Housing Sales: 2022ರಲ್ಲಿ ಹೊಸ ಎತ್ತರಕ್ಕೇರಿದ ವಸತಿ ಮಾರಾಟ, ಬೆಂಗಳೂರಿನಲ್ಲೂ ಹೆಚ್ಚಳ

ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕ ಅವಧಿಯಲ್ಲಿ ದೇಶದ ಪ್ರಮುಖ 7 ನಗರಗಳಲ್ಲಿ ವಸತಿ ಮಾರಾಟ ಗಣನೀಯವಾಗಿ ಹೆಚ್ಚಾಗಿದೆ ಎಂದು ವರದಿಯಾಗಿದೆ.

Housing Sales: 2022ರಲ್ಲಿ ಹೊಸ ಎತ್ತರಕ್ಕೇರಿದ ವಸತಿ ಮಾರಾಟ, ಬೆಂಗಳೂರಿನಲ್ಲೂ ಹೆಚ್ಚಳ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Oct 26, 2022 | 2:44 PM

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕ ಅವಧಿಯಲ್ಲಿ ದೇಶದ ಪ್ರಮುಖ 7 ನಗರಗಳಲ್ಲಿ ವಸತಿ ಮಾರಾಟ (Housing Sales) ಗಣನೀಯವಾಗಿ ಹೆಚ್ಚಾಗಿದೆ. ಈ ಹಿಂದಿನ ಗರಿಷ್ಠ ಮಟ್ಟವನ್ನು ಮೀರಿದೆ ಎಂದು ವರದಿಯಾಗಿದೆ. ಅನರಾಕ್ ಪ್ರಾಪರ್ಟಿ ಕನ್ಸಲ್ಟೆಂಟ್ಸ್ (ANAROCK Property Consultants) ದತ್ತಾಂಶಗಳ ಪ್ರಕಾರ, ದೇಶದ ಪ್ರಮುಖ 7 ನಗರಗಳಲ್ಲಿ 2022ರ ಮೊದಲ ಮೂರು ತ್ರೈಮಾಸಿಕ ಅವಧಿಯಲ್ಲಿ ವಸತಿ ಮಾರಾಟ 3.6 ಲಕ್ಷ ದಾಟಿದೆ. 2014ರಲ್ಲಿ ಇದು 3.43 ಲಕ್ಷ ಇತ್ತು ಎನ್ನಲಾಗಿದೆ.

2022ರ ಜನವರಿ – ಸೆಪ್ಟೆಂಬರ್ ಅವಧಿಯಲ್ಲಿ ವಸತಿ ಮಾರಾಟವು 2019ರ ಇಡೀ ವರ್ಷದ ಅಂದಾಜು ಮಾರಾಟವನ್ನು ಮೀರಿತ್ತು. 2022ರಲ್ಲಿ ಈಗಾಗಲೇ 2.73 ಲಕ್ಷ ಯೂನಿಟ್ ಮಾರಾಟವಾಗಿದ್ದು, 2.65 ಲಕ್ಷ ಯೂನಿಟ್ ಸಿದ್ಧವಾಗುತ್ತಿವೆ. 2019ರಲ್ಲಿ ಇಡೀ ವರ್ಷದಲ್ಲಿ 2.61 ಲಕ್ಷ ಯೂನಿಟ್ ಮಾರಾಟವಾಗಿದ್ದರೆ ಈ ವರ್ಷದ ಹೊಸ ಪೂರೈಕೆಯು 2.34 ಲಕ್ಷ ಯೂನಿಟ್ ತಲುಪಿದೆ ಎಂದು ಅನರಾಕ್ ದತ್ತಾಂಶಗಳನ್ನು ಉಲ್ಲೇಖಿಸಿ ‘ಫೈನಾನ್ಶಿಯಲ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ಇದನ್ನೂ ಓದಿ: CCI Fine on Google: ಬಳಕೆದಾರರು, ಡೆವಲಪರ್​ಗಳಿಗೆ ಬದ್ಧರಾಗಿದ್ದೇವೆ; ಸಿಸಿಐ ದಂಡಕ್ಕೆ ಗೂಗಲ್ ಪ್ರತಿಕ್ರಿಯೆ

ಇದನ್ನೂ ಓದಿ
Banking Frauds: ಆನ್​ಲೈನ್ ಮಾರುಕಟ್ಟೆಯಲ್ಲಿ ವ್ಯವಹರಿಸುವಾಗ ಹೀಗೆ ಮೋಸ ಹೋಗಬೇಡಿ
CCI Fine on Google: ಬಳಕೆದಾರರು, ಡೆವಲಪರ್​ಗಳಿಗೆ ಬದ್ಧರಾಗಿದ್ದೇವೆ; ಸಿಸಿಐ ದಂಡಕ್ಕೆ ಗೂಗಲ್ ಪ್ರತಿಕ್ರಿಯೆ
Tech Stocks: ಗೂಗಲ್, ಮೈಕ್ರೋಸಾಫ್ಟ್ ನಿರಾಶಾದಾಯಕ ಫಲಿತಾಂಶ; ಐಟಿ ಷೇರುಗಳಲ್ಲಿ ಕುಸಿತ
Pre-approved Personal Loan: ಪ್ರಿ ಅಪ್ರೂವ್ಡ್ ಪರ್ಸನಲ್ ಲೋನ್, ಅನಿವಾರ್ಯವಿದ್ದರಷ್ಟೇ ಪಡೆಯಿರಿ

ವಸತಿ ಮಾರಾಟ ವಿಚಾರದಲ್ಲಿ ಮುಂಬೈ ಮೆಟ್ರೋಪಾಲಿಟನ್ ರೀಜನ್ (MMR) ಹಾಗೂ ನ್ಯಾಷನಲ್ ಕ್ಯಾಪಿಟಲ್ ರೀಜನ್​ಗಳು (NCR) 2022ರ ಮೊದಲ 9 ತಿಂಗಳುಗಳಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿವೆ. ಈ ಎರಡು ನಗರ ಪ್ರದೇಶಗಳಲ್ಲಿ ಅಂದಾಜು 1,30,450 ಯೂನಿಟ್​ಗಳು ಮಾರಾಟವಾಗಿವೆ. ಇದು ಒಟ್ಟು ಏಳು ನಗರಗಳಲ್ಲಿ ಮಾರಾಟವಾದ ಯೂನಿಟ್​ಗಳ ಪೈಕಿ ಶೆಕಡಾ 48ರಷ್ಟಾಗಿದೆ.

ಬೆಂಗಳೂರಿನಲ್ಲೂ ಹೆಚ್ಚಿದ ಮಾರಾಟ

ವಸತಿ ಯೂನಿಟ್​ಗಳು ಹೆಚ್ಚು ಮಾರಾಟವಾದ ಇತರ ನಗರಗಳಲ್ಲಿ ಬೆಂಗಳೂರು ಕೂಡ ಸೇರಿದೆ. ಬೆಂಗಳೂರು, ಪುಣೆ, ಹೈದರಾಬಾದ್​ಗಳಲ್ಲಿ ಶೇಕಡಾ 42ರಷ್ಟು ಮಾರಾಟವಾಗಿದೆ. 2022 ರಲ್ಲಿ ಸರಾಸರಿ ಪ್ರಾಪರ್ಟಿ ಬೆಲೆಗಳಲ್ಲಿ ಏರಿಕೆಯಾಗಿದ್ದರೂ ವಸತಿ ಮಾರಾಟವು ಮೇಲ್ಮುಖವಾಗಿಯೇ ಸಾಗಿದೆ.

2022ನೇ ವರ್ಷವು ಭಾರತದ ವಸತಿ ಮಾರಾಟ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಲಿದೆ. ಈಗಾಗಲೇ ಈ ಹಿಂದಿನ ದಾಖಲೆಗಳನ್ನು ಹಿಂದಿಕ್ಕಲಾಗಿದ್ದು, ಹಬ್ಬದ ಅವಧಿಯಲ್ಲಿ ಮಾರಾಟ ಹೆಚ್ಚಿದೆ. ಕೋವಿಡೋತ್ತರ ಕಾಲಘಟ್ಟದಲ್ಲಿ ಗೃಹ ಮಾಲೀಕರಾಗುವ ಪ್ರಮಾಣ ಸಹಜ ಸ್ಥಿತಿಗೆ ಮರಳಿದೆ. ಆರ್​ಬಿಐ ರೆಪೊ ದರ ಹೆಚ್ಚಳ ಮಾಡಿದ ಹೊರತಾಗಿಯೂ ಜನ ಖರೀದಿಗೆ ಮುಂದಾಗುತ್ತಿದ್ದಾರೆ ಎಂದು ಅನರಾಕ್ ಸಮೂಹದ ಅಧ್ಯಕ್ಷ ಅನುಜ್ ಪುರಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ