ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳು (USCIS) ಶುಕ್ರವಾರದಂದು ತಿಳಿಸಿರುವ ಪ್ರಕಾರ, ಎಚ್- 1ಬಿ ವೀಸಾಗಳ (H-1B Visa) ಆರಂಭಿಕ ನೋಂದಣಿಗಳು ಮಾರ್ಚ್ 1ರಂದು ಪ್ರಾರಂಭವಾಗುತ್ತವೆ ಹಾಗೂ 2022ರ ಅಕ್ಟೋಬರ್ನಿಂದ ಪ್ರಾರಂಭವಾಗುವ ಆರ್ಥಿಕ ವರ್ಷಕ್ಕೆ ಮಾರ್ಚ್ 18, 2022ರ ವರೆಗೆ ತೆರೆದಿರುತ್ತವೆ. ಈ ಅವಧಿಯಲ್ಲಿ ನಿರೀಕ್ಷಿತ ಅರ್ಜಿದಾರರು ಮತ್ತು ಪ್ರತಿನಿಧಿಗಳು ಅದರ ಆನ್‌ಲೈನ್ ಎಚ್-1ಬಿ ನೋಂದಣಿ ವ್ಯವಸ್ಥೆಯನ್ನು ಬಳಸಿಕೊಂಡು, ನೋಂದಣಿಗಳನ್ನು ಪೂರ್ಣಗೊಳಿಸಲು ಮತ್ತು ಸಲ್ಲಿಸಲು ಸಾಧ್ಯವಾಗುತ್ತದೆ. ಇದನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. USCISನಿಂದ ಹಣಕಾಸು ವರ್ಷ 2023 H-1B ಕ್ಯಾಪ್‌ಗಾಗಿ ಸಲ್ಲಿಸಿದ ಪ್ರತಿ ನೋಂದಣಿಗೆ ದೃಢೀಕರಣ ಸಂಖ್ಯೆಯನ್ನು ನೀಡುತ್ತದೆ. ಇದನ್ನು ನೋಂದಣಿಗಳನ್ನು ಟ್ರ್ಯಾಕ್ ಮಾಡಲು ಬಳಸಬಹುದು.
ಏಜೆನ್ಸಿಯು ಈಗ ಅನುಸರಿಸುತ್ತಿರುವ ಹೊಸ ವ್ಯವಸ್ಥೆಯ ಅಡಿಯಲ್ಲಿ ಅರ್ಜಿದಾರರು ಎಲೆಕ್ಟ್ರಾನಿಕ್ ಆಗಿ ನೋಂದಾಯಿಸಿಕೊಳ್ಳುತ್ತಾರೆ ಮತ್ತು 10 ಡಾಲರ್ ನೋಂದಣಿ ಶುಲ್ಕವನ್ನು ಪಾವತಿಸುತ್ತಾರೆ. “ಮಾರ್ಚ್ 18ರೊಳಗೆ ನಾವು ಸಾಕಷ್ಟು ನೋಂದಣಿಗಳನ್ನು ಸ್ವೀಕರಿಸಿದರೆ, Randomly ನೋಂದಣಿಗಳನ್ನು ಆಯ್ಕೆ ಮಾಡುತ್ತೇವೆ ಮತ್ತು ಬಳಕೆದಾರರ myUSCIS ಆನ್‌ಲೈನ್ ಖಾತೆಗಳ ಮೂಲಕ ಆಯ್ಕೆ ಅಧಿಸೂಚನೆಗಳನ್ನು ಕಳುಹಿಸುತ್ತೇವೆ. ಮಾರ್ಚ್ 31ರೊಳಗೆ ಖಾತೆದಾರರಿಗೆ ತಿಳಿಸಲು ನಾವು ಉದ್ದೇಶಿಸಿದ್ದೇವೆ,” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಪ್ರತಿ ವರ್ಷ ಅಮೆರಿಕ 65,000 ಹೊಸ H-1B ವೀಸಾಗಳನ್ನು ನೀಡುತ್ತದೆ. ಅಮೆರಿಕವು ಸ್ನಾತಕೋತ್ತರ ಪದವಿ ಹೊಂದಿರುವವರಿಗೆ ಇನ್ನೂ 20,000 ಕಾಯ್ದಿರಿಸಿದೆ. ಈ ವೀಸಾ ಕಾರ್ಯಕ್ರಮದ ಹೆಚ್ಚಿನ ಫಲಾನುಭವಿಗಳಲ್ಲಿ ಭಾರತೀಯರು ಸೇರಿದ್ದಾರೆ. ಪ್ರತಿ ವರ್ಷ ನೀಡಲಾಗುವ ಸುಮಾರು ಶೇ 70ರಷ್ಟು ಹೊಸ ವೀಸಾಗಳನ್ನು ಸ್ವೀಕರಿಸುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ USCIS ಆರಂಭಿಕ ಆಯ್ಕೆಯ ನಂತರ ಸಾಕಷ್ಟು ಅಂತಿಮ ಅರ್ಜಿಗಳನ್ನು ಸ್ವೀಕರಿಸದ ಕಾರಣ ಎಲ್ಲ ವೀಸಾಗಳನ್ನು ನಿಯೋಜಿಸಲು ಬಹು ಲಾಟರಿಗಳನ್ನು ನಡೆಸಬೇಕಾಗಿತ್ತು. ಕಡಿಮೆ ಪ್ರಯಾಣ ಮತ್ತು ಕೊವಿಡ್ ಸೇರಿ ಇದಕ್ಕೆ ಹಲವು ಕಾರಣಗಳಿವೆ.
ಅಮೆಜಾನ್ನಿಂದ ಹಣಕಾಸು 2021ರಲ್ಲಿ ಆರಂಭಿಕ ಉದ್ಯೋಗಕ್ಕಾಗಿ 6,182 ಅನುಮೋದನೆಗಳೊಂದಿಗೆ ಹೆಚ್ಚು ಅನುಮೋದಿತ ಎಚ್-1B ಅರ್ಜಿಗಳನ್ನು ಹೊಂದಿತ್ತು. ನಂತರ ಇನ್ಫೋಸಿಸ್ (5,256), ಟಿಸಿಎಸ್ (3,063), ವಿಪ್ರೋ (2,121), ಕಾಗ್ನಿಜಂಟ್ (1,481), ಗೂಗಲ್ (1,453), ಐಬಿಎಂ (1,402), ಎಚ್ಸಿಎಲ್ ಅಮೆರಿಕಾ (1,299) ಮತ್ತು ಮೈಕ್ರೋಸಾಫ್ಟ್ (1,240) ಇವೆ. ಥರ್ಡ್-ಪಾರ್ಟಿ ಸೈಟ್‌ಗಳಲ್ಲಿ ಉದ್ಯೋಗಿಗಳಿಗೆ USCIS ಅರ್ಜಿಗಳನ್ನು ಹೇಗೆ ನಿರ್ಣಯಿಸುತ್ತದೆ ಎಂಬುದರ ಬದಲಾವಣೆಯ ನಂತರ ಹಣಕಾಸು ವರ್ಷ 2021ರಲ್ಲಿ ವೀಸಾ ನಿರಾಕರಣೆಗಳ ಒಟ್ಟಾರೆ ದರವು ಶೇ 4ಕ್ಕೆ ಇಳಿದಿದೆ.
ಇದನ್ನೂ ಓದಿ: US Green Card: ಗ್ರೀನ್ ಕಾರ್ಡ್ಗಾಗಿ ಅಮೆರಿಕದಲ್ಲಿ ಕಾಯುತ್ತಿರುವ ಸಾವಿರಾರು ಭಾರತೀಯರಿಗೆ ಗುಡ್ ನ್ಯೂಸ್