಿಕೆ ಶುಲ್ಕಕ್ಕೆ ಸರಕು ಮತ್ತು ಸೇವಾ ತೆರಿಗೆಯನ್ನು (GST) ಸೇರುವುದರಿಂದ ಇದು ದುಬಾರಿಯಾಗಿರುತ್ತದೆ.

ಹಣಕಾಸು ಸಚಿವಾಲಯದ ತೆರಿಗೆ ಸಂಶೋಧನಾ ಘಟಕವು ಆಗಸ್ಟ್ 3ರಂದು ಹೊರಡಿಸಿದ ಸುತ್ತೋಲೆ ಪ್ರಕಾರ, ರೈಲು ಟಿಕೆಟ್‌ಗಳನ್ನು ರದ್ದುಗೊಳಿಸುವಾಗ ಜಿಎಸ್​ಟಿ ವಿಧಿಸಲಾಗುತ್ತದೆ. ಏಕೆಂದರೆ ರೈಲು ಟಿಕೆಟ್ ಕಾಯ್ದಿರಿಸುವುದು ಒಂದು ಒಪ್ಪಂದವಾಗಿದ್ದು, ಇದರಲ್ಲಿ ಸೇವಾ ಪೂರೈಕೆದಾರರು ಸೇವೆಯನ್ನು ನೀಡುವುದಾಗಿ ಭರವಸೆ ನೀಡುತ್ತಾರೆ ಎಂದು ಸುತ್ತೋಲೆ ವಿವರಿಸುತ್ತದೆ.

ಒಂದು ವರ್ಗದ ರೈಲ್ವೇ ಟಿಕೆಟ್‌ಗಳ ರದ್ದತಿ ಶುಲ್ಕಗಳು ಪ್ರಯಾಣದ ವರ್ಗಕ್ಕೆ ಅನ್ವಯಿಸುವ ಅದೇ ದರದಲ್ಲಿ ಜಿಎಸ್​ಟಿಯನ್ನು ಆಕರ್ಷಿಸುತ್ತದೆ. ಉದಾಹರಣೆಗೆ, ಪ್ರಥಮ ದರ್ಜೆ ಅಥವಾ ಹವಾನಿಯಂತ್ರಿತ ಕೋಚ್ ಟಿಕೆಟ್‌ಗಳ ಮೇಲೆ 5 ಪ್ರತಿಶತ ಜಿಎಸ್​ಟಿ ವಿಧಿಸಲಾಗುತ್ತದೆ. ಅಲ್ಲದೆ ಅದೇ ದರದ ಜಿಎಸ್​ಟಿ ರದ್ದತಿ ಶುಲ್ಕಗಳಿಗೆ ಅನ್ವಯಿಸುತ್ತದೆ.

ರೈಲು ಹೊರಡುವ 48 ಗಂಟೆಗಳ ಮೊದಲು ಎಸಿ ಫಸ್ಟ್ ಕ್ಲಾಸ್ ಅಥವಾ ಎಸಿ ಎಕ್ಸಿಕ್ಯೂಟಿವ್ ಕ್ಲಾಸ್ ಟಿಕೆಟ್ ಅನ್ನು ರದ್ದುಗೊಳಿಸಲು ಭಾರತೀಯ ರೈಲ್ವೇಯು 240 ರೂ. ಶುಲ್ಕ ವಿಧಿಸುತ್ತದೆ. ಈ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಪ್ರಯಾಣಿಕರು ಶೇ.5ರಷ್ಟು ಜಿಎಸ್‌ಟಿ ಪಾವತಿಸುತ್ತಾರೆ.

ಹಣಕಾಸು ಸಚಿವಾಲಯದ ಹೊಸ ಸುತ್ತೋಲೆಯ ಪ್ರಕಾರ, ಪ್ರಯಾಣಿಕರು ರದ್ದತಿ ಶುಲ್ಕದ ಮೇಲೆ ಅದೇ ಮೊತ್ತದ ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ ದೃಢೀಕರಿಸಿದ ಎಸಿ ಫಸ್ಟ್ ಕ್ಲಾಸ್ ಟಿಕೆಟ್ ಅನ್ನು ರದ್ದುಗೊಳಿಸಿದರೆ ಒಬ್ಬ ಪ್ರಯಾಣಿಕನು ಜಿಎಸ್​ಟಿಯಾಗಿ 12 ರೂ. ಪಾವತಿಸಬೇಕು. ರೈಲು ಹೊರಡುವ 48 ಗಂಟೆಗಳ ಮೊದಲು ದೃಢೀಕರಿಸಿದ ಎಸಿ 2-ಟೈರ್ ಟಿಕೆಟ್‌ಗಳಿಗೆ ರದ್ದತಿ ಶುಲ್ಕವಾಗಿ 200 ರೂ. ಮತ್ತು ಎಸಿ 3-ಟೈರ್ ಟಿಕೆಟ್‌ಗಳನ್ನು ರದ್ದುಗೊಳಿಸಿದಾಗ 180 ರೂ. ಶುಲ್ಕ ವಿಧಿಸುತ್ತದೆ.

ರೈಲು ನಿಗದಿತ ನಿರ್ಗಮನದಿಂದ 48 ಗಂಟೆಗಳಿಂದ 12 ಗಂಟೆಗಳ ಮೊದಲು ದೃಢಪಡಿಸಿದ ಟಿಕೆಟ್ ಅನ್ನು ರದ್ದುಗೊಳಿಸಿದರೆ ಟಿಕೆಟ್ ಮೊತ್ತದ ಶೇಕಡಾ 25 ರಷ್ಟನ್ನು ರದ್ದತಿ ಶುಲ್ಕವಾಗಿ ವಿಧಿಸಲಾಗುತ್ತದೆ. 12 ಗಂಟೆ ಮತ್ತು 4 ಗಂಟೆಗಳ ನಡುವಿನ ದೃಢೀಕೃತ ಟಿಕೆಟ್‌ಗಳನ್ನು ರದ್ದುಗೊಳಿಸಿದರೆ ಬುಕಿಂಗ್ ಮೊತ್ತದ ಶೇಕಡಾ 50 ರಷ್ಟು ಶುಲ್ಕ ವಿಧಿಸಲಾಗುತ್ತದೆ.

ಅಂತಹ ಯಾವುದೇ ಪರಿಸ್ಥಿತಿಯಲ್ಲಿ ಟಿಕೆಟ್ ರದ್ದುಗೊಳಿಸುವಿಕೆಯು ಈಗ ರದ್ದತಿ ಶುಲ್ಕದ ಮೇಲೆ ಶೇಕಡಾ 5 ರಷ್ಟು GST ಅನ್ನು ಆಕರ್ಷಿಸುತ್ತದೆ. ಆದಾಗ್ಯೂ, ಎರಡನೇ ದರ್ಜೆಯ ಸ್ಲೀಪರ್ ಟಿಕೆಟ್‌ಗಳನ್ನು ರದ್ದುಗೊಳಿಸುವುದರ ಮೇಲೆ ಯಾವುದೇ ಜಿಎಸ್‌ಟಿ ಇರುವುದಿಲ್ಲ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:38 pm, Thu, 1 September 22