HDFC Bank Fixed Deposits: ಫಿಕ್ಸೆಡ್ ಡೆಪಾಸಿಟ್ಗಳ ಮೇಲಿನ ಬಡ್ಡಿ ದರ ಪರಿಷ್ಕರಣೆ ಮಾಡಿದ ಎಚ್‌ಡಿಎಫ್‌ಸಿ ಬ್ಯಾಂಕ್
ಎಚ್‌ಡಿಎಫ್‌ಸಿ ಬ್ಯಾಂಕ್ ಡಿಸೆಂಬರ್ 1, 2021ರಿಂದ ಅನ್ವಯ ಆಗುವಂತೆ ಫಿಕ್ಸೆಡ್ ಡೆಪಾಸಿಟ್ಗಳ ಮೇಲೆ ಬಡ್ಡಿ ದರವನ್ನು ಪರಿಷ್ಕರಣೆ ಮಾಡಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಗ್ರಾಹಕರಿಗೆ ನಿಶ್ಚಿತ ಠೇವಣಿ (ಎಫ್‌ಡಿ) ಮೇಲೆ ನೀಡುವ ಬಡ್ಡಿದರಗಳನ್ನು ಹೆಚ್ಚಿಸಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣದುಬ್ಬರದ ಟ್ರೆಂಡ್ಗಳ ಹಿನ್ನೆಲೆಯಲ್ಲಿ ಬ್ಯಾಂಕ್ ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು. ಡಿಸೆಂಬರ್ 1ರಿಂದ ಪ್ರಾರಂಭ ಆಗುವಂತೆ ಎಫ್.ಡಿ/ಗಳ ಮೇಲೆ ಹೆಚ್ಚಿದ ಬಡ್ಡಿದರಗಳು ಅನ್ವಯ ಆಗುತ್ತವೆ. ಎಚ್‌ಡಿಎಫ್‌ಸಿ ಬ್ಯಾಂಕ್ ಅನೇಕ ಅವಧಿಗಳಲ್ಲಿ ನಿಶ್ಚಿತ ಠೇವಣಿಗಳ ಮೇಲೆ 10 ಬೇಸಿಸ್ ಪಾಯಿಂಟ್ಗಳವರೆಗೆ ದರಗಳನ್ನು ಹೆಚ್ಚಿಸಿದೆ. ಉದಾಹರಣೆಗೆ, ಗ್ರಾಹಕರು ಈಗ 36 ತಿಂಗಳ ಮುಕ್ತಾಯದ ಅವಧಿಯೊಂದಿಗೆ ಠೇವಣಿಗಳ ಮೇಲೆ ಶೇಕಡಾ 6.10 ಬಡ್ಡಿದರವನ್ನು ಪಡೆಯುತ್ತಾರೆ. ಈ ಹಿಂದೆ, ಹೂಡಿಕೆದಾರರು ಅಂತಹ ಎಫ್‌ಡಿಗಳ ಮೇಲೆ ಶೇಕಡಾ 6.05 ಬಡ್ಡಿಯನ್ನು ಪಡೆಯುತ್ತಿದ್ದರು.
60 ತಿಂಗಳ ಅವಧಿಯ ನಿಶ್ಚಿತ ಠೇವಣಿಗಳಿಗೆ, ಹೂಡಿಕೆದಾರರು ಶೇಕಡಾ 6.5ರ ದರದಲ್ಲಿ ಬಡ್ಡಿಯನ್ನು ಸ್ವೀಕರಿಸುತ್ತಾರೆ. ಬ್ಯಾಂಕ್ ತನ್ನ ನಿಶ್ಚಿತ ಠೇವಣಿ ಗ್ರಾಹಕರಿಗೆ ಈ ಹಿಂದೆ ಶೇ 6.4ರ ಬಡ್ಡಿದರ ನೀಡುತ್ತಿತ್ತು. ಅಲ್ಲದೆ, ಖಾಸಗಿ ಬ್ಯಾಂಕ್ನೊಂದಿಗೆ ನಿಶ್ಚಿತ ಠೇವಣಿ ಖಾತೆಗಳನ್ನು ತೆರೆಯುವ ಹಿರಿಯ ನಾಗರಿಕರಿಗೆ 25 ಬೇಸಿಸ್ ಪಾಯಿಂಟ್‌ಗಳ ಹೆಚ್ಚುವರಿ ಬಡ್ಡಿದರ ನೀಡುವುದನ್ನು ಮುಂದುವರಿಸುತ್ತದೆ. ಮತ್ತೊಂದೆಡೆ, ಐಸಿಐಸಿಐ ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗೆ ನಿಶ್ಚಿತ ಠೇವಣಿಗಳ (ಎಫ್‌ಡಿ) ಬಡ್ಡಿದರಗಳನ್ನು ಪರಿಷ್ಕರಿಸಿದೆ. ಈ ಪರಿಷ್ಕೃತ ಬಡ್ಡಿದರಗಳು ಹೊಸ ಠೇವಣಿಗಳಿಗೆ ಮತ್ತು ಅಸ್ತಿತ್ವದಲ್ಲಿರುವ ಅವಧಿಯ ಠೇವಣಿಗಳ ನವೀಕರಣ ಎರಡಕ್ಕೂ ಅನ್ವಯಿಸುತ್ತವೆ ಎಂದು ಬ್ಯಾಂಕ್ ಹೇಳಿದೆ.
ಐಸಿಐಸಿಐ ಬ್ಯಾಂಕ್ ಕನಿಷ್ಠ ಏಳು ದಿನಗಳ ಅವಧಿಯೊಂದಿಗೆ ಎಫ್.ಡಿ. ಹೂಡಿಕೆಗಳನ್ನು ನೀಡುತ್ತದೆ. ಖಾತೆ ತೆರೆದ ಏಳು ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಹಿಂಪಡೆಯಲಾದ ಠೇವಣಿಗಳ ಮೇಲೆ ಗ್ರಾಹಕರು ಯಾವುದೇ ಬಡ್ಡಿಯನ್ನು ಪಡೆಯುವುದಿಲ್ಲ. ಎನ್‌ಆರ್‌ಇ ಖಾತೆಗಳಿಗೆ (ಎನ್‌ಆರ್‌ಐಗಳು ತೆರೆದಿರುವ ಎಫ್‌ಡಿ ಖಾತೆಗಳು) ಕನಿಷ್ಠ ಅವಧಿ ಒಂದು ವರ್ಷ, ಅಂದರೆ ಹೂಡಿಕೆದಾರರು 1 ವರ್ಷದ ಮೊದಲು ಮೊತ್ತವನ್ನು ಹಿಂಪಡೆದರೆ, ನಂತರ ಅವರು ತಮ್ಮ ಹೂಡಿಕೆಯ ಮೇಲೆ ಯಾವುದೇ ಬಡ್ಡಿಯನ್ನು ಪಡೆಯುವುದಿಲ್ಲ.
ಇದನ್ನೂ ಓದಿ: Personal Finance: ಹಣದ ಎಮರ್ಜೆನ್ಸಿ ಇದ್ದಲ್ಲಿ ಎಫ್‌ಡಿ ಮೇಲೆ ಸಾಲ ತೆಗೆದುಕೊಳ್ಳೋದಾ ಅಥವಾ ಎಫ್‌ಡಿ ಮುರಿಸೋದಾ?