Bank Holiday: ಗುರುನಾನಕ್ ಜಯಂತಿ: ಯಾವ್ಯಾವ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇದೆ, ಇಲ್ಲಿದೆ ಡೀಟೇಲ್ಸ್

Guru Nanak Dev Jayanti: ಕಾರ್ತೀಕ ಪೌರ್ಣಿಮೆ ದಿನವಾದ ಇಂದು (ನವೆಂಬರ್ 27) ಸಿಖ್ ಧರ್ಮಸಂಸ್ಥಾಪಕ ಗುರುನಾನಕ್ ದೇವ್ ಅವರ ಜಯಂತಿ ಇದೆ. ಹಲವು ರಾಜ್ಯಗಳಲ್ಲಿ ಸರ್ಕಾರಿ ರಜೆ ಇದೆ. ಆರ್​ಬಿಐ ರಜಾ ಕ್ಯಾಲೆಂಡರ್​ನ ಪಟ್ಟಿಯಲ್ಲಿ ಗುರುನಾನಕ್ ಜಯಂತಿ ಇದೆ. ಬೆಂಗಳೂರು ಸೇರಿದಂತೆ ನಾನಾ ಸ್ಥಳಗಳಲ್ಲಿ ಬ್ಯಾಂಕುಗಳು ಬಂದ್ ಆಗಿರುತ್ತವೆ. ಕರ್ನಾಟಕದಲ್ಲಿ ಈ ಗುರುವಾರವೂ ಕನಕದಾಸ ಜಯಂತಿ ಪ್ರಯುಕ್ತ ರಜೆ ಇದೆ.

Bank Holiday: ಗುರುನಾನಕ್ ಜಯಂತಿ: ಯಾವ್ಯಾವ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇದೆ, ಇಲ್ಲಿದೆ ಡೀಟೇಲ್ಸ್
ಬ್ಯಾಂಕು ರಜೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 27, 2023 | 10:35 AM

ನವದೆಹಲಿ, ನವೆಂಬರ್ 27: ಇಂದು ಸಿಖ್ ಧರ್ಮ ಸಂಸ್ಥಾಪಕ ಮತ್ತು ಅವರ ಮೊದಲ ಧರ್ಮಗುರು ಗುರುನಾನಕ್ ಅವರ ಜಯಂತಿ (Guru Nanak Jayanti) ಇದೆ. ಕಾರ್ತೀಕ ಮಾಸದ ಪೌರ್ಣಮಿಯಂದು ನಾನಕ್ ಅವರ ಜನ್ಮದಿನ. ಇಂದು ಕಾರ್ತೀಕ ಪೌರ್ಣಿಮೆ. ಇವತ್ತು ಗುರುನಾನಕ್ ದೇವರ 554ನೇ ಜಯಂತಿ. ಈ ದಿನ ಕೆಲ ರಾಜ್ಯಗಳಲ್ಲಿ ಸರ್ಕಾರಿ ರಜೆ ಇದೆ. ಆರ್​ಬಿಐನ ರಜಾ ವೇಳಾಪಟ್ಟಿಯಲ್ಲಿ (RBI Holiday Calender) ಗುರುನಾನಕ್ ಜಯಂತಿ ಇದೆ. ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಬ್ಯಾಂಕುಗಳಿಗೆ ನವೆಂಬರ್ 27ರಂದು ರಜೆ ಇದೆ.

ನವೆಂಬರ್ 27, ಗುರು ನಾನಕ್​ರ ಜನ್ಮದಿನದಂದು ಬ್ಯಾಂಕುಗಳಿಗೆ ರಜೆ ಇರುವ ಸ್ಥಳಗಳು

ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲದೇ ಅಗಾರ್ತಲಾ, ಐಜ್ವಾಲ್, ಬೆಲಾಪುರ್, ಭೋಪಾಲ್, ಭುಬನೇಶ್ವರ್, ಚಂದೀಗಡ್, ಡೆಹ್ರಾಡೂನ್, ಹೈದರಾಬಾದ್, ಇಟಾನಗರ್, ಜೈಪುರ್, ಜಮ್ಮು, ಕಾನಪುರ್, ಕೊಹಿಮಾ, ಕೋಲ್ಕತಾ, ಲಕ್ನೋ, ಮುಂಬೈ, ನಾಗಪುರ್, ನವದೆಹಲಿ, ರಾಯಪುರ್, ರಾಂಚಿ, ಶಿಮ್ಲಾ, ಶ್ರೀನಗರ್, ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ಗ್ಯಾಂಗ್​ಟಾಕ್, ಗುವಾಹಟಿ, ಹೈದರಾಬಾದ್, ಇಂಫಾಲ್, ಕೊಚ್ಚಿ, ಪಣಜಿ, ಶಿಲ್ಲಾಂಗ್ ಮತ್ತು ತಿರುವನಂತಪುರಂ ನಗರಗಳಲ್ಲಿ ಗುರುನಾನಕ್ ಜಯಂತಿಯಂದು ಬ್ಯಾಂಕುಗಳು ಬಂದ್ ಆಗಿರುತ್ತವೆ.

ಇದನ್ನೂ ಓದಿ: ಡಿಸೆಂಬರ್​ನಲ್ಲಿ ಬ್ಯಾಂಕುಗಳಿಗೆ 18 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ರಜೆ? 6 ದಿನ ಬ್ಯಾಂಕ್ ಮುಷ್ಕರದ ಬರೆ

ಕನಕದಾಸ ಜಯಂತಿ: ನವೆಂಬರ್ 30ಕ್ಕೂ ರಜೆ

ಈ ನವೆಂಬರ್ ತಿಂಗಳ ಕೊನೆಯಲ್ಲಿ, ಅಂದರೆ 30ನೇ ತಾರೀಖಿನಂದು ಕರ್ನಾಟಕದಲ್ಲೆಡೆ ಸರ್ಕಾರಿ ರಜೆ ಇದೆ. ಅಂದು ಕನಕದಾಸ ಜಯಂತಿ ಇದ್ದು, ಬ್ಯಾಂಕುಗಳಿಗೂ ರಜೆ ಇರುತ್ತದೆ.

ಡಿಸೆಂಬರ್ ತಿಂಗಳಲ್ಲಿ 18 ರಜೆ

ಡಿಸೆಂಬರ್ ತಿಂಗಳಲ್ಲಿ ಆರ್​ಬಿಐ ಕ್ಯಾಲೆಂಡರ್ ಪ್ರಕಾರ 18 ರಜೆಗಳಿವೆ. ಇದರಲ್ಲಿ ಭಾನುವಾರ ಮತ್ತು ಶನಿವಾರದ ರಜೆಗಳೂ ಒಳಗೊಂಡಿವೆ. ಕರ್ನಾಟಕದಲ್ಲಿ ಒಟ್ಟು 8 ದಿನಗಳು ಬ್ಯಾಂಕಿಗೆ ರಜೆ ಇರುತ್ತದೆ. ಡಿಸೆಂಬರ್ 25ರಂದು ಕ್ರಿಸ್ಮಸ್​ಗೆ ರಜೆ ಇದೆ. ಅದು ಬಿಟ್ಟರೆ ಉಳಿದ ರಜೆಗಳು ಭಾನುವಾರ ಮತ್ತು ಶನಿವಾರದ ರಜೆಗಳೇ ಆಗಿವೆ.

ಇದನ್ನೂ ಓದಿ: ಟಾಟಾನಾ, ಬಿರ್ಲಾನಾ?; ದೇಶದ ಅತಿದೊಡ್ಡ ಸಾಲಗಾರರು ಯಾರು? ಇಲ್ಲಿದೆ ಟಾಪ್-10 ಪಟ್ಟಿ

ಹಾಗೆಯೇ, ಡಿಸೆಂಬರ್ ಮೊದಲೆರಡು ವಾರದಲ್ಲಿ ಅಖಿಲ ಭಾರತ ಬ್ಯಾಂಕ್ ಮುಷ್ಕರ ಇದೆ. ಡಿಸೆಂಬರ್ 11ರಂದು ಎಲ್ಲಾ ಖಾಸಗಿ ಬ್ಯಾಂಕುಗಳು ಬಂದ್ ಆಗಿರುತ್ತವೆ. ಡಿಸೆಂಬರ್ 4ರಿಂದ 8ರವರೆಗೆ ವಿವಿಧ ಸರ್ಕಾರಿ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM