ನವರತ್ನದಿಂದ ಮಹಾರತ್ನ ಸ್ಥಾನಮಾನ ಪಡೆಯಲಿರುವ ಬೆಂಗಳೂರಿನ ಎಚ್ಎಎಲ್
HAL may become Maharatna PSU: ಹಿಂದೂಸ್ತಾನ್ ಏರೋನಾಟಿಕ್ಸ್ ಲಿ ಸಂಸ್ಥೆ ಈ ಡಿಸೆಂಬರ್ನೊಳಗೆ ಮಹಾರತ್ನ ಪಿಎಸ್ಯು ಸ್ಥಾನಮಾನ ಪಡೆಯಬಹುದು ಎಂದು ಸಿಎನ್ಬಿಎಸ್ ಟಿವಿ18 ವಾಹಿನಿ ವರದಿಯಲ್ಲಿ ಹೇಳಲಾಗಿದೆ. ಸದ್ಯ ಎಚ್ಎಎಲ್ ಸಂಸ್ಥೆ ದೇಶದ 25 ನವರತ್ನ ಕಂಪನಿಗಳ ಪೈಕಿ ಒಂದಾಗಿದೆ. ಮಹಾರತ್ನ ಸ್ಥಾನ ದೊರೆತರೆ ಎಚ್ಎಲ್ಗೆ ಆಡಳಿತಾತ್ಮಕವಾಗಿ ಮತ್ತು ಆರ್ಥಿಕವಾಗಿ ಹೆಚ್ಚು ಸ್ವಾಯತ್ತತೆ ಪ್ರಾಪ್ತವಾಗಲಿದೆ.
ಬೆಂಗಳೂರು, ಸೆಪ್ಟೆಂಬರ್ 13: ಭಾರತದ ಸರ್ಕಾರಿ ಸಂಸ್ಥೆಗಳ ಪೈಕಿ ನವರತ್ನಗಳಲ್ಲಿ ಒಂದಾಗಿರುವ ಎಚ್ಎಎಲ್ಗೆ ಈ ವರ್ಷಾಂತ್ಯದೊಳಗೆ ಮಹಾರತ್ನ ಸ್ಥಾನಮಾನ ಸಿಗಲಿದೆ. ಇದರೊಂದಿಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆ ಹೆಚ್ಚು ಸ್ವಾಯತ್ತತೆ ಗಳಿಸಲಿದೆ. ಸರ್ಕಾರದ ಅನುಮೋದನೆ ಇಲ್ಲದೇ ಹೆಚ್ಚು ಮೊತ್ತದ ಹೂಡಿಕೆ ಮಾಡಲು ಅವಕಾಶ ಸಿಗುತ್ತದೆ. ಸದ್ಯ ಎಚ್ಎಎಲ್ ಸಂಸ್ಥೆ ದೇಶದ 25 ನವರತ್ನ ಪಿಎಸ್ಯುಗಳಲ್ಲಿ ಒಂದಾಗಿದೆ. ಮಹಾರತ್ನ ಸ್ಥಾನಮಾನ ಹೊಂದಿರುವ 13 ಕಂಪನಿಗಳ ಪಟ್ಟಿಗೆ ಎಚ್ಎಎಲ್ ಸೇರ್ಪಡೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.
ಮಹಾರತ್ನ ಸ್ಥಾನಮಾನ ಪಡೆದರೆ ಎಚ್ಎಎಲ್ ಆಡಳಿತ ಮಂಡಳಿ ಹೆಚ್ಚು ಸ್ವಾಯತ್ತ ಅಧಿಕಾರ ಹೊಂದಿರುತ್ತದೆ. ಸರ್ಕಾರದ ಅನುಮೋದನೆ ಇಲ್ಲದೇ 5,000 ಕೋಟಿ ರೂವರೆಗಿನ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಿದೆ. ನವರತ್ನ ವಿಭಾಗದ ಸಂಸ್ಥೆಗಳು ಈ ರೀತಿ 1,000 ಕೋಟಿ ರೂವರೆಗೆ ಮಾತ್ರ ಹೂಡಿಕೆಗೆ ಅವಕಾಶ ಇರುತ್ತದೆ.
ಮಹಾರತ್ನ, ನವರತ್ನ, ಮಿನಿರತ್ನ ಸಂಸ್ಥೆಗಳು
ದೇಶದಲ್ಲಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮೂರು ಪ್ರಮುಖ ಶ್ರೇಣಿಗಳಾಗಿ ವರ್ಗೀಕರಿಸಲಾಗಿದೆ. ಮಹಾರತ್ನ, ನವರತ್ನ ಮತ್ತು ಮಿನಿರತ್ನ ಸ್ಥಾನಮಾನ ನೀಡಲಾಗುತ್ತದೆ. ಮಿನಿರತ್ನ ಪಟ್ಟಿಯನ್ನು ಎರಡು ಭಾಗವಾಗಿ ಮಾಡಲಾಗಿದೆ. ಮೊದಲ ಮಿನಿರತ್ನ ಪಟ್ಟಿಯಲ್ಲಿ 51 ಕಂಪನಿಗಳಿವೆ. ಬೆಮೆಲ್, ಬಿಎಸ್ಎನ್ಎಲ್, ಮಂಗಳೂರು ರಿಫೈನರಿ ಮೊದಲಾದ ಸಂಸ್ಥೆಗಳು ಈ ಪಟ್ಟಿಯಲ್ಲಿವೆ. ಎರಡನೆ ಮಿನಿರತ್ನ ಪಟ್ಟಿಯಲ್ಲಿ ಎಚ್ಎಂಟಿ ಸೇರಿದಂತೆ 11 ಸಂಸ್ಥೆಗಳಿವೆ.
ಇದನ್ನೂ ಓದಿ: ಎಲೆಕ್ಟ್ರಿಕ್ ದ್ವಿಚಕ್ರ ವಾಹಗಳಿಗೆ 10,000 ರೂ ಸಬ್ಸಿಡಿ; 2025ರ ಮಾರ್ಚ್ವರೆಗೂ ಮಾತ್ರ ಈ ಕೊಡುಗೆ
25 ನವರತ್ನ ಸಂಸ್ಥೆಗಳು
- ಬಿಇಎಲ್
- ಕಂಟೇನರ್ ಕಾರ್ಪೊರೇಶನ್
- ಎಂಜಿನಿಯರ್ಸ್ ಇಂಡಿಯಾ
- ಎಚ್ಎಎಲ್
- ಎಂಟಿಎನ್ಎಲ್
- ನ್ಯಾಷನಲ್ ಅಲೂಮಿನಿಯಮ್ ಕಂಪನಿ
- ನ್ಯಾಷನಲ್ ಬಿಲ್ಡಿಂಗ್ಸ್ ಕನ್ಸ್ಟ್ರಕ್ಷನ್ ಕಾರ್ಪೊರೇಶನ್
- ನೇಯ್ವೇಲಿ ಲಿಗ್ನೈಟ್ ಕಾರ್ಪೊರೇಶನ್
- ಎನ್ಎಂಡಿಸಿ
- ರಾಷ್ಟ್ರೀಯ ಇಸ್ಪಾಟ್ ನಿಗಮ್
- ಶಿಪ್ಪಿಂಗ್ ಕಾರ್ಪೊರೇಶನ್
- ರೈಲ್ ವಿಕಾಸ್ ನಿಗಮ್
- ಒಎನ್ಜಿಸಿ ವಿದೇಶ್
- ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್
- ಇರ್ಕಾನ್
- ರೈಟ್ಸ್
- ನ್ಯಾಷನಲ್ ಫರ್ಟಿಲೈಸರ್ಸ್
- ಸೆಂಟ್ರಲ್ ವೇರ್ಹೌಸಿಂಗ್ ಕಾರ್ಪೊರೇಶನ್
- ಹೌಸಿಂಗ್ ಅಂಡ್ ಅರ್ಬನ್ ಡೆವಲಪ್ಮೆಂಟ್ ಕಾರ್ಪೊರೇಶನ್
- ಇಂಡಿಯನ್ ರಿನಿವಬಲ್ ಎನರ್ಜಿ ಡೆವಲಪ್ಮೆಂಟ್ ಏಜೆನ್ಸಿ
- ಮಜಗಾನ್ ಡಾಕ್ ಶಿಪ್ಬಿಲ್ಡರ್ಸ್
- ರೈಲ್ಟೆಲ್ ಕಾರ್ಪೊರೇಶನ್
- ಸೋಲಾರ್ ಎನರ್ಜಿ ಕಾರ್ಪೊರೇಶನ್
- ಎನ್ಎಚ್ಪಿಸಿ
- ಎಸ್ಜೆವಿಎನ್
ಇದನ್ನೂ ಓದಿ: ಬೆಂಗಳೂರಿನ ಹೊಸಕೋಟೆಯಲ್ಲಿ ಬಿಸಿಡಿ ಟೌನ್ಶಿಪ್; ಮಹಿಳಾ ಫಾಕ್ಸ್ಕಾನ್ ಉದ್ಯೋಗಿಗಳಿಗೆ 900 ಅಪಾರ್ಟ್ಮೆಂಟ್ಸ್
ಮಹಾರತ್ನ ಪಿಎಸ್ಯುಗಳು
- ಬಿಎಚ್ಇಎಲ್
- ಬಿಪಿಸಿಎಲ್
- ಕೋಲ್ ಇಂಡಿಯಾ
- ಜಿಎಐಎಲ್ ಇಂಡಿಯಾ
- ಎಚ್ಪಿಸಿಎಲ್
- ಐಒಸಿಎಲ್
- ಎನ್ಟಿಪಿಸಿ
- ಒಎನ್ಜಿಸಿ
- ಪವರ್ ಫೈನಾನ್ಸ್ ಕಾರ್ಪೊರೇಶನ್
- ಪವರ್ ಗ್ರಿಡ್ ಕಾರ್ಪೊರೇಶನ್
- ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಎಸ್ಎಐಎಲ್)
- ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಶನ್
- ಆಯಿಲ್ ಇಂಡಿಯಾ
ಈ ರೀತಿ ಒಂದೊಂದು ಸ್ಥಾನಮಾನಕ್ಕೂ ನಿರ್ದಿಷ್ಟ ಮಾನದಂಡಗಳನ್ನು ಇಡಲಾಗಿರುತ್ತದೆ. ಬಿಸಿನೆಸ್ ನಿರ್ವಹಣೆ, ಆಡಳಿತ ನಿರ್ವಹಣೆ, ಲಾಭ ಗಳಿಕೆ ಇತ್ಯಾದಿ ಮಾನದಂಡಗಳಿರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ